ಗ್ರಾಮಸ್ಥರ ಪ್ರತಿಭಟನೆಯ ಫಲ,ನಿರಂತರ ಮಾಧ್ಯಮಗಳ ವರದಿಗೆ ಶಾಸಕ ಆರಗ ಜ್ಞಾನೇಂದ್ರ ಸ್ಪಂದನೆ

Addaheading 20260821 211723 0000 ಗ್ರಾಮಸ್ಥರ ಪ್ರತಿಭಟನೆಯ ಫಲ,ನಿರಂತರ ಮಾಧ್ಯಮಗಳ ವರದಿಗೆ ಶಾಸಕ ಆರಗ ಜ್ಞಾನೇಂದ್ರ ಸ್ಪಂದನೆ
Spread the love

ಸಂಪಳ್ಳಿ–ಕರಡಿಗ–ಬೆಳಕೋಡು–ಕೊಳವಳ್ಳಿ- ಗವಟೂರು ರಸ್ತೆ ತಾತ್ಕಾಲಿಕ ದುರಸ್ತಿ

ರಿಪ್ಪನ್‌ಪೇಟೆ: ಸಂಪಳ್ಳಿ–ಕರಡಿಗ–ಬೆಳಕೋಡು–ಕೊಳವಳ್ಳಿ ಭಾಗದ ರಸ್ತೆ ದುರಸ್ತಿಗೆ ಆಗ್ರಹಿಸಿ ಗ್ರಾಮಸ್ಥರು ನಡೆಸಿದ ಪ್ರತಿಭಟನೆ ಹಾಗೂ ಸಮಸ್ಯೆಯ ಕುರಿತು ನಿರಂತರವಾಗಿ ಪ್ರಕಟವಾದ ಪತ್ರಿಕಾ ವರದಿಗಳಿಗೆ ಇದೀಗ ಸ್ಪಂದನೆ ದೊರೆತಿದೆ.

img 20260821 wa00571901572160858440168 ಗ್ರಾಮಸ್ಥರ ಪ್ರತಿಭಟನೆಯ ಫಲ,ನಿರಂತರ ಮಾಧ್ಯಮಗಳ ವರದಿಗೆ ಶಾಸಕ ಆರಗ ಜ್ಞಾನೇಂದ್ರ ಸ್ಪಂದನೆ
ಕರ್ನಾಟಕದ ಜನಪ್ರಿಯ ದಿನಪತ್ರಿಕೆ ಹೊಸದಿಗಂತ

  ರಸ್ತೆಯ ದುಸ್ಥಿತಿಯಿಂದ ಸಾರ್ವಜನಿಕರು ಎದುರಿಸುತ್ತಿದ್ದ ಸಮಸ್ಯೆಯನ್ನು ಗಮನಕ್ಕೆ ತಂದು ಗ್ರಾಮಸ್ಥರು ರಸ್ತೆಯ ಮೇಲೆಯೇ ಭತ್ತ ನಾಟಿ ಮಾಡುವ ಮೂಲಕ ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಶಾಸಕ ಆರಗ ಜ್ಞಾನೇಂದ್ರ ಅವರು ಸಾರ್ವಜನಿಕರ ಓಡಾಟಕ್ಕೆ ಅನುಕೂಲವಾಗುವಂತೆ ತಾತ್ಕಾಲಿಕವಾಗಿ ರಸ್ತೆ ದುರಸ್ತಿ ಮಾಡಿಕೊಡುವ ಭರವಸೆ ನೀಡಿದ್ದರು.

addaheading 20260821 212544 00009029816868309837424 ಗ್ರಾಮಸ್ಥರ ಪ್ರತಿಭಟನೆಯ ಫಲ,ನಿರಂತರ ಮಾಧ್ಯಮಗಳ ವರದಿಗೆ ಶಾಸಕ ಆರಗ ಜ್ಞಾನೇಂದ್ರ ಸ್ಪಂದನೆ
img 20260821 wa00609137734030506006259 ಗ್ರಾಮಸ್ಥರ ಪ್ರತಿಭಟನೆಯ ಫಲ,ನಿರಂತರ ಮಾಧ್ಯಮಗಳ ವರದಿಗೆ ಶಾಸಕ ಆರಗ ಜ್ಞಾನೇಂದ್ರ ಸ್ಪಂದನೆ

  ಅದರಂತೆ ಇದೀಗ ತಾತ್ಕಾಲಿಕ ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳಲಾಗಿದ್ದು, ಶಾಶ್ವತ ರಸ್ತೆ ಕಾಮಗಾರಿಯನ್ನೂ ಶಾಸಕರ ನೇತೃತ್ವದಲ್ಲಿ ಕೈಗೊಳ್ಳಲಾಗುವುದು ಎಂಬ ಭರವಸೆ ನೀಡಲಾಗಿದೆ.
  ಗ್ರಾಮಸ್ಥರ ಪ್ರತಿಭಟನೆ ಹಾಗೂ ಸಮಸ್ಯೆಯ ಕುರಿತು ನಿರಂತರವಾಗಿ ವರದಿ ಪ್ರಕಟಿಸಿ ಸಂಬಂಧಪಟ್ಟವರ ಗಮನ ಸೆಳೆದ ಪತ್ರಿಕಾ ವರದಿಗಳಿಗೆ ಸ್ಪಂದಿಸಿ ರಸ್ತೆ ದುರಸ್ತಿ ಕಾರ್ಯ ಕೈಗೊಂಡಿರುವುದಕ್ಕೆ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿ ಶಾಸಕ ಆರಗ ಜ್ಞಾನೇಂದ್ರ ಹಾಗೂ ಅಧಿಕಾರಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

Leave a Reply

Your email address will not be published. Required fields are marked *