ಹೊಸನಗರ ಪಟ್ಟಣ ಪಂಚಾಯಿತಿಯಿಂದ ಎಚ್ಚರಿಕೆ: ಮನೆ ಜಾಗದಲ್ಲಿನ ಮರಗಳ ನಿರ್ವಹಣೆ ಮಾಲೀಕರ ಹೊಣೆ

Blue and Red Voter Education Banner 20260416 220219 0000 scaled ಹೊಸನಗರ ಪಟ್ಟಣ ಪಂಚಾಯಿತಿಯಿಂದ ಎಚ್ಚರಿಕೆ: ಮನೆ ಜಾಗದಲ್ಲಿನ ಮರಗಳ ನಿರ್ವಹಣೆ ಮಾಲೀಕರ ಹೊಣೆ
Spread the love

ಹೊಸನಗರ: ಮುಂಗಾರು ಮಳೆ ಆರಂಭವಾಗುತ್ತಿರುವ ಹಿನ್ನೆಲೆ ಮನೆಗಳ ಸುತ್ತಮುತ್ತ ಇರುವ ಮರಗಳ ಬಗ್ಗೆ ವಿಶೇಷ ಜಾಗ್ರತೆ ವಹಿಸುವಂತೆ ಹೊಸನಗರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಹರೀಶ್ ಎಂ.ಎನ್ ತಿಳಿಸಿದ್ದಾರೆ.

ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿನ ಮನೆ ಮಾಲೀಕರು ತಮ್ಮ ಜಾಗದಲ್ಲಿ ಇರುವ ಮರಗಳ ಕೊಂಬೆಗಳನ್ನು ನಿಯಮಿತವಾಗಿ ಕತ್ತರಿಸಿ, ಸುರಕ್ಷತೆ ಕಾಪಾಡಿಕೊಳ್ಳಬೇಕು. ಗಾಳಿ-ಮಳೆಯ ಪರಿಣಾಮವಾಗಿ ಮರಗಳು ಅಥವಾ ಕೊಂಬೆಗಳು ಬಿದ್ದು ಸಾರ್ವಜನಿಕರಿಗೆ ಅಥವಾ ಆಸ್ತಿ-ಪಾಸ್ತಿಗೆ ಹಾನಿಯಾಗುವ ಸಾಧ್ಯತೆ ಇದೆ. ಇಂತಹ ಅನಾಹುತಗಳು ಸಂಭವಿಸಿದಲ್ಲಿ ಅದರ ಸಂಪೂರ್ಣ ಹೊಣೆಗಾರಿಕೆ ಸಂಬಂಧಿಸಿದ ಜಾಗದ ಮಾಲೀಕರ ಮೇಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

img 20260414 wa00404952477833726498029 ಹೊಸನಗರ ಪಟ್ಟಣ ಪಂಚಾಯಿತಿಯಿಂದ ಎಚ್ಚರಿಕೆ: ಮನೆ ಜಾಗದಲ್ಲಿನ ಮರಗಳ ನಿರ್ವಹಣೆ ಮಾಲೀಕರ ಹೊಣೆ

ಹೊಸನಗರ ತಾಲೂಕು ಹಾಗೂ ಪಟ್ಟಣ ಪ್ರದೇಶಗಳಲ್ಲಿ ಅಡಿಕೆ ಮರ, ತೆಂಗಿನ ಮರ, ಹಲಸಿನ ಮರ, ಮಾವಿನ ಮರ ಸೇರಿದಂತೆ ವಿವಿಧ ಮರಗಳು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಯುತ್ತಿವೆ. ಮುಂಗಾರು ಸಮಯದಲ್ಲಿ ಬಿರುಸಿನ ಗಾಳಿ ಹಾಗೂ ಮಳೆ ಇರುವುದರಿಂದ ಈ ಮರಗಳ ಕೊಂಬೆಗಳು ಮುರಿದು ಬೀಳುವ ಅಪಾಯ ಹೆಚ್ಚಾಗಿದೆ.
ಪಟ್ಟಣದ ಸಾರ್ವಜನಿಕ ರಸ್ತೆಗಳ ಅಕ್ಕಪಕ್ಕದಲ್ಲಿರುವ ಮರಗಳ ಕೊಂಬೆಗಳನ್ನು ಕೂಡಲೇ ಕತ್ತರಿಸುವಂತೆ ಮಾಲೀಕರಿಗೆ ಸೂಚನೆ ನೀಡಲಾಗಿದೆ. ಇದರಿಂದ ಸಂಭವಿಸಬಹುದಾದ ಅನಾಹುತಗಳನ್ನು ತಪ್ಪಿಸಲು ಸಾಧ್ಯವಾಗುತ್ತದೆ.

ಈ ಕುರಿತು ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಾಧಿಕಾರಿ ಹರೀಶ್ ಎಂ.ಎನ್ ಅವರು, ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಈ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *