ಹೊಸನಗರ: ಹಸಿದವರಿಗೆ ಅನ್ನಭಾಗ್ಯ ಕಲ್ಪಿಸಿದರೆ ಪುಣ್ಯದ ಫಲ ಸಿಗುತ್ತದೆ ಎಂದು ಹೊಸನಗರದ ಚರ್ಚ್ ಫಾದರ್ ಸೈಮನ್ ಹೊರರ್ಟ್ ಹೇಳಿದರು.
ಹೊಸನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಮುಂಭಾಗದಲ್ಲಿ ಡಿ. ಶಿವಮೊಗ್ಗ ಮಲ್ಟಿಪರ್ಪಸ್ ಸೋಶಿಯಲ್ ಸರ್ವಿಸ್ ಸೊಸೈಟಿಯವರ ಪ್ರೇರಣೆಯಲ್ಲಿ, ಹೊಸನಗರದ ಸ್ತ್ರೀಬಂದು ಸ್ವಸಹಾಯ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ಚೈತನ್ಯ ಅನ್ನ ಕಾರ್ಯಕ್ರಮದಡಿ “ಹಸಿದವರಿಗೆ ಅನ್ನ” ಎಂಬ ಅರ್ಥಪೂರ್ಣ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಪಂಚದಲ್ಲಿಯೇ ಅನ್ನದಾನಕ್ಕಿಂತ ಶ್ರೇಷ್ಠ ದಾನ ಮತ್ತೊಂದಿಲ್ಲ. ಪ್ರತಿಯೊಬ್ಬರೂ ತಮ್ಮ ದುಡಿಮೆಯಲ್ಲಿ ಸ್ವಲ್ಪ ಹಣವನ್ನು ಅನ್ನದಾನಕ್ಕೆ ಮೀಸಲಿಟ್ಟು ಹಸಿದವರಿಗೆ ನೆರವಾಗಬೇಕು. ತಮ್ಮ ಕೈಯಲ್ಲಿ ಆದ ಮಟ್ಟಿಗೆ ಅನ್ನ ಹಾಕುವ ಮೂಲಕ ತಾವು ಬೆಳೆಯುವುದರ ಜೊತೆಗೆ ಇನ್ನೊಬ್ಬರ ಬದುಕಿಗೂ ಬೆಳಕು ತರಬೇಕು ಎಂದು ಅವರು ಹೇಳಿದರು. ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಒಳ ಮತ್ತು ಹೊರ ರೋಗಿಗಳು ಸೇರಿದಂತೆ ಸಾರ್ವಜನಿಕರಿಗೆ ಸುಮಾರು 400 ಜನರಿಗೆ ಅನ್ನ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಹೋಲಿ ರೆಡಿಮರ್ ಶಾಲೆಯ ಮುಖ್ಯ ಶಿಕ್ಷಕಿ ವಿಲ್ಮಾ ಪಿಂಟೋ, ಸಿಸ್ಟರ್ ರೋಸಿಟಾ, ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಲಿಂಗರಾಜ್, ಡಾ. ಹೇಮಾಂತ್, ಹೊಸನಗರ ವಲಯ ಸಂಯೋಜನಾಧಿಕಾರಿ ಮಧುಸೂದನ್ ಹಾಗೂ ಸ್ತ್ರೀ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು.















Leave a Reply