ರಿಪ್ಪನ್‌ಪೇಟೆ:ವಿಶ್ವಕರ್ಮ ಸಮಾಜದ ವತಿಯಿಂದ ಸಾಮೂಹಿಕ ಋಗ್ ಉಪಾಕರ್ಮ : ಶ್ರದ್ಧಾ ಭಕ್ತಿಯಿಂದ ಯಜ್ಞೋಪವಿತ ಧಾರಣೆ

Addaheading 20260826 171846 0000 ರಿಪ್ಪನ್‌ಪೇಟೆ:ವಿಶ್ವಕರ್ಮ ಸಮಾಜದ ವತಿಯಿಂದ ಸಾಮೂಹಿಕ ಋಗ್ ಉಪಾಕರ್ಮ : ಶ್ರದ್ಧಾ ಭಕ್ತಿಯಿಂದ ಯಜ್ಞೋಪವಿತ ಧಾರಣೆ
Spread the love

ರಿಪ್ಪನ್‌ಪೇಟೆ: ಟ್ಟಣದಲ್ಲಿ ವಿಶ್ವಕರ್ಮ ಸಮಾಜದ ವತಿಯಿಂದ ಶ್ರಾವಣ ಮಾಸದ ನೂಲು ಹುಣ್ಣಿಮೆಯ ನಿಮಿತ್ತ ಸಾಮೂಹಿಕ ಋಗ್ವೇದ ಉಪಾಕರ್ಮ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
  ತೀರ್ಥಹಳ್ಳಿಯ ಚೇತನ್ ಪುರೋಹಿತ್ ಅವರ ಸಮ್ಮುಖದಲ್ಲಿ ವೈದಿಕ ವಿಧಿವಿಧಾನಗಳು ನೆರವೇರಿದವು. ಗಣಪತಿ ಪೂಜೆ, ಸಪ್ತಋಷಿ ಪೂಜೆ, ಮಾತೃಕಾ ಪೂಜೆ, ಪುಣ್ಯಾಹವಾಚನ ಸೇರಿದಂತೆ ವಿವಿಧ ಧಾರ್ಮಿಕ ಆಚರಣೆಗಳನ್ನು ವಿಧಿವತ್ತಾಗಿ ನೆರವೇರಿಸಲಾಯಿತು.
   ವೇದಮಂತ್ರಗಳ ಘೋಷದೊಂದಿಗೆ ಸಾಮೂಹಿಕ ಯಜ್ಞೋಪವಿತ ಧಾರಣೆ ಕಾರ್ಯಕ್ರಮ ಜರುಗಿದ್ದು, ವಿಶ್ವಕರ್ಮ ಯಜ್ಞವನ್ನೂ ಭಕ್ತಿಭಾವದಿಂದ ನೆರವೇರಿಸಲಾಯಿತು.

img 20260826 wa00275084518412312717357 ರಿಪ್ಪನ್‌ಪೇಟೆ:ವಿಶ್ವಕರ್ಮ ಸಮಾಜದ ವತಿಯಿಂದ ಸಾಮೂಹಿಕ ಋಗ್ ಉಪಾಕರ್ಮ : ಶ್ರದ್ಧಾ ಭಕ್ತಿಯಿಂದ ಯಜ್ಞೋಪವಿತ ಧಾರಣೆ
ಕಿರಿಯರಿಂದ ಹಿರಿಯರವರೆಗೂ ಶ್ರದ್ಧಾಭಕ್ತಿಯಿಂದ  ಯಜ್ಞೋಪವಿತ ಧರಿಸಿದ ವಿಶ್ವಕರ್ಮ ಸಮಾಜ ಬಾಂಧವರು.

 ಗ್ ಉಪಾಕರ್ಮವು ಕೇವಲ ಯಜ್ಞೋಪವೀತ ಬದಲಿಸುವ ಆಚರಣೆಯಲ್ಲ; ಋಷಿ ಪರಂಪರೆಗೆ ಕೃತಜ್ಞತೆ ಸಲ್ಲಿಸಿ, ವೇದಧರ್ಮ, ಸದಾಚಾರ ಮತ್ತು ಸಂಸ್ಕಾರಯುತ ಜೀವನವನ್ನು ಮುಂದಿನ ಪೀಳಿಗೆಗೆ ಉಳಿಸುವ ಪವಿತ್ರ ಸಂಕಲ್ಪವಾಗಿದೆ ಎಂದು ತೀರ್ಥಹಳ್ಳಿಯ ಚೇತನ್ ಪುರೋಹಿತ್ ಮಹತ್ವ ತಿಳಿಸಿದರು.

  ಕಾರ್ಯಕ್ರಮದಲ್ಲಿ ಸಮಾಜದ ಪ್ರಮುಖರಾದ ಶ್ರೀಧರ ಆಚಾರ್ ವಿರಾಟ್ ವಿಶ್ವಕರ್ಮ ಸಂಘಟನೆ ರಿಪ್ಪನ್‌ಪೇಟೆ ಅಧ್ಯಕ್ಷ ಮಂಜುನಾಥ ಆಚಾರ್, ಆರ್.ಆರ್. ಕೃಷ್ಣ ಆಚಾರ್, ಸತ್ಯನಾರಾಯಣ ಆಚಾರ್, ರವಿ ಆಚಾರ್, ಪ್ರಭಾಕರ ಆಚಾರ್, ಶಶಿಧರ ಆಚಾರ್, ರಾಘವೇಂದ್ರ ಆಚಾರ್, ಶ್ರೀಕಾಂತ್ ಆಚಾರ್, ಗಿರೀಶ ಆಚಾರ್, ಮನೋಹರ್ ಆಚಾರ್, ಸುದೇಶ್ ಆಚಾರ್, ಮಹೇಶ್ ಆಚಾರ್, ಮೂಗುಡ್ತಿ ಜನಾರ್ದನ ಆಚಾರ್ , ಪ್ರವೀಣ್ ಆಚಾರ್, ಕಾರ್ತಿಕ್ ಆಚಾರ್, ಅನಿಲ್ ಆಚಾರ್ ಸೇರಿದಂತೆ ಸಮಾಜದ ಸದಸ್ಯರು ಹಾಜರಿದ್ದರು.

file 000000003f5c8208a0b120fec3430d9d3700700215253455773 ರಿಪ್ಪನ್‌ಪೇಟೆ:ವಿಶ್ವಕರ್ಮ ಸಮಾಜದ ವತಿಯಿಂದ ಸಾಮೂಹಿಕ ಋಗ್ ಉಪಾಕರ್ಮ : ಶ್ರದ್ಧಾ ಭಕ್ತಿಯಿಂದ ಯಜ್ಞೋಪವಿತ ಧಾರಣೆ

Leave a Reply

Your email address will not be published. Required fields are marked *