ಜಮೀನು ಪಕ್ಕಾಪೋಡಿಗೆ ಆಗ್ರಹಿಸಿ ತಾಲೂಕು ಕಚೇರಿ ಆವರಣದಲ್ಲಿ  ರೈತನ ಧರಣಿ – “ವರ್ಷಗಳಿಂದ ಕಚೇರಿಗೆ ಅಲೆದಿದ್ದೇನೆ” : ರಾಮನಾಯ್ಕ್

ನಿವೃತ್ತ ಸೈನಿಕ ಕೆ.ವಿ ಕೃಷ್ಣಮೂರ್ತಿಗೆ ರಿಪ್ಪನ್‌ಪೇಟೆಯಲ್ಲಿ ಅದ್ದೂರಿ ಸ್ವಾಗತ 20260602 234415 0000 ಜಮೀನು ಪಕ್ಕಾಪೋಡಿಗೆ ಆಗ್ರಹಿಸಿ ತಾಲೂಕು ಕಚೇರಿ ಆವರಣದಲ್ಲಿ  ರೈತನ ಧರಣಿ - “ವರ್ಷಗಳಿಂದ ಕಚೇರಿಗೆ ಅಲೆದಿದ್ದೇನೆ” : ರಾಮನಾಯ್ಕ್
Spread the love

ರೈತನ ಧರಣಿಗೆ ಸ್ಪಂದಿಸಿದ ಶಾಸಕ ಆರಗ ಜ್ಞಾನೇಂದ್ರ

img 20260110 wa00002339987653725069587 ಜಮೀನು ಪಕ್ಕಾಪೋಡಿಗೆ ಆಗ್ರಹಿಸಿ ತಾಲೂಕು ಕಚೇರಿ ಆವರಣದಲ್ಲಿ  ರೈತನ ಧರಣಿ - “ವರ್ಷಗಳಿಂದ ಕಚೇರಿಗೆ ಅಲೆದಿದ್ದೇನೆ” : ರಾಮನಾಯ್ಕ್
img 20260324 wa00563428130573409476967 ಜಮೀನು ಪಕ್ಕಾಪೋಡಿಗೆ ಆಗ್ರಹಿಸಿ ತಾಲೂಕು ಕಚೇರಿ ಆವರಣದಲ್ಲಿ  ರೈತನ ಧರಣಿ - “ವರ್ಷಗಳಿಂದ ಕಚೇರಿಗೆ ಅಲೆದಿದ್ದೇನೆ” : ರಾಮನಾಯ್ಕ್

ಹೊಸನಗರ : ಮೀನು ಪಕ್ಕಾಪೋಡಿ ಪ್ರಕ್ರಿಯೆ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವುದನ್ನು ಖಂಡಿಸಿ ರೈತನೊಬ್ಬ ಮಂಗಳವಾರ ಹೊಸನಗರ ತಾಲ್ಲೂಕು ಕಚೇರಿ ಆವರಣದಲ್ಲಿ ಏಕಾಂಗಿಯಾಗಿ ಧರಣಿ ನಡೆಸಿ ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದರು.

ಮೇಲಿನಬೇಸಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್.ಗುಡ್ಡೆಕೊಪ್ಪ ಗ್ರಾಮದ ನಿವಾಸಿ ರಾಮನಾಯ್ಕ ಧರಣಿ ನಡೆಸಿದ ರೈತ. ತಮ್ಮ ಕುಟುಂಬಕ್ಕೆ ಸುಮಾರು ಐವತ್ತು ವರ್ಷಗಳ ಹಿಂದೆ 4 ಎಕರೆ ಸಾಗುವಳಿ ಜಮೀನು ಮಂಜೂರಾಗಿದ್ದರೂ, ಇದುವರೆಗೆ ಪಕ್ಕಾಪೋಡಿ ಕಾರ್ಯ ಪೂರ್ಣಗೊಂಡಿಲ್ಲ ಎಂದು ಆರೋಪಿಸಿದರು.

ಜಮೀನಿನ ದಾಖಲೆ ಸಂಬಂಧ ಹಲವು ವರ್ಷಗಳಿಂದ ವಿವಿಧ ಇಲಾಖೆಗಳ ಕಚೇರಿಗಳಿಗೆ ಅಲೆದಾಡುತ್ತಿದ್ದರೂ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಅರಣ್ಯ ಇಲಾಖೆಯ ಅಭಿಪ್ರಾಯ ಬಾಕಿ ಇದೆ ಎಂದು ಅಧಿಕಾರಿಗಳು ಹೇಳುತ್ತಾ ಕಾಲಹರಣ ಮಾಡುತ್ತಿದ್ದಾರೆ. ಬಡ ರೈತರ ಸಮಸ್ಯೆಗಳಿಗೆ ಸ್ಪಂದನೆ ಸಿಗದೇ ನಾವು ಸಂಕಷ್ಟ ಅನುಭವಿಸುತ್ತಿದ್ದೇವೆ ಎಂದು ರಾಮನಾಯ್ಕ ಬೇಸರ ವ್ಯಕ್ತಪಡಿಸಿದರು.

“ವರ್ಷಗಳಿಂದ ಕಚೇರಿಗಳ ಸುತ್ತಲೇ ತಿರುಗುತ್ತಿದ್ದೇವೆ. ಸರಿಯಾದ ಮಾಹಿತಿ ನೀಡುವವರೂ ಇಲ್ಲ, ಸಮಸ್ಯೆ ಬಗೆಹರಿಸುವವರೂ ಇಲ್ಲ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ತಾಲ್ಲೂಕು ಕಚೇರಿಯಲ್ಲಿ ರೈತ ಧರಣಿ ನಡೆಸುತ್ತಿರುವಾಗ ಶಾಸಕ ಆರಗ ಜ್ಞಾನೇಂದ್ರ ಅವರ ಆಪ್ತ ಸಹಾಯಕ ರಾಜೇಶ್ ಹಿರಿಯಮನೆ ರೈತನ ಸಮಸ್ಯೆಗಳನ್ನು ಆಲಿಸಿದ ಬಳಿಕ, ಶಾಸಕರ  ಸೂಚನೆಯಂತೆ ತಹಶೀಲ್ದಾರ್ ಭರತ್ ರಾಜ್ ಸ್ಥಳಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದರು. ಸಂಬಂಧಿತ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ನಂತರ ರಾಮನಾಯ್ಕ ಧರಣಿ ಹಿಂಪಡೆದರು.

ಧರಣಿ ಸಂದರ್ಭದಲ್ಲಿ ಶಾಸಕರ ಆಪ್ತ ಸಹಾಯಕ ರಾಜೇಶ್ ಹಿರಿಮನೆ, ತ.ಮ ನರಸಿಂಹ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಉಮೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

img 20260515 wa00063026858308187818532 ಜಮೀನು ಪಕ್ಕಾಪೋಡಿಗೆ ಆಗ್ರಹಿಸಿ ತಾಲೂಕು ಕಚೇರಿ ಆವರಣದಲ್ಲಿ  ರೈತನ ಧರಣಿ - “ವರ್ಷಗಳಿಂದ ಕಚೇರಿಗೆ ಅಲೆದಿದ್ದೇನೆ” : ರಾಮನಾಯ್ಕ್
img 20260427 wa00133424143299665512590 ಜಮೀನು ಪಕ್ಕಾಪೋಡಿಗೆ ಆಗ್ರಹಿಸಿ ತಾಲೂಕು ಕಚೇರಿ ಆವರಣದಲ್ಲಿ  ರೈತನ ಧರಣಿ - “ವರ್ಷಗಳಿಂದ ಕಚೇರಿಗೆ ಅಲೆದಿದ್ದೇನೆ” : ರಾಮನಾಯ್ಕ್

Leave a Reply

Your email address will not be published. Required fields are marked *