ರಿಪ್ಪನ್‌ಪೇಟೆ: ಮೂಗುಡ್ತಿಯಲ್ಲಿ ಧರೆಗುರುಳಿದ ಬೃಹತ್ ಮರ; ತಪ್ಪಿದ ಭಾರೀ ದುರಂತ

Addaheading 20260808 141850 0000 ರಿಪ್ಪನ್‌ಪೇಟೆ: ಮೂಗುಡ್ತಿಯಲ್ಲಿ ಧರೆಗುರುಳಿದ ಬೃಹತ್ ಮರ; ತಪ್ಪಿದ ಭಾರೀ ದುರಂತ
Spread the love

ರಿಪ್ಪನ್‌ಪೇಟೆ: ಮೀಪದ ಮೂಗುಡ್ತಿ ಸಿದ್ಧಿವಿನಾಯಕ ದೇವಸ್ಥಾನದ ಬಳಿ ಬೃಹತ್ ಗಾತ್ರದ ಮರವೊಂದು ಸುಮಾರು ಬೆ.11 ವೇಳೆಗೆ ಏಕಾಏಕಿ ಧರೆಗುರುಳಿದ್ದು, ಅದೃಷ್ಟವಶಾತ್ ಭಾರೀ ದುರಂತವೊಂದು ತಪ್ಪಿದೆ.
   ಮೂಗುಡ್ತಿ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಕೃಷ್ಣಸ್ವಾಮಿ ಬಸ್ ನಿಂತಿದ್ದ ಸಂದರ್ಭದಲ್ಲಿ, ಬಸ್‌ನಿಂದ ಕೇವಲ ಸುಮಾರು  20 ಮೀಟರ್ ದೂರದಲ್ಲಿ ಬೃಹತ್ ಮರವೊಂದು ಧರೆಗುರುಳಿದೆ. ಕ್ಷಣಮಾತ್ರದ ಅಂತರದಲ್ಲಿ ಘಟನೆ ಸಂಭವಿಸಿದ್ದರಿಂದ ಪ್ರಯಾಣಿಕರು ಹಾಗೂ ಸಾರ್ವಜನಿಕರಲ್ಲಿ ಆತಂಕ ಉಂಟಾಯಿತು.

img 20260808 wa00203029366893194045559 ರಿಪ್ಪನ್‌ಪೇಟೆ: ಮೂಗುಡ್ತಿಯಲ್ಲಿ ಧರೆಗುರುಳಿದ ಬೃಹತ್ ಮರ; ತಪ್ಪಿದ ಭಾರೀ ದುರಂತ
ರಾಜ್ಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್

ಮರ ಬಿದ್ದ ಪರಿಣಾಮ ವಿದ್ಯುತ್ ಕಂಬಗಳು ಮುರಿದುಬಿದ್ದಿದ್ದು, ಪ್ರದೇಶದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಅಲ್ಲದೆ, ರಾಜ್ಯ ಹೆದ್ದಾರಿಯಲ್ಲಿ ಮರ ಅಡ್ಡವಾಗಿ ಬಿದ್ದ ಪರಿಣಾಮ ಕೆಲಕಾಲ ಸಂಚಾರಕ್ಕೆ ಅಡಚಣೆ ಉಂಟಾಗಿ ಟ್ರಾಫಿಕ್ ಜಾಮ್‌ ಉಂಟಾಯಿತು.
  ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಸಿಬ್ಬಂದಿ ಮರ ತೆರವು ಕಾರ್ಯಾಚರಣೆ ಕೈಗೊಂಡರು. ಮೇಸ್ಕಾಂ ಇಲಾಖೆಯ ಸಿಬ್ಬಂದಿಯೂ ಸ್ಥಳಕ್ಕೆ ಆಗಮಿಸಿ ಹಾನಿಗೊಳಗಾದ ವಿದ್ಯುತ್ ವ್ಯವಸ್ಥೆಯ ದುರಸ್ತಿ ಕಾರ್ಯ ಕೈಗೊಂಡಿದ್ದಾರೆ.

file 000000003f5c8208a0b120fec3430d9d3273005302115303022 ರಿಪ್ಪನ್‌ಪೇಟೆ: ಮೂಗುಡ್ತಿಯಲ್ಲಿ ಧರೆಗುರುಳಿದ ಬೃಹತ್ ಮರ; ತಪ್ಪಿದ ಭಾರೀ ದುರಂತ

Leave a Reply

Your email address will not be published. Required fields are marked *