ರಿಪ್ಪನ್‌ಪೇಟೆ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ತಾಲೂಕು ಪಂಚಾಯತ್ ಹೊಸನಗರ, ಮಕ್ಕಳ ರಕ್ಷಣಾ ಸಮಿತಿ, ಹೆಣ್ಣು ಮಕ್ಕಳ ಸುರಕ್ಷತಾ ಸಮಿತಿ, ಗ್ರಾಮ ಪಂಚಾಯತ್ ರಿಪ್ಪನ್‌ಪೇಟೆ ಹಾಗೂ ಪೊಲೀಸ್ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಆ.24 ಮತ್ತು 25ರಂದು ದೀರ್ಘಕಾಲದಿಂದ ಶಾಲೆಗೆ ಗೈರುಹಾಜರಾಗಿದ್ದ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವ ಜಾಗೃತಿ ಅಭಿಯಾನ ಯಶಸ್ವಿಯಾಗಿ ನಡೆಯಿತು.
ಅಭಿಯಾನದ ಅಂಗವಾಗಿ ತಂಡವು ಗೈರುಹಾಜರಾಗಿದ್ದ ಪ್ರತಿಯೊಬ್ಬ ವಿದ್ಯಾರ್ಥಿಯ ಮನೆಗೆ ಭೇಟಿ ನೀಡಿ, ಪೋಷಕರು ಹಾಗೂ ಮಕ್ಕಳೊಂದಿಗೆ ಸಮಾಲೋಚನೆ ನಡೆಸಿ ಶಿಕ್ಷಣದ ಮಹತ್ವವನ್ನು ತಿಳಿಸಿ ಶಾಲೆಗೆ ನಿಯಮಿತವಾಗಿ ಹಾಜರಾಗುವಂತೆ ಮನವೊಲಿಸಿತು.
ಈ ಅಭಿಯಾನದಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರಭಾರ ಉಪಪ್ರಾಂಶುಪಾಲರಾದ ಸುಧಾ ಹೆಗಡೆ, ಗ್ರಾಮ ಪಂಚಾಯತ್ ಕಾರ್ಯದರ್ಶಿಗಳು, ಬಿಆರ್‌ಪಿ ಮಂಜುಳಾ, ಸಿಆರ್‌ಪಿ ಮಂಜುನಾಥ್, ಪೊಲೀಸ್ ಕಾನ್ಸ್‌ಟೇಬಲ್ ನವೀನ್, ಪರಮೇಶ್, ಸಿಆರ್‌ಪಿ ನಾಗರಾಜ್, ಶಿಕ್ಷಕರಾದ ಶ್ರೀ ಚಂದ್ರಪ್ಪ ಕೆ., ಸುಷ್ಮಾ,ನಾಗವೇಣಿ ಹಾಗೂ ಪಂಚಾಯತ್ ಸಿಬ್ಬಂದಿಗಳಾದ ಲಕ್ಷ್ಮಿ ಮತ್ತು ಶಾಲಿನಿ ಸೇರಿದಂತೆ ಹಲವರು ಭಾಗವಹಿಸಿದ್ದರು.
ಅಭಿಯಾನದ ಫಲವಾಗಿ ಮೂವರು ವಿದ್ಯಾರ್ಥಿಗಳು ಪುನಃ ಶಾಲೆಗೆ ದಾಖಲಾತಿಯಾಗಿದ್ದು, ಉಳಿದ ವಿದ್ಯಾರ್ಥಿಗಳೂ ಶೀಘ್ರದಲ್ಲೇ ಶಾಲೆಗೆ ಹಾಜರಾಗುವ ಭರವಸೆ ನೀಡಿದ್ದಾರೆ.

















Leave a Reply