ರಿಪ್ಪನ್‌ಪೇಟೆಯಲ್ಲಿ ಸುಗಮ ಸಂಚಾರಕ್ಕೆ ಪೊಲೀಸ್ ಇಲಾಖೆ ಮಹತ್ವದ ತೀರ್ಮಾನ: ವಿನಾಯಕ ವೃತ್ತದ ಸುತ್ತ ಪಾರ್ಕಿಂಗ್ ನಿಷೇಧ!!!

ನಿವೃತ್ತ ಸೈನಿಕ ಕೆ.ವಿ ಕೃಷ್ಣಮೂರ್ತಿಗೆ ರಿಪ್ಪನ್‌ಪೇಟೆಯಲ್ಲಿ ಅದ್ದೂರಿ ಸ್ವಾಗತ 20260604 195530 0000 ರಿಪ್ಪನ್‌ಪೇಟೆಯಲ್ಲಿ ಸುಗಮ ಸಂಚಾರಕ್ಕೆ ಪೊಲೀಸ್ ಇಲಾಖೆ ಮಹತ್ವದ ತೀರ್ಮಾನ: ವಿನಾಯಕ ವೃತ್ತದ ಸುತ್ತ ಪಾರ್ಕಿಂಗ್ ನಿಷೇಧ!!!
Spread the love

img 20260110 wa00001889922288166283558 ರಿಪ್ಪನ್‌ಪೇಟೆಯಲ್ಲಿ ಸುಗಮ ಸಂಚಾರಕ್ಕೆ ಪೊಲೀಸ್ ಇಲಾಖೆ ಮಹತ್ವದ ತೀರ್ಮಾನ: ವಿನಾಯಕ ವೃತ್ತದ ಸುತ್ತ ಪಾರ್ಕಿಂಗ್ ನಿಷೇಧ!!!

ರಿಪ್ಪನ್‌ಪೇಟೆ:ಟ್ಟಣದಲ್ಲಿ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ, ವಿನಾಯಕ ವೃತ್ತದ ಸುತ್ತ ವಾಹನ ನಿಲುಗಡೆ ನಿಯಂತ್ರಣಕ್ಕೆ ಪೊಲೀಸ್ ಇಲಾಖೆ ಮಹತ್ವದ ಕ್ರಮ ಕೈಗೊಂಡಿದೆ ಎಂದು ವೃತ್ತ ನಿರೀಕ್ಷಕ ಎಂ.ಎಸ್. ಗೌಡಪ್ಪ ಗೌಡರ್ ತಿಳಿಸಿದರು.
ಪಟ್ಟಣದ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆದ ವರ್ತಕರ ಹಾಗೂ ಸಾರ್ವಜನಿಕರ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ಹೊಸನಗರ–ಶಿವಮೊಗ್ಗ–ಸಾಗರ–ತೀರ್ಥಹಳ್ಳಿ ಸಂಪರ್ಕಿಸುವ ಪ್ರಮುಖ ನಾಲ್ಕು ರಸ್ತೆಗಳ ಸಂಗಮವಾದ ವಿನಾಯಕ ವೃತ್ತದ ಸುತ್ತ 75 ಅಡಿ ವ್ಯಾಪ್ತಿಯಲ್ಲಿ ಯಾವುದೇ ವಾಹನ ನಿಲುಗಡೆಗೆ ಅವಕಾಶ ಇರುವುದಿಲ್ಲ ಎಂದರು.


ವಾಹನ ನಿಲುಗಡೆ ನಿಯಮಗಳು
ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಈ ಕೆಳಗಿನ ನಿಯಮಗಳನ್ನು ಜಾರಿಗೆ ತರಲಾಗಿದೆ:

ದ್ವಿಚಕ್ರ ವಾಹನಗಳು: ನಾಲ್ಕು ಮುಖ್ಯ ರಸ್ತೆಗಳಲ್ಲಿ, ರಸ್ತೆ ವಿಭಜಕದ ಎರಡೂ ಬದಿಯಲ್ಲಿ ವೃತ್ತ ಕೇಂದ್ರದಿಂದ 75 ಅಡಿ ನಂತರದಲ್ಲಿ ನಿಲ್ಲಿಸಲು ಅವಕಾಶ ನೀಡಲಾಗುವುದು.

img 20260324 wa00567282310244979916465 ರಿಪ್ಪನ್‌ಪೇಟೆಯಲ್ಲಿ ಸುಗಮ ಸಂಚಾರಕ್ಕೆ ಪೊಲೀಸ್ ಇಲಾಖೆ ಮಹತ್ವದ ತೀರ್ಮಾನ: ವಿನಾಯಕ ವೃತ್ತದ ಸುತ್ತ ಪಾರ್ಕಿಂಗ್ ನಿಷೇಧ!!!

ನಾಲ್ಕು ಚಕ್ರದ ವಾಹನಗಳು: ಇವುಗಳನ್ನು ವೃತ್ತದಿಂದ 100 ಮೀಟರ್ ದೂರದಲ್ಲಿ ನಿಲುಗಡೆ ಮಾಡಬೇಕು.
ಬಸ್ ಸಂಚಾರ: ಪ್ರಯಾಣಿಕರು ಹತ್ತಿಳಿಯಲು ಮಾತ್ರ ವೃತ್ತದ ಸಮೀಪ ಅವಕಾಶ ಕಲ್ಪಿಸಲಾಗುವುದು.

ಪೊಲೀಸ್ ಇಲಾಖೆಯು ಸಂಚಾರಿ ನಿಯಮಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಒಂದು ತಿಂಗಳ ಕಾಲ ವಿಶೇಷ ಸಿಬ್ಬಂದಿಯನ್ನು ನಿಯೋಜಿಸಲಿದೆ. ಈ ಅವಧಿಯ ನಂತರವೂ ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಎಚ್ಚರಿಸಿದೆ.
ಸಭೆಯಲ್ಲಿ ಭಾಗವಹಿಸಿದ ಪ್ರಮುಖರು

ಸಭೆಯಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು ಹಾಗೂ ವರ್ತಕರು ಉಪಸ್ಥಿತರಿದ್ದು, ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು:
ವರ್ತಕರ ಪರವಾಗಿ: ಟಿ.ಸುಂದರೇಶ್, ಕೆ.ಬಿ. ನಾಗಭೂಷಣ, ಹೆಚ್.ಎಸ್. ಸತೀಶ್, ಡಿ. ಸುರೇಶಪ್ರಭು ಹಾಗೂ ಸೋಮಶೇಖರ ಅವರು ಸಾಗರ ರಸ್ತೆ ವಿಸ್ತರಣೆ ಕಾಮಗಾರಿಯಲ್ಲಿ ಕಂಡುಬಂದ ಲೋಪಗಳ ಕುರಿತು ಗಮನ ಸೆಳೆದರು.

image editor output image1332108129 17805832079801942129776395320967 ರಿಪ್ಪನ್‌ಪೇಟೆಯಲ್ಲಿ ಸುಗಮ ಸಂಚಾರಕ್ಕೆ ಪೊಲೀಸ್ ಇಲಾಖೆ ಮಹತ್ವದ ತೀರ್ಮಾನ: ವಿನಾಯಕ ವೃತ್ತದ ಸುತ್ತ ಪಾರ್ಕಿಂಗ್ ನಿಷೇಧ!!!

ಸಾರ್ವಜನಿಕರ ಪರವಾಗಿ: ಸುಧೀಂದ್ರ ಪೂಜಾರಿ, ಆನಂದ ಮೆಣಸೆ, ಆರ್.ಎ. ಚಾಬುಸಾಬ್, ಆರ್.ಎನ್. ಮಂಜುನಾಥ್ ಹಾಗೂ ಪ್ರಹ್ಲಾದ ಜೋಯಿಸ್ ಅವರು ವಾಹನ ನಿಲುಗಡೆಯಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ಎಇಇ ಸುನೀಲ್, ಪಿಎಸ್‌ಐ ರಾಜುರೆಡ್ಡಿ, ಪ್ರೋಬೆಷನರಿ ಪಿಎಸ್‌ಐ ಶ್ರೀಕಾಂತ್ ಹಾಗೂ ಪಂಚಾಯಿತಿ ಸಿಬ್ಬಂದಿ ಉಪಸ್ಥಿತರಿದ್ದರು. ಸಭೆಯ ಆರಂಭದಲ್ಲಿ ಪಿಎಸ್‌ಐ ರಾಜುರೆಡ್ಡಿ ಸ್ವಾಗತಿಸಿದರು, ಉಮೇಶ್ ವಂದಿಸಿದರು.

ಪೊಲೀಸ್ ಇಲಾಖೆ ಕೈಗೊಂಡಿರುವ ಈ ಕ್ರಮಕ್ಕೆ ಸಭೆಯಲ್ಲಿ ಒಮ್ಮತದ ಬೆಂಬಲ ವ್ಯಕ್ತವಾಯಿತು.

img 20260515 wa00067391889443743375024 ರಿಪ್ಪನ್‌ಪೇಟೆಯಲ್ಲಿ ಸುಗಮ ಸಂಚಾರಕ್ಕೆ ಪೊಲೀಸ್ ಇಲಾಖೆ ಮಹತ್ವದ ತೀರ್ಮಾನ: ವಿನಾಯಕ ವೃತ್ತದ ಸುತ್ತ ಪಾರ್ಕಿಂಗ್ ನಿಷೇಧ!!!

Leave a Reply

Your email address will not be published. Required fields are marked *