ರಿಪ್ಪನ್ಪೇಟೆ: 1926ರಲ್ಲಿ ಸ್ಥಾಪನೆಯಾಗಿ ಶತಮಾನ ಪೂರೈಸುತ್ತಿರುವ ರಿಪ್ಪನ್ಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಪಾಠಶಾಲೆಯ ಶತಮಾನೋತ್ಸವ ಸಂಭ್ರಮಾಚರಣೆಯ ಅಂಗವಾಗಿ ಗುರುವಾರ ಭೂಪಾಳಂ ಚಂದ್ರಶೇಖರಯ್ಯ ಸಭಾಭವನದಲ್ಲಿ ಹಳೆ ವಿದ್ಯಾರ್ಥಿಗಳ ಪೂರ್ವ ಸಿದ್ಧತಾ ಸಭೆ ನಡೆಯಿತು.

ಸಭೆಯಲ್ಲಿ ಕಳೆದ 100 ವರ್ಷಗಳಲ್ಲಿ ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ ವಿವಿಧ ಕ್ಷೇತ್ರಗಳಲ್ಲಿ ಉನ್ನತ ಹುದ್ದೆ ಅಲಂಕರಿಸಿರುವ ಅಧಿಕಾರಿಗಳು, ಶಿಕ್ಷಕರು, ಉದ್ಯಮಿಗಳು, ವ್ಯಾಪಾರಿಗಳು ಹಾಗೂ ದೇಶಸೇವೆಯಲ್ಲಿ ತೊಡಗಿರುವ ಹಳೆ ವಿದ್ಯಾರ್ಥಿಗಳನ್ನು ಸಂಪರ್ಕಿಸಿ ಸಮಾವೇಶ ನಡೆಸುವ ಕುರಿತು ಚರ್ಚಿಸಲಾಯಿತು. ಶೀಘ್ರದಲ್ಲೇ ಶತಮಾನೋತ್ಸವ ಸಮಿತಿಯನ್ನು ರಚಿಸಿ, ನೆನಪಿನಲ್ಲಿ ಉಳಿಯುವ ರೀತಿಯ ಭವ್ಯ ಕಾರ್ಯಕ್ರಮ ಆಯೋಜಿಸಲು ಹಲವು ಸಲಹೆಗಳು ವ್ಯಕ್ತವಾದವು.
ಮುಂದಿನ ಸೆಪ್ಟೆಂಬರ್ 10ರಂದು ಮುಂದಿನ ಸಭೆಯಲ್ಲಿ ಶತಮಾನೋತ್ಸವ ಆಚರಣೆ ಸಮಿತಿ ರಚಿಸಿ ರೂಪರೇಷೆ ಸಿದ್ಧಪಡಿಸಲು ಎಲ್ಲಾ ಹಳೆಯ ವಿದ್ಯಾರ್ಥಿಗಳು ಭಾಗವಹಿಸುವಂತೆ ಮುಖ್ಯ ಶಿಕ್ಷಕ ಅಶೋಕ್ ಅವರು ಮನವಿ ಮಾಡಿಕೊಂಡರು.
ಸಭೆಯಲ್ಲಿ ಎಸ್.ಡಿ. ಎಂ. ಸಿ ಅಧ್ಯಕ್ಷ ಮಂಜಪ್ಪ, ಆರ್.ಎ. ಚಾಬುಸಾಬ್, ಟಿ.ಆರ್. ಕೃಷ್ಣಪ್ಪ, ಶಿವಪ್ಪ ಬೈರಾಪುರ,ಸೋಮಪ್ಪ, ಪ್ರೇಮನಾಥ್, ಪಿ. ರಮೇಶ್, ಸಿ. ಚಂದ್ರಬಾಬು, ಸುಂದರೇಶ್, ಸುಧೀಂದ್ರ ಪೂಜಾರಿ,ಧನಲಕ್ಷ್ಮಿ, ನಿರೂಪ್ ಕುಮಾರ್ ಸೇರಿದಂತೆ ಅನೇಕ ಹಳೆ ವಿದ್ಯಾರ್ಥಿಗಳು ಹಾಜರಿದ್ದರು.

















Leave a Reply