ಹೊಸನಗರ: ಹೊಸನಗರದ ಕೊಡಚಾದ್ರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ನಡೆಯುತ್ತಿರುವ ಜನಗಣತಿ ತರಬೇತಿ ಕೇಂದ್ರಕ್ಕೆ ಸಾಗರ ಉಪವಿಭಾಗಾಧಿಕಾರಿ ಡಾ.ವೀರೇಶಕುಮಾರ್ ಅವರು ಭೇಟಿ ನೀಡಿ ಮೂರು ದಿನಗಳ ತರಬೇತಿ ಯಾವ ರೀತಿಯಲ್ಲಿ ನಡೆಯುತ್ತಿದೆ ಎಂಬುದನ್ನು ಪರಿಶೀಲಿಸಿದರು. ಜೊತೆಗೆ ಏಪ್ರಿಲ್ 15ರಿಂದ ನಡೆಯುವ ಜನಗಣತಿಯಲ್ಲಿ ನೇಮಕವಾಗಿರುವ ಎಲ್ಲಾ ಸಿಬ್ಬಂದಿ ಕಾರ್ಯನಿರ್ವಹಣೆಯ ಕುರಿತು ಮಾರ್ಗದರ್ಶನ ನೀಡಿದರು.
ಈ ಸಂದರ್ಭದಲ್ಲಿ ಹೊಸನಗರದ ತಹಶೀಲ್ದಾರ್ ಭರತ್ರಾಜ್, ಕ್ಷೇತ್ರ ಶಿಕ್ಷಣಾಧಿಕಾರಿ ಗಣೇಶ್ ವೈ ಹಾಗೂ ಜನಗಣತಿ ಸಿಬ್ಬಂದಿಗಳು ಉಪಸ್ಥಿತರಿದ್ದರು.

















Leave a Reply