ಹೊಸನಗರ: ಅಂಬೇಡ್ಕರ್ ತತ್ವಗಳು ಸಮಾಜ ನಿರ್ಮಾಣಕ್ಕೆ ಮಾರ್ಗದರ್ಶಕ – ತಹಶೀಲ್ದಾರ್ ಭರತ್‌ರಾಜ್

Screenshot 20260414 192050 Canva ಹೊಸನಗರ: ಅಂಬೇಡ್ಕರ್ ತತ್ವಗಳು ಸಮಾಜ ನಿರ್ಮಾಣಕ್ಕೆ ಮಾರ್ಗದರ್ಶಕ - ತಹಶೀಲ್ದಾರ್ ಭರತ್‌ರಾಜ್
Spread the love

ಹೊಸನಗರ: ಭಾರತದ ಸಂವಿಧಾನದ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೇವಲ ನ್ಯಾಯಶಾಸ್ತ್ರಜ್ಞರಷ್ಟೇ ಅಲ್ಲದೆ, ಶ್ರೇಷ್ಠ ಸಾಮಾಜಿಕ ಸುಧಾರಕರೂ, ಆರ್ಥಿಕ ಚಿಂತಕರೂ ಹಾಗೂ ರಾಜಕೀಯ ನಾಯಕರೂ ಆಗಿದ್ದರು ಎಂದು ತಹಶೀಲ್ದಾರ್ ಭರತ್‌ರಾಜ್ ಹೇಳಿದರು.

14hnr1photo3186910709567141336 ಹೊಸನಗರ: ಅಂಬೇಡ್ಕರ್ ತತ್ವಗಳು ಸಮಾಜ ನಿರ್ಮಾಣಕ್ಕೆ ಮಾರ್ಗದರ್ಶಕ - ತಹಶೀಲ್ದಾರ್ ಭರತ್‌ರಾಜ್

ತಾಲೂಕು ಪಂಚಾಯಿತಿ ಆವರಣದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ಪಟ್ಟಣ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿ ಹಾಗೂ ಡಾ. ಬಾಬು ಜಗಜೀವನರಾಂ ಅವರ 119ನೇ ಜಯಂತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಭರತ್‌ರಾಜ್ ಅವರು, ಅಂಬೇಡ್ಕರ್ ಅವರು ಸಮಾನತೆ, ಸ್ವಾತಂತ್ರ್ಯ ಮತ್ತು ಬಾಂಧವ್ಯ ಎಂಬ ಮೌಲ್ಯಗಳ ಆಧಾರದ ಮೇಲೆ ಪ್ರಜಾಪ್ರಭುತ್ವದ ಬಲವಾದ ಅಡಿಪಾಯ ಹಾಕಿದರು ಎಂದು ಹೇಳಿದರು. ಸಮಾಜದಲ್ಲಿ ನ್ಯಾಯ ಮತ್ತು ಕಾನೂನಿನ ಪ್ರಾಬಲ್ಯವಿಲ್ಲದೆ ಪ್ರಜಾಪ್ರಭುತ್ವ ಸಾಧ್ಯವಿಲ್ಲ ಎಂಬುದು ಅವರ ನಿಲುವಾಗಿತ್ತು ಎಂದು ವಿವರಿಸಿದರು.

14hnr1photo8198090925523992581 ಹೊಸನಗರ: ಅಂಬೇಡ್ಕರ್ ತತ್ವಗಳು ಸಮಾಜ ನಿರ್ಮಾಣಕ್ಕೆ ಮಾರ್ಗದರ್ಶಕ - ತಹಶೀಲ್ದಾರ್ ಭರತ್‌ರಾಜ್

ಅಂಬೇಡ್ಕರ್ ಅವರು ದಲಿತರ ಹಕ್ಕುಗಳಿಗಾಗಿ ಹೋರಾಡಿ, ಸಮಾಜದಲ್ಲಿ ಸಮಾನತೆ ಸ್ಥಾಪಿಸಲು ಅನೇಕ ಕಾನೂನು ಹಾಗೂ ಚಿಂತನೆಗಳನ್ನು ನೀಡಿದ ಮಹಾನ್ ವ್ಯಕ್ತಿಯಾಗಿದ್ದಾರೆ. ಅವರ ವಿಚಾರಧಾರೆಗಳನ್ನು ಅಳವಡಿಸಿಕೊಳ್ಳುವುದು ನಿಜವಾದ ಗೌರವ ಸಲ್ಲಿಸುವುದಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಪ್ರದೀಪ್ ಎನ್.ವಿ. ಅವರು ಮಾತನಾಡಿ, ಅಂಬೇಡ್ಕರ್ ಅವರು ಚಾದರ್ ಕೆರೆ ಹೋರಾಟ ಸೇರಿದಂತೆ ಅನೇಕ ಸಾಮಾಜಿಕ ಚಳವಳಿಗಳ ಮೂಲಕ ಹಕ್ಕುಗಳಿಗಾಗಿ ಹೋರಾಟ ನಡೆಸಿದರು ಎಂದು ತಿಳಿಸಿದರು.

img 20260325 wa00244966025691791246179 ಹೊಸನಗರ: ಅಂಬೇಡ್ಕರ್ ತತ್ವಗಳು ಸಮಾಜ ನಿರ್ಮಾಣಕ್ಕೆ ಮಾರ್ಗದರ್ಶಕ - ತಹಶೀಲ್ದಾರ್ ಭರತ್‌ರಾಜ್

ಈ ಸಂದರ್ಭದಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್ ಗೌಡಪ್ಪ ಗೌಡರ್, ಕ್ಷೇತ್ರ ಶಿಕ್ಷಣಾಧಿಕಾರಿ ಗಣೇಶ್ ವೈ,ವಿನಯ್ ಹೆಗಡೆ,ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಶ್ರೀಮತಿ ಗೀತಾ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಹರೀಶ್ ಎಂ.ಎನ್., ತಾಲೂಕು ಪಂಚಾಯಿತಿ ಸಿಬ್ಬಂದಿ, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.


ಹೊಸನಗರದ ಪಟ್ಟಣ ಪಂಚಾಯತಿ ಆವರಣದಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನ್ ರಾಂರವರ ಜನ್ಮ ದಿನಾಚರಣೆ ಆಚರಣೆ

14hnr2photo347978513016586329 ಹೊಸನಗರ: ಅಂಬೇಡ್ಕರ್ ತತ್ವಗಳು ಸಮಾಜ ನಿರ್ಮಾಣಕ್ಕೆ ಮಾರ್ಗದರ್ಶಕ - ತಹಶೀಲ್ದಾರ್ ಭರತ್‌ರಾಜ್


ಹೊಸನಗರ: ಹೊಸನಗರದ ಪಟ್ಟಣ ಪಂಚಾಯತಿ ಆವರಣದಲ್ಲಿ ಡಾ|| ಬಿ.ಆರ್ ಅಂಬೇಡ್ಕರ್‌ರವರ ೧೩೯ನೆ ಜನ್ಮ ದಿನಾಚರಣೆ ಹಾಗೂ ಡಾ|| ಬಾಬು ಜಗಜೀವನ್ ರಾಂರವರ ೧೧೯ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತ್ತು
ಪಟ್ಟಣ ಪಂಚಾಯತಿ ಆಡಳಿತಾಧಿಕಾರಿ ತಹಶಿಲ್ದಾರ್ ಭರತ್‌ರಾಜ್‌ರವರು ಇಬ್ಬರು ಅಗ್ರಗಣ್ಯ ನಾಯಕರುಗಳ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಹರೀಶ್ ಎಂ.ಎನ್,  ಪಟ್ಟಣ ಪಂಚಾಯತಿಯ ಎಲ್ಲಾ ನೌಕರ ವರ್ಗ ಹಾಗೂ ಪಟ್ಟಣ ಪಂಚಾಯಿತಿ ಪೌರ ನೌಕರರು ಉಪಸ್ಥಿತರಿದ್ದರು.

img 20260324 wa0057938378835486664914 ಹೊಸನಗರ: ಅಂಬೇಡ್ಕರ್ ತತ್ವಗಳು ಸಮಾಜ ನಿರ್ಮಾಣಕ್ಕೆ ಮಾರ್ಗದರ್ಶಕ - ತಹಶೀಲ್ದಾರ್ ಭರತ್‌ರಾಜ್

Leave a Reply

Your email address will not be published. Required fields are marked *