ಕೆಂಚನಾಲದಲ್ಲಿ ಆಗಸ್ಟ್ 11ರಂದು ಶ್ರೀ ಮಾರಿಕಾಂಬ ದೇವಿ ಮಳೆಗಾಲದ ಜಾತ್ರೆ

Addaheading 20260807 183229 0000 ಕೆಂಚನಾಲದಲ್ಲಿ ಆಗಸ್ಟ್ 11ರಂದು ಶ್ರೀ ಮಾರಿಕಾಂಬ ದೇವಿ ಮಳೆಗಾಲದ ಜಾತ್ರೆ
Spread the love

ರಿಪ್ಪನ್‌ಪೇಟೆ:ತಿಹಾಸ ಪ್ರಸಿದ್ಧ ಕೆಂಚನಾಲ ಶ್ರೀ ಮಾರಿಕಾಂಬ ದೇವಿಯ ಮಳೆಗಾಲದ ಜಾತ್ರಾ ಮಹೋತ್ಸವವು ಆಗಸ್ಟ್ 11ರಂದು (ಮಂಗಳವಾರ) ಬೆಳಗ್ಗೆಯಿಂದ ಸಂಜೆವರೆಗೆ ಭಕ್ತಿಭಾವದಿಂದ ನಡೆಯಲಿದೆ ಎಂದು ಶ್ರೀ ಮಾರಿಕಾಂಬ ದೇವಿ ಜಾತ್ರಾ ಮಹೋತ್ಸವ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
   ವರ್ಷದಲ್ಲಿ ಎರಡು ಬಾರಿ ನಡೆಯುವ ಈ ಜಾತ್ರೆ ವಿಶೇಷ ಮಹತ್ವ ಹೊಂದಿದ್ದು, ಮಳೆಗಾಲದಲ್ಲಿ ಮಂಗಳವಾರ ಹಾಗೂ ಬೇಸಿಗೆಯಲ್ಲಿ ಬುಧವಾರ ಆಚರಿಸಲಾಗುವುದು ಈ ಕ್ಷೇತ್ರದ ವೈಶಿಷ್ಟ್ಯವಾಗಿದೆ.

file 0000000099cc82119ed5f6fe1ce018064519714591950866448 ಕೆಂಚನಾಲದಲ್ಲಿ ಆಗಸ್ಟ್ 11ರಂದು ಶ್ರೀ ಮಾರಿಕಾಂಬ ದೇವಿ ಮಳೆಗಾಲದ ಜಾತ್ರೆ

    ಆಗಸ್ಟ್ 11ರಂದು ಬೆಳಿಗ್ಗೆ 6 ಗಂಟೆಯಿಂದ ದೇವಿಗೆ ವಿಶೇಷ ಅಲಂಕಾರ ಪೂಜೆ, ಮಹಾಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವಿಯ ದರ್ಶನ ಪಡೆದು ಆಶೀರ್ವಾದ ಪಡೆಯುವಂತೆ ಜಾತ್ರಾ ಮಹೋತ್ಸವ ಸಮಿತಿ ಹಾಗೂ ದೇವಸ್ಥಾನ ಸೇವಾ ಸಮಿತಿ ಮನವಿ ಮಾಡಿವೆ.

    ಮಾರಿಕಾಂಬ ಜಾತ್ರೆಯ ನಿಮಿತ್ತ ಕೆಂಚನಾಲದಲ್ಲಿ ಮಹಾ ತಾಯಿಯ ಭಕ್ತವೃಂದದವರು  ಭರದ ಸಿದ್ಧತೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *