ಹೊಸನಗರ: ಬಂಟರ ಯಾನೆ ನಾಡವರ ಸಂಘ (ಹೊಸನಗರ ತಾಲ್ಲೂಕು) ವತಿಯಿಂದ ಆರ್ಥಿಕವಾಗಿ ಹಿಂದುಳಿದ ನಾಡವರ ಸಮುದಾಯದ ಬಡ ಕುಟುಂಬಗಳಿಗೆ ಮನೆ ನಿರ್ಮಾಣಕ್ಕಾಗಿ ತಲಾ ₹50,000 ಧನಸಹಾಯ ವಿತರಿಸಲಾಯಿತು.
ಸಂಘದ ಅಧ್ಯಕ್ಷ ದಿವಾಕರ್ ಶೆಟ್ಟಿ ಮಾತನಾಡಿ, ಸಮಾಜದ ಸೇವೆಗಾಗಿ ಸಂಘ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದು, ಅಗತ್ಯವಿರುವ ಕುಟುಂಬಗಳನ್ನು ಗುರುತಿಸಿ ನೆರವು ನೀಡುವ ಕೆಲಸ ಮಾಡುತ್ತಿದೆ ಎಂದರು.

ಈ ಯೋಜನೆಯಡಿ ಮಾರಿಗುಡ್ಡದ ಕಲಾವತಿ ಮಂಜುನಾಥ್ ಶೆಟ್ಟಿ ಹಾಗೂ ಮಾರುತಿಪುರ ಹೋಬಳಿಯ ಹುಣಸೆಕೊಪ್ಪದ ಸಂಜೀವ ಶೆಟ್ಟಿ ಅವರಿಗೆ ಮನೆ ನಿರ್ಮಾಣಕ್ಕಾಗಿ ತಲಾ ₹50 ಸಾವಿರದ ಚೆಕ್ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಘಟನಾ ಕಾರ್ಯದರ್ಶಿ ಚಂದ್ರಶೆಟ್ಟಿ, ಕಾರ್ಯದರ್ಶಿ ನಾಗರಾಜ್ ಶೆಟ್ಟಿ, ಉಪಾಧ್ಯಕ್ಷ ಚಂದ್ರಶೇಖರ ಶೆಟ್ಟಿ, ಭರತ್ ಶೆಟ್ಟಿ, ಉಮೇಶ್ ಶೆಟ್ಟಿ, ರಾಮಣ್ಣ ಶೆಟ್ಟಿ, ನವೀನ್ ಶೆಟ್ಟಿ, ಮಹಿಳಾ ಸದಸ್ಯರು ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

















Leave a Reply