HOSANAGARA|ಬ್ರಹ್ಮಾವರದಲ್ಲಿ ಡಿ.20ರಂದು ಮೂರು ಜಿಲ್ಲೆಗಳ ರಾಮಕ್ಷತ್ರೀಯ ವೃತ್ತಿಪರರ ಸಮಾವೇಶ

Addaheading 20260903 194941 0000 HOSANAGARA|ಬ್ರಹ್ಮಾವರದಲ್ಲಿ ಡಿ.20ರಂದು ಮೂರು ಜಿಲ್ಲೆಗಳ ರಾಮಕ್ಷತ್ರೀಯ ವೃತ್ತಿಪರರ ಸಮಾವೇಶ
Spread the love

ಹೊಸನಗರ, ಸೆ.3: ಡಿಸೆಂಬರ್ 20ರಂದು ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ವಿಶ್ವ ರಾಮಕ್ಷತ್ರೀಯ ಸಂಘದ ವತಿಯಿಂದ ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ದಾವಣಗೆರೆ ಜಿಲ್ಲೆಯ ರಾಮಕ್ಷತ್ರೀಯ ವೃತ್ತಿಪರರ ಬೃಹತ್ ಸಮಾವೇಶ ನಡೆಯಲಿದೆ ಎಂದು ವಿಶ್ವ ರಾಮಕ್ಷತ್ರೀಯ ಮಹಾಸಭಾದ ಅಧ್ಯಕ್ಷ ಹೆಚ್.ಆರ್. ಶಶಿಧರ್ ನಾಯ್ಕ್ ತಿಳಿಸಿದರು.
  ಹೊಸನಗರದ ಸೀತಾರಾಮಚಂದ್ರ ಸಭಾಭವನದಲ್ಲಿ ವಿಶ್ವ ರಾಮಕ್ಷತ್ರೀಯ ಮಹಾಸಂಘ ಕುಂದಾಪುರ ಹಾಗೂ ಕೋಟೆಗಾರ್ ವಿದ್ಯಾವರ್ಧಕ ಸಂಘ ಹೊಸನಗರದ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
   ಸಮಾಜದ ವೈದ್ಯರು, ಇಂಜಿನಿಯರ್‌ಗಳು, ವಕೀಲರು, ಚಾರ್ಟರ್ಡ್ ಅಕೌಂಟೆಂಟ್‌ಗಳು, ಅಧ್ಯಾಪಕರು ಹಾಗೂ ಉದ್ಯಮಿಗಳು ದೇಶ-ವಿದೇಶಗಳಲ್ಲಿ ಉನ್ನತ ಸ್ಥಾನಗಳಲ್ಲಿ ಸೇವೆ ಸಲ್ಲಿಸುತ್ತಿದ್ದರೂ ಪರಸ್ಪರ ಪರಿಚಯದ ಕೊರತೆಯಿಂದ ಸಮಾಜದಿಂದ ದೂರವಾಗುತ್ತಿದ್ದಾರೆ. ಅವರನ್ನು ಒಂದೇ ವೇದಿಕೆಗೆ ತಂದು ಪರಿಚಯ, ಸ್ನೇಹ, ಮಾರ್ಗದರ್ಶನ ಹಾಗೂ ವೃತ್ತಿಪರ ಸಹಕಾರ ಬೆಳೆಸುವುದು ಸಮಾವೇಶದ ಮುಖ್ಯ ಉದ್ದೇಶ ಎಂದು ಹೇಳಿದರು.
  ಸಭೆಯಲ್ಲಿ ಸಮಾವೇಶದ ಅಧ್ಯಕ್ಷ ಅಶೋಕ್ ಬೆಟ್ಟಿನ್, ಕಾರ್ಯದರ್ಶಿ ಸತೀಶ್ ಡಿ.ಕೆ., ಉಪಾಧ್ಯಕ್ಷ ಕಾಮಧೇನು ನಾಗರಾಜ್, ಪ್ರಧಾನ ಕಾರ್ಯದರ್ಶಿ ಶ್ರೀಧರ ಪಿ.ಎಸ್. ಸೇರಿದಂತೆ ವಿವಿಧ ಜಿಲ್ಲೆಯ ಪದಾಧಿಕಾರಿಗಳು, ಯುವಕ ಹಾಗೂ ಮಹಿಳಾ ಸಂಘದ ಸದಸ್ಯರು ಉಪಸ್ಥಿತರಿದ್ದರು.

file 000000003f5c8208a0b120fec3430d9d1263060425256225862 HOSANAGARA|ಬ್ರಹ್ಮಾವರದಲ್ಲಿ ಡಿ.20ರಂದು ಮೂರು ಜಿಲ್ಲೆಗಳ ರಾಮಕ್ಷತ್ರೀಯ ವೃತ್ತಿಪರರ ಸಮಾವೇಶ

Leave a Reply

Your email address will not be published. Required fields are marked *