ಹೊಸನಗರ: ಭಾರತ ದೇಶವು ಪುರಾತನ ಸಂಸ್ಕೃತಿಯ ದೇಶವಾಗಿದ್ದು, ಇಲ್ಲಿ ಸಂಪ್ರದಾಯಗಳು ವಿಭಿನ್ನವಾಗಿದ್ದರೂ ಅದರ ಮೂಲದಲ್ಲಿ ಎಲ್ಲರೂ ಒಂದೇ ಎಂಬ ಭಾವನೆ ಅಡಕವಾಗಿದೆ ಎಂದು ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ. ಉಮೇಶ್ ಹೇಳಿದರು.
ಅವರು ಕಾಲೇಜಿನಲ್ಲಿ ಆಯೋಜಿಸಿದ್ದ ಸಂಪ್ರದಾಯಿಕ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಮ್ಮ ಉಡುಗೆ ತೊಡುಗೆಗಳು ನಮ್ಮ ಸಂಸ್ಕೃತಿಯ ಪ್ರತಿಬಿಂಬವಾಗಿವೆ. ಇಂದಿನ ಫ್ಯಾಷನ್ನ ಮಧ್ಯೆ ನಮ್ಮ ಪರಂಪರೆಯ ಉಡುಪುಗಳನ್ನು ಮರೆತರೆ ಮುಂದಿನ ದಿನಗಳಲ್ಲಿ ಅದು ದೊಡ್ಡ ನಷ್ಟವಾಗುತ್ತದೆ. ವಿಶೇಷವಾಗಿ ವಿದ್ಯಾರ್ಥಿನಿಯರು ಸೀರೆ ಸೇರಿದಂತೆ ಪರಂಪರೆಯ ಉಡುಪುಗಳನ್ನು ಧರಿಸುವುದರಿಂದ ಅದರ ಸೌಂದರ್ಯ ಹೆಚ್ಚುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಸಂಸ್ಕೃತಿಕ ವೇದಿಕೆಯ ಸಂಚಾಲಕರಾದ ಶ್ರೀಮತಿ ಮೇಧಿನಿ ಕೇಶವ್ ಮಾತನಾಡಿ, ಸಂಪ್ರದಾಯ ಎಂದರೆ ನಮ್ಮತನ, ಅದನ್ನು ಉಳಿಸಿಕೊಳ್ಳಲು ಇಂತಹ ದಿನಗಳು ಸಹಕಾರಿ ಎಂದರು. ಆಧುನಿಕತೆಯ ಭರದಲ್ಲಿ ಮರೆಯುತ್ತಿರುವ ಉಡುಗೆ, ತೊಡುಗೆ, ಆಹಾರ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಅಗತ್ಯವಿದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಭಾರತೀಯ ಉಡುಗೆ ತೊಡುಗೆಗಳನ್ನು ಧರಿಸಿ ವೈವಿಧ್ಯತೆಯಲ್ಲಿ ಏಕತೆಯನ್ನು ಪ್ರದರ್ಶಿಸಿದರು. ಜನಪದ ನೃತ್ಯ, ಗೀತೆ, ಹಾಗೂ ಆಹಾರ ಮೇಳವನ್ನು ಏರ್ಪಡಿಸಿ ಸ್ಪರ್ಧೆಗಳು ನಡೆಯಿತು. ವೈವಿಧ್ಯಮಯ ಉಡುಪು ಪ್ರದರ್ಶನವೂ ಗಮನ ಸೆಳೆಯಿತು.
ಈ ಸಂದರ್ಭದಲ್ಲಿ ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
















Leave a Reply