ಮಳೆಗಾಲದ ಮೊದಲ ಮಳೆಯಲ್ಲೇ ಗಂಗನಕೊಪ್ಪದ ಅವ್ಯವಸ್ಥೆ ಬಯಲು; ಚರಂಡಿ, ರಸ್ತೆ ಸಮಸ್ಯೆಗೆ ಗ್ರಾಮಸ್ಥರ ಆಕ್ರೋಶ!

Screenshot 20260611 204419 Canva ಮಳೆಗಾಲದ ಮೊದಲ ಮಳೆಯಲ್ಲೇ ಗಂಗನಕೊಪ್ಪದ ಅವ್ಯವಸ್ಥೆ ಬಯಲು; ಚರಂಡಿ, ರಸ್ತೆ ಸಮಸ್ಯೆಗೆ ಗ್ರಾಮಸ್ಥರ ಆಕ್ರೋಶ!
Spread the love
img 20260110 wa00002762600090731536206 ಮಳೆಗಾಲದ ಮೊದಲ ಮಳೆಯಲ್ಲೇ ಗಂಗನಕೊಪ್ಪದ ಅವ್ಯವಸ್ಥೆ ಬಯಲು; ಚರಂಡಿ, ರಸ್ತೆ ಸಮಸ್ಯೆಗೆ ಗ್ರಾಮಸ್ಥರ ಆಕ್ರೋಶ!

ಹೊಸನಗರ: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸಚಿವ ಸ್ಥಾನಕ್ಕಾಗಿ ರಾಜಕೀಯ ಚಟುವಟಿಕೆಗಳು ಭರದಿಂದ ಸಾಗುತ್ತಿರುವ ನಡುವೆಯೇ, ಹೊಸನಗರ ತಾಲ್ಲೂಕಿನ ಗ್ರಾಮೀಣ ಭಾಗಗಳಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಯಿಂದ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಎಂ. ಗುಡ್ಡೆಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಂಗನಕೊಪ್ಪ ಗ್ರಾಮದಲ್ಲಿ ಚರಂಡಿ, ರಸ್ತೆ ಹಾಗೂ ಕುಡಿಯುವ ನೀರಿನ ಸಮಸ್ಯೆಗಳು ತೀವ್ರಗೊಂಡಿದ್ದು, ಸ್ಥಳೀಯರು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

img 20260611 wa00416905198793185457011 ಮಳೆಗಾಲದ ಮೊದಲ ಮಳೆಯಲ್ಲೇ ಗಂಗನಕೊಪ್ಪದ ಅವ್ಯವಸ್ಥೆ ಬಯಲು; ಚರಂಡಿ, ರಸ್ತೆ ಸಮಸ್ಯೆಗೆ ಗ್ರಾಮಸ್ಥರ ಆಕ್ರೋಶ!

ಗಂಗನಕೊಪ್ಪ ಗ್ರಾಮದಲ್ಲಿ ಚರಂಡಿಗಳು ಮುಚ್ಚಿಹೋಗಿರುವ ಪರಿಣಾಮ ಮಳೆ ನೀರು ಮನೆಗಳೊಳಗೆ ನುಗ್ಗುತ್ತಿದ್ದು, ನಿವಾಸಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈ ಕುರಿತು ಹಲವು ಬಾರಿ ಗ್ರಾಮ ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಗಂಗಾಧರೇಶ್ವರ ದೇವಸ್ಥಾನದಿಂದ ಬಾಲಾಜಿ ಗ್ಯಾಸ್‌ನ ಜಗದೀಶ್ ಅವರ ಮನೆಯವರೆಗಿನ ರಸ್ತೆಯನ್ನು ಅರ್ಧಕ್ಕೆ ಸಿಮೆಂಟ್ ರಸ್ತೆ ನಿರ್ಮಿಸಿ ಬಿಟ್ಟಿರುವುದರಿಂದ ಮುಂದಿನ ಭಾಗದಲ್ಲಿರುವ ನಲವತ್ತಕ್ಕೂ ಹೆಚ್ಚು ಮನೆಗಳ ನಿವಾಸಿಗಳು ಸಂಕಷ್ಟ ಎದುರಿಸುತ್ತಿದ್ದಾರೆ. ಶಾಲಾ ಮಕ್ಕಳು, ವೃದ್ಧರು ಹಾಗೂ ಸಾರ್ವಜನಿಕರು ಪ್ರತಿದಿನ ಸಂಚಾರ ನಡೆಸಲು ಕಷ್ಟಪಡುತ್ತಿದ್ದಾರೆ. ಈ ಸಮಸ್ಯೆಯನ್ನು ಶಾಸಕರ ಗಮನಕ್ಕೂ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

file 00000000136872078516bd008349ba428006135929586097201 ಮಳೆಗಾಲದ ಮೊದಲ ಮಳೆಯಲ್ಲೇ ಗಂಗನಕೊಪ್ಪದ ಅವ್ಯವಸ್ಥೆ ಬಯಲು; ಚರಂಡಿ, ರಸ್ತೆ ಸಮಸ್ಯೆಗೆ ಗ್ರಾಮಸ್ಥರ ಆಕ್ರೋಶ!

ಮಳೆಗಾಲದ ಮೊದಲ ಮಳೆಯಲ್ಲೇ ಗಂಗನಕೊಪ್ಪದ ಅವ್ಯವಸ್ಥೆ ಬಯಲು

ಮಳೆಗಾಲ ಆರಂಭವಾಗಿರುವ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಸಮಸ್ಯೆಗಳು ಮತ್ತಷ್ಟು ಗಂಭೀರಗೊಂಡಿವೆ. ಜಲಜೀವನ್ ಮಿಷನ್ ಯೋಜನೆಯಡಿ ಪೈಪ್‌ಲೈನ್ ಅಳವಡಿಕೆಗೆ ತೆಗೆದ ಹೊಂಡಗಳನ್ನು ಸಮರ್ಪಕವಾಗಿ ಮುಚ್ಚದ ಕಾರಣ ಸಾರ್ವಜನಿಕರು, ಶಾಲಾ ವಿದ್ಯಾರ್ಥಿಗಳು ಹಾಗೂ ವೃದ್ಧರು ಬಿದ್ದು ಗಾಯಗೊಳ್ಳುವ ಘಟನೆಗಳು ನಡೆಯುತ್ತಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಕುಡಿಯುವ ನೀರಿನ ಬಾವಿ ನಿರ್ಲಕ್ಷ್ಯಕ್ಕೆ ಗುರಿ

ಮಾವಿನಕೊಪ್ಪ ಸರ್ಕಲ್ ಸಮೀಪದ ಗುಲಾಬಿ ಅವರ ಮನೆಯ ಬಳಿ ಗ್ರಾಮ ಪಂಚಾಯಿತಿಯಿಂದ ನಿರ್ಮಿಸಲಾದ ಕಲ್ಲಿನ ಕುಡಿಯುವ ನೀರಿನ ಬಾವಿಯನ್ನು ಹಲವು ಕುಟುಂಬಗಳು ವರ್ಷಗಳಿಂದ ಬಳಸುತ್ತಿವೆ. ಆದರೆ ಬಾವಿಯ ಸುತ್ತಮುತ್ತ ಹಾಗೂ ಒಳಭಾಗದಲ್ಲಿ ಗಿಡಗಂಟಿಗಳು ಬೆಳೆದಿದ್ದು, ಬಾವಿಯೊಳಗೇ ದೊಡ್ಡ ಆಲದ ಮರ ಬೆಳೆದು ನಿಂತಿದೆ. ಇದನ್ನು ತೆರವುಗೊಳಿಸಿ ಸ್ವಚ್ಛಗೊಳಿಸುವಂತೆ ಹಲವು ಬಾರಿ ಮನವಿ ಸಲ್ಲಿಸಿದರೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥ ಗಣೇಶ್ ಆರೋಪಿಸಿದ್ದಾರೆ.

img 20260608 wa00786083338865997396945 ಮಳೆಗಾಲದ ಮೊದಲ ಮಳೆಯಲ್ಲೇ ಗಂಗನಕೊಪ್ಪದ ಅವ್ಯವಸ್ಥೆ ಬಯಲು; ಚರಂಡಿ, ರಸ್ತೆ ಸಮಸ್ಯೆಗೆ ಗ್ರಾಮಸ್ಥರ ಆಕ್ರೋಶ!

ಸಮಸ್ಯೆಗಳತ್ತ ತಕ್ಷಣ ಗಮನ ಹರಿಸುವಂತೆ ಆಗ್ರಹ

ಮಳೆಗಾಲದ ಮೊದಲ ಹಂತದಲ್ಲೇ ಗ್ರಾಮೀಣ ಪ್ರದೇಶಗಳ ಸಮಸ್ಯೆಗಳು ತಲೆದೋರಿರುವ ಹಿನ್ನೆಲೆಯಲ್ಲಿ ಸಂಬಂಧಿತ ಅಧಿಕಾರಿಗಳ ತುರ್ತು ಸಭೆ ಕರೆದು ಚರಂಡಿ, ರಸ್ತೆ ಹಾಗೂ ಕುಡಿಯುವ ನೀರಿನ ಸಮಸ್ಯೆಗಳನ್ನು ಶೀಘ್ರ ಪರಿಹರಿಸುವಂತೆ ಗ್ರಾಮಸ್ಥರು ಶಾಸಕ ಬೇಳೂರು ಗೋಪಾಲಕೃಷ್ಣ ಅವರಿಗೆ ಮನವಿ ಮಾಡಿದ್ದಾರೆ. ಜನರ ಸಮಸ್ಯೆಗಳನ್ನು ನಿರ್ಲಕ್ಷಿಸಿದರೆ ಮುಂದಿನ ದಿನಗಳಲ್ಲಿ ಸಾರ್ವಜನಿಕರ ಅಸಮಾಧಾನ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.

img 20260604 wa00391325237709242833772 ಮಳೆಗಾಲದ ಮೊದಲ ಮಳೆಯಲ್ಲೇ ಗಂಗನಕೊಪ್ಪದ ಅವ್ಯವಸ್ಥೆ ಬಯಲು; ಚರಂಡಿ, ರಸ್ತೆ ಸಮಸ್ಯೆಗೆ ಗ್ರಾಮಸ್ಥರ ಆಕ್ರೋಶ!

Leave a Reply

Your email address will not be published. Required fields are marked *