ರಿಪ್ಪನಪೇಟೆ: ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ (ಎಸ್ಸಿಐ) ರಿಪ್ಪನಪೇಟೆ ಲೀಜನ್ನ ನೂತನ ಅಧ್ಯಕ್ಷರಾಗಿ ಪಿಯುಸ್ ರೋಡ್ರಿಗಸ್ ಅವರು ಪ್ರಮಾಣ ವಚನ ಸ್ವೀಕರಿಸಿದರು. ಎಸ್ಸಿಐ ಉಪಾಧ್ಯಕ್ಷ ಕೆ.ವಿ. ಕುಮಾರ್ ಕೂರ್ಸೆ ಅವರು ಪ್ರಮಾಣ ವಚನ ಬೋಧಿಸಿ, “ನಾಯಕತ್ವ ಎಂಬುದು ಒಬ್ಬ ವ್ಯಕ್ತಿಯ ಸಾಧನೆಯಲ್ಲ, ಅದು ಸಾಮೂಹಿಕ ಕ್ರಿಯೆ. ಸಮಾಜದ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಿದಾಗ ಮಾತ್ರ ಸಂಘಟನೆಯ ಉದ್ದೇಶ ಸಾರ್ಥಕವಾಗುತ್ತದೆ” ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಎಸ್ಸಿಐ ರಾಷ್ಟ್ರೀಯ ಅಧ್ಯಕ್ಷ ಎಂ. ವಾಸುದೇವನ್ ಅವರು,”ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಗೌರವಯುತ ಜೀವನ ನಡೆಸುವಂತಾಗಬೇಕು.ಇದೇ ಎಸ್ಸಿಐ ಸಂಘಟನೆಯ ನಿಜವಾದ ಆಶಯವಾಗಿದೆ” ಎಂದು ಹೇಳಿದರು.
ಎಸ್ಸಿಐ ಪೂರ್ವ ಅಧ್ಯಕ್ಷ ಚಿತ್ರ ಕುಮಾರ್ ಅವರು ಮಾತನಾಡಿ, “ರಕ್ತದಾನದ ಮೂಲಕ ಇನ್ನೊಬ್ಬರ ಜೀವ ಉಳಿಸುವುದು ಮಾನವೀಯತೆಯ ಶ್ರೇಷ್ಠ ಸೇವೆಯಾಗಿದೆ. ಎಸ್ಸಿಐ ಸಂಘಟನೆ ರಕ್ತದಾನಕ್ಕೆ ವಿಶೇಷ ಆದ್ಯತೆ ನೀಡುತ್ತಿದೆ” ಎಂದು ತಿಳಿಸಿದರು.
ರಾಷ್ಟ್ರೀಯ ಪೂರ್ವ ಸಂಯೋಜಕ ಎಚ್.ಎನ್. ಸೂರ್ಯನಾರಾಯಣ ಅವರು, “ಭಾರತ ಅಪಾರ ಮಾನವ ಸಂಪನ್ಮೂಲ ಹೊಂದಿರುವ ರಾಷ್ಟ್ರವಾಗಿದೆ. ಈ ಸಂಪನ್ಮೂಲವನ್ನು ರಾಷ್ಟ್ರದ ಅಭಿವೃದ್ಧಿಗೆ ಬಳಸಿಕೊಳ್ಳಲು ಪರಿಣಾಮಕಾರಿ ತರಬೇತಿ ಅತ್ಯಗತ್ಯ” ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಶುಭ ಎ. ರಾವ್, ಬೇನಾಜ್ ಎಚ್.ಎಂ., ದಿವ್ಯಶ್ರೀ ಹಾಗೂ ಅಂಕಿತ್ ಅವರನ್ನು ಮತ್ತು ಸಾಧಕ ಶಿಕ್ಷಕ ಭೋಜಪ್ಪ ಅವರನ್ನು ಸನ್ಮಾನಿಸಲಾಯಿತು.ಸಭೆಯ ಅಧ್ಯಕ್ಷತೆಯನ್ನು ಎಸ್ಸಿಐ ರಿಪ್ಪನಪೇಟೆ ಲೀಜನ್ ಅಧ್ಯಕ್ಷ ಪಿಯುಸ್ ರೋಡ್ರಿಗಸ್ ವಹಿಸಿದ್ದರು.

ಈ ಸಂದರ್ಭದಲ್ಲಿ ಎಸ್ಸಿಐ ಜಿಎಲ್ಸಿ ಸಂಪತ್ ಕುಮಾರ್, ಉಪಾಧ್ಯಕ್ಷ ನಾರಾಯಣ ನಾಯರ್, ತರಬೇತಿ ಹಾಗೂ ಯೂತ್ ವಿಂಗ್ ನಿರ್ದೇಶಕ ಹುಸೇನ್ ಹೈಕಾಡಿ, ಕಾರ್ಯದರ್ಶಿ ಸಂಗೀತ ಷಾಜಿ, ಖಜಾಂಚಿ ಸಾಜಿದ್ ಹನೀಫ್, ಉಪಾಧ್ಯಕ್ಷರಾದ ನೇಮಪ್ಪ ಬಂಡಿ, ಅಜೇಶ್, ಸರಿತಾ ಅನಿಲ್, ದೇವರಾಜ್ ಮಳವಳ್ಳಿ, ಶಾಝಿ, ಪ್ರಭಾಕರ್, ಶೈಜು, ದಾನಪ್ಪ ಸೇರಿದಂತೆ ಅನೇಕ ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕುಮಾರಿ ಕುಮುದ ಪ್ರಾರ್ಥಸಿದರು. ಶೆಲ್ವಿ ಪಿಯೂಸ್ ಸೀನಿಯರ್ ಕ್ರೀಡ್ ವಾಚಿಸಿದರು. ರಾಮಚಂದ್ರ ಸ್ವಾಗತಿಸಿದರು. ಹಬೀಬ್ ಸಾಹಿಬ್ ವರದಿ ವಾಚಿಸಿದರು. ಗುಂಡ ನಾಯ್ಕ್ ವಂದಿಸಿದರು.
















Leave a Reply