ಹೊಸನಗರ: ಸರ್ಕಾರಿ ಶಾಲೆ-ಕಾಲೇಜುಗಳಿಗೆ ದಾನವಾಗಿ ನೀಡುವ ವಸ್ತುಗಳ ಬೆಲೆ ಅಥವಾ ಮೌಲ್ಯವನ್ನು ಯಾರೂ ಅಳೆಯಬಾರದು. ಪ್ರತಿಯೊಂದು ದಾನದ ಹಿಂದೆ ದಾನಿಗಳ ಶ್ರಮ, ಪ್ರೀತಿ ಮತ್ತು ಬೆವರು ಅಡಗಿರುತ್ತದೆ ಎಂದು ಹೊಸನಗರ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯಿನಿ ಲಿಲ್ಲಿ ಡಿಸೋಜ ಹೇಳಿದರು.
ಹೊಸನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯಲ್ಲಿ ಸುಮಾರು 60 ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್, ಪೆನ್ನು, ಪುಸ್ತಕ ಹಾಗೂ ಸ್ವೀಕರ್‌ಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಕುಂಟಿಗೆ ದಿನೇಶ್ ಚಂದ್ರಪ್ಪ ಹಾಗೂ ಅನ್ನಪೂರ್ಣೇಶ್ವರಿ ಟ್ರಾವೆಲ್ಸ್ ಮಾಲೀಕ ಸುಧೀರ್ ಅವರು ವಿದ್ಯಾರ್ಥಿಗಳಿಗೆ ಅಗತ್ಯ ಶೈಕ್ಷಣಿಕ ಸಾಮಗ್ರಿಗಳನ್ನು ದಾನವಾಗಿ ನೀಡಿದರು.

ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯಶಿಕ್ಷಕಿ ಸುಮನ, ಶಿಕ್ಷಕರಾ ಈಶ್ವರ್ ಪಾಟಗಾರ್, ಅನಿತಾ, ಇಂದುಶ್ರೀ, ಅಶ್ವಿನಿ, ಎಸ್‌ಡಿಎಂಸಿ ಅಧ್ಯಕ್ಷೆ ರೇಷ್ಮಾ, ಉಪಾಧ್ಯಕ್ಷೆ ಅರುಣಾ, ಸದಸ್ಯರಾದ ಗೋಪಾಲ್, ನೀಲು ತಾಜ್, ಗೀತಾ, ಸುಬ್ರಹ್ಮಣ್ಯ, ಹಳೆಯ ವಿದ್ಯಾರ್ಥಿಗಳಾದ ಸಂತೋಷ್ ಹಾಗೂ ಸುಲೋಚನಾ ಮಂಜುಳಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.
















Leave a Reply