ವಿಷಮುಕ್ತ ಆಹಾರ ಸೇವನೆ ನಮ್ಮೆಲ್ಲರ ಜವಾಬ್ದಾರಿ: ಕೃಷಿ ಇಲಾಖೆ ಯಿಂದ ಜಾಗೃತಿ

Add a heading 20260722 170853 0000 ವಿಷಮುಕ್ತ ಆಹಾರ ಸೇವನೆ ನಮ್ಮೆಲ್ಲರ ಜವಾಬ್ದಾರಿ: ಕೃಷಿ ಇಲಾಖೆ ಯಿಂದ ಜಾಗೃತಿ
Spread the love

ರಿಪ್ಪನ್‌ಪೇಟೆ: ಕೃಷಿಯಲ್ಲಿ ರಾಸಾಯನಿಕಗಳ ಅತಿಯಾದ ಬಳಕೆಯಿಂದ ಭೂಮಿಯ ಆರೋಗ್ಯ ಹದಗೆಡುವುದರ ಜೊತೆಗೆ ಆಹಾರದಲ್ಲೂ ವಿಷಕಾರಿ ಅಂಶಗಳು ಸೇರ್ಪಡೆಯಾಗಿ ಮಾನವನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿವೆ. ಆದ್ದರಿಂದ ರಾಸಾಯನಿಕಗಳ ಬಳಕೆಯನ್ನು ಕಡಿಮೆ ಮಾಡಿ ಸಾವಯವ ಕೃಷಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಹೊಸನಗರ ತಾಲ್ಲೂಕು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ವೀರಭದ್ರಪ್ಪ ರೈತರಿಗೆ ಕರೆ ನೀಡಿದರು.

img 20260110 wa0000299689993397262483 ವಿಷಮುಕ್ತ ಆಹಾರ ಸೇವನೆ ನಮ್ಮೆಲ್ಲರ ಜವಾಬ್ದಾರಿ: ಕೃಷಿ ಇಲಾಖೆ ಯಿಂದ ಜಾಗೃತಿ

ಸಮೀಪದ ಅಮೃತ ಗ್ರಾಮದಲ್ಲಿ ಕೃಷಿ ಇಲಾಖೆಯಿಂದ ಪಿಎಂ-ಆರ್‌ಕೆವಿವೈ ಯೋಜನೆಯಡಿ ಆಯೋಜಿಸಿದ್ದ ಕೀಟನಾಶಕಗಳ ಸುರಕ್ಷಿತ ಮತ್ತು ವಿವೇಚನಾಯುಕ್ತ ಬಳಕೆ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇರುವಕ್ಕಿ ಕೃಷಿ ವಿಶ್ವವಿದ್ಯಾಲಯದ ಕೀಟಶಾಸ್ತ್ರ ವಿಜ್ಞಾನಿ ನವೀನ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ರೋಗ ಹಾಗೂ ಕೀಟ ನಿಯಂತ್ರಣಕ್ಕೆ ಅಗತ್ಯವಿರುವ ಪ್ರಮಾಣದ ರಾಸಾಯನಿಕಗಳನ್ನು ಮಾತ್ರ ಬಳಸಬೇಕು ಎಂದು ಸಲಹೆ ನೀಡಿದರು. ಕೀಟನಾಶಕ ಬಳಕೆಗೆ ಮುನ್ನ ಅದರ ಲೇಬಲ್‌ನಲ್ಲಿರುವ ಸೂಚನೆಗಳನ್ನು ಕಡ್ಡಾಯವಾಗಿ ಓದಬೇಕು, ಸಿಂಪರಣೆ ವೇಳೆ ಸುರಕ್ಷತಾ ಉಪಕರಣಗಳನ್ನು ಧರಿಸಬೇಕು ಹಾಗೂ ಬಳಕೆ ಮುಗಿದ ನಂತರ ಖಾಲಿ ಬಾಟಲಿಗಳನ್ನು ಸುರಕ್ಷಿತವಾಗಿ ಮಣ್ಣಿನಲ್ಲಿ ಹೂಳಬೇಕು ಎಂದು ವಿವರಿಸಿದರು.

ಕ್ಯಾಂಪ್ಕೋ ನಿರ್ದೇಶಕ ಹೆಚ್.ಎಂ. ರಾಘವೇಂದ್ರ ಮಾತನಾಡಿ, ರೈತರು ಸಾವಯವ ಕೃಷಿಯನ್ನು ಅಳವಡಿಸಿಕೊಂಡರೆ ಮಾತ್ರ ಆರೋಗ್ಯಕರ ಜೀವನ ಸಾಧ್ಯ. ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳ ಬಳಕೆಯನ್ನು ಕಡಿಮೆ ಮಾಡಿ, ಸಾವಯವ ಗೊಬ್ಬರ ಮತ್ತು ಸಾವಯವ ಪೀಡೆನಾಶಕಗಳನ್ನು ಬಳಸುವ ಮೂಲಕ ಮಣ್ಣಿನ ಫಲವತ್ತತೆ ಹಾಗೂ ಮಾನವ ಆರೋಗ್ಯವನ್ನು ಕಾಪಾಡಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬಶೀರ್ ಅಹಮ್ಮದ್, ರಾಮಚಂದ್ರ ಬಂಡಿ, ಸೋಮಶೇಖರ ತಾರಿಗಾ, ಲಿಂಗರಾಜ್, ಕೃಷಿ ಇಲಾಖೆಯ ತಾಂತ್ರಿಕ ವ್ಯವಸ್ಥಾಪಕ ರವಿಕುಮಾರ್ ಸೇರಿದಂತೆ ರೈತರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *