ರಿಪ್ಪನ್ ಪೇಟೆ : ಸ.ಮಾ.ಹಿ. ಪ್ರಾಥಮಿಕ ಬಾಲಕರ ಪಾಠ ಶಾಲೆಗೆ ಶತಮಾನೋತ್ಸವ ಹಿನ್ನೆಲೆ|ಸೆ.3ರಂದು ಹಳೆಯ ವಿದ್ಯಾರ್ಥಿಗಳ ಪೂರ್ವಭಾವಿ ಸಭೆ

Addaheading 20260901 182344 0000 ರಿಪ್ಪನ್ ಪೇಟೆ : ಸ.ಮಾ.ಹಿ. ಪ್ರಾಥಮಿಕ ಬಾಲಕರ ಪಾಠ ಶಾಲೆಗೆ ಶತಮಾನೋತ್ಸವ ಹಿನ್ನೆಲೆ|ಸೆ.3ರಂದು ಹಳೆಯ ವಿದ್ಯಾರ್ಥಿಗಳ ಪೂರ್ವಭಾವಿ ಸಭೆ
Spread the love

ರಿಪ್ಪನ್‌ಪೇಟೆ: ರಿಪ್ಪನ್‌ಪೇಟೆಯ ಸರ್ಕಾರಿ ಮಾದರಿ ಬಾಲಕರ ಪಾಠ ಶಾಲೆಯ ಅಮೃತ ಮಹೋತ್ಸವ–2026 ಹಾಗೂ ಶತಮಾನೋತ್ಸವ ಕಾರ್ಯಕ್ರಮದ ಸಿದ್ಧತೆಗಳ ಅಂಗವಾಗಿ ಹಳೆಯ ವಿದ್ಯಾರ್ಥಿಗಳ ಪೂರ್ವಭಾವಿ ಸಭೆಯನ್ನು ಆಯೋಜಿಸಲಾಗಿದೆ.
  ಸಭೆಯು ಸೆಪ್ಟೆಂಬರ್ 3 ಗುರುವಾರ ಮಧ್ಯಾಹ್ನ 2 ಗಂಟೆಗೆ ಶಾಲಾ ಆವರಣದಲ್ಲಿ ನಡೆಯಲಿದ್ದು, ಶಾಲೆಯ ಎಲ್ಲಾ ಹಳೆಯ ವಿದ್ಯಾರ್ಥಿಗಳು ಹಾಗೂ ಹಿತೈಷಿಗಳು ತಪ್ಪದೇ ಭಾಗವಹಿಸುವಂತೆ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
  ಅಮೃತ ಮಹೋತ್ಸವ ಮತ್ತು ಶತಮಾನೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶದಿಂದ ಕಾರ್ಯಕ್ರಮದ ರೂಪರೇಷೆ, ಸಲಹೆ-ಸಹಕಾರ ಹಾಗೂ ಸಂಘಟನಾ ವಿಚಾರಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ. ಎಲ್ಲಾ ಹಳೆಯ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಆಗಮಿಸಿ ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸುವಂತೆ ಶಾಲೆಯ ಮುಖ್ಯೋಪಾಧ್ಯಾಯರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

file 000000003f5c8208a0b120fec3430d9d3517750586534660562 ರಿಪ್ಪನ್ ಪೇಟೆ : ಸ.ಮಾ.ಹಿ. ಪ್ರಾಥಮಿಕ ಬಾಲಕರ ಪಾಠ ಶಾಲೆಗೆ ಶತಮಾನೋತ್ಸವ ಹಿನ್ನೆಲೆ|ಸೆ.3ರಂದು ಹಳೆಯ ವಿದ್ಯಾರ್ಥಿಗಳ ಪೂರ್ವಭಾವಿ ಸಭೆ

Leave a Reply

Your email address will not be published. Required fields are marked *