ಅರಣ್ಯ ಸಂಚಾರಿದಳದ ಕಾರ್ಯಾಚರಣೆ: 21 ಕೆ.ಜಿ. ಜಿಂಕೆ ಮಾಂಸ, ಕಾರು ವಶ, ಆರೋಪಿಗಳು ಪರಾರಿ

Addaheading 20260905 180528 0000 ಅರಣ್ಯ ಸಂಚಾರಿದಳದ ಕಾರ್ಯಾಚರಣೆ: 21 ಕೆ.ಜಿ. ಜಿಂಕೆ ಮಾಂಸ, ಕಾರು ವಶ, ಆರೋಪಿಗಳು ಪರಾರಿ
Spread the love

ರಿಪ್ಪನ್‌ಪೇಟೆ: ಮಾರಾಟ ಮಾಡುವ ಉದ್ದೇಶದಿಂದ ಕಾರಿನಲ್ಲಿ ಸಂಗ್ರಹಿಸಿಡಲಾಗಿದ್ದ ಸುಮಾರು 21 ಕೆ.ಜಿ. ಜಿಂಕೆ ಮಾಂಸವನ್ನು ಅರಣ್ಯ ಸಂಚಾರಿ ದಳದ ಅಧಿಕಾರಿಗಳು ವಶಪಡಿಸಿಕೊಂಡಿದ್ದು, ಆರೋಪಿಗಳು ಸ್ಥಳದಿಂದ ಪರಾರಿಯಾಗಿರುವ ಘಟನೆ ಪಟ್ಟಣದ ಶಬರೀಶ ನಗರದಲ್ಲಿ ನಡೆದಿದೆ.
  ಅರಣ್ಯ ಸಂಚಾರಿದಳದ ಪಿಎಸ್‌ಐ ವಿನಾಯಕ್ ನೇತೃತ್ವದಲ್ಲಿ ಸಿಬ್ಬಂದಿಗಳು ಶಬರೀಶ ನಗರ ಪ್ರದೇಶದಲ್ಲಿ ದಾಳಿ ನಡೆಸಿದರು. ಈ ವೇಳೆ ಮಾರುತಿ ಎರ್ಟಿಗಾ ಕಾರಿನಲ್ಲಿ ಎಲ್ಲಿಂದಲೋ ತಂದು ಸಂಗ್ರಹಿಸಿಡಲಾಗಿದ್ದ 21 ಕೆ.ಜಿ. ಜಿಂಕೆ ಮಾಂಸ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
  ಅರಣ್ಯ ಅಧಿಕಾರಿಗಳು ಜಿಂಕೆ ಮಾಂಸದ ಜೊತೆಗೆ ಮಾರುತಿ ಎರ್ಟಿಗಾ ಕಾರನ್ನೂ ವಶಪಡಿಸಿಕೊಂಡಿದ್ದಾರೆ.
   ಈ ಪ್ರಕರಣದಲ್ಲಿ ಪಟ್ಟಣದ ನಿವಾಸಿ ಗುರುರಾಜ್ ಹಾಗೂ  ಗಣೇಶ್  ಸೇರಿದಂತೆ ಆರೋಪಿಗಳು ದಾಳಿ ನಡೆಯುತ್ತಿದ್ದ ವೇಳೆ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಅರಣ್ಯ ಸಂಚಾರಿ ದಳದ ಪಿಎಸ್‌ಐ ವಿನಾಯಕ್ ತಿಳಿಸಿದ್ದಾರೆ.

  ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಅರಣ್ಯ ಇಲಾಖೆ, ಪರಾರಿಯಾಗಿರುವ ಆರೋಪಿಗಳ ಪತ್ತೆಗೆ ಕ್ರಮ ಕೈಗೊಂಡಿದೆ.
  ದಾಳಿಯಲ್ಲಿ ಅರಣ್ಯ ಸಂಚಾರಿ ದಳದ ಗಣೇಶ್ ಬಿ.ಸಿ., ಆಂಜನೇಯ ಪಾಟೀಲ್, ಚಂದ್ರಕಾಂತ್, ಸುರೇಶ್, ಪ್ರಮೋದಿನಿ ಹಾಗೂ ಹೆಚ್.ಬಿ. ದೊಡ್ಡಮನಿ ಭಾಗವಹಿಸಿದ್ದರು.

file 000000003f5c8208a0b120fec3430d9d2881377218685225920 ಅರಣ್ಯ ಸಂಚಾರಿದಳದ ಕಾರ್ಯಾಚರಣೆ: 21 ಕೆ.ಜಿ. ಜಿಂಕೆ ಮಾಂಸ, ಕಾರು ವಶ, ಆರೋಪಿಗಳು ಪರಾರಿ

Leave a Reply

Your email address will not be published. Required fields are marked *