ರಿಪ್ಪನ್ ಪೇಟೆ : ಪಟ್ಟಣದಲ್ಲಿನ ಒಟ್ಟು ನಾಲ್ಕು ಪೆಟ್ರೋಲ್ ಬಂಕ್‌ಗಳಲ್ಲಿ ಎರಡು ಬಂಕ್‌ಗಳಲ್ಲಿ (IOCL ಮತ್ತು ನಯಾರ) ಇಂದು ಸಹಜವಾಗಿ ಇಂಧನ ಸ್ಟಾಕ್ ಖಾಲಿಯಾಗಿದ್ದು, ಉಳಿದ HPCL ಮತ್ತು MRPL ಬಂಕ್‌ಗಳಲ್ಲಿ ಜನರು ಪೆಟ್ರೋಲ್‌ಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ ಪರಿಣಾಮ ಜನಜಂಗುಳಿ ಹಾಗೂ ನೂಕುನುಗ್ಗಲು ಕಂಡುಬಂದಿತು. ಇದರಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಮಾಧ್ಯಮದವರೊಂದಿಗೆ ಮಾತನಾಡಿದ ನಯಾರ ಪೆಟ್ರೋಲ್ ಬಂಕ್ ಮಾಲೀಕರಾದ ರಾಘವೇಂದ್ರ ಅವರು, ಆನಂದಪುರ ಸೇರಿದಂತೆ ಸುತ್ತಮುತ್ತಲಿನ ಕೆಲವು ಬಂಕ್‌ಗಳಲ್ಲಿ ಪೆಟ್ರೋಲ್ ಖಾಲಿಯಾಗಿದ್ದರಿಂದ ಜನರು ರಿಪ್ಪನ್ ಪೇಟೆ ಬಂಕ್‌ಗಳಿಗೆ ಬಂದಿದ್ದಾರೆ. ಜೊತೆಗೆ ಯುಗಾದಿ ಮತ್ತು ರಂಜಾನ್ ಹಬ್ಬದ ಹಿನ್ನೆಲೆ ನಿರಂತರ ರಜೆಗಳಿದ್ದರಿಂದ ಇಂಧನ ಲೋಡಿಂಗ್‌ನಲ್ಲಿ ಸ್ವಲ್ಪ ವ್ಯತ್ಯಾಸ ಉಂಟಾಗಿದೆ ಎಂದು ತಿಳಿಸಿದ್ದಾರೆ.
ಈ ವಾರ ಹಬ್ಬಗಳ ಕಾರಣ ಜನರ ಸಂಚಾರ ಹೆಚ್ಚಿದ ಪರಿಣಾಮ ಇಂಧನ ಬೇಡಿಕೆಯೂ ಹೆಚ್ಚಾಗಿದೆ. ಆದರೆ ಪೆಟ್ರೋಲ್ ಸರಬರಾಜು ನಿರಂತರವಾಗಿ ನಡೆಯುತ್ತಿದ್ದು, ಯಾವುದೇ ಕೊರತೆ ಉಂಟಾಗಿಲ್ಲ . ಜನರು ಗಾಳಿ ಸುದ್ದಿಗಳಿಗೆ ಒಳಗಾಗದೆ ಶಾಂತವಾಗಿರಬೇಕು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
















Leave a Reply