ಹವಾಮಾನ ವೈಪರೀತ್ಯ ತಡೆಗೆ ಮಕ್ಕಳಲ್ಲಿ ಪರಿಸರ ಜಾಗೃತಿ ಅಗತ್ಯ : ಡಾ. ಧನಂಜಯ ಸರ್ಜಿ

ನಿವೃತ್ತ ಸೈನಿಕ ಕೆ.ವಿ ಕೃಷ್ಣಮೂರ್ತಿಗೆ ರಿಪ್ಪನ್‌ಪೇಟೆಯಲ್ಲಿ ಅದ್ದೂರಿ ಸ್ವಾಗತ 20260618 202747 0000 ಹವಾಮಾನ ವೈಪರೀತ್ಯ ತಡೆಗೆ ಮಕ್ಕಳಲ್ಲಿ ಪರಿಸರ ಜಾಗೃತಿ ಅಗತ್ಯ : ಡಾ. ಧನಂಜಯ ಸರ್ಜಿ
Spread the love
img 20260110 wa00009137981002172757718 ಹವಾಮಾನ ವೈಪರೀತ್ಯ ತಡೆಗೆ ಮಕ್ಕಳಲ್ಲಿ ಪರಿಸರ ಜಾಗೃತಿ ಅಗತ್ಯ : ಡಾ. ಧನಂಜಯ ಸರ್ಜಿ

ರಿಪ್ಪನ್‌ಪೇಟೆ: ವಾಮಾನ ವೈಪರೀತ್ಯಗಳನ್ನು ತಡೆಗಟ್ಟಲು ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸುವುದು ಇಂದಿನ ಅಗತ್ಯವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ಹೇಳಿದರು.

ಸಮೀಪದ ಕೊಡೂರು ಜಗನ್ಮಾತೆ ಜೇನುಕಲ್ಲಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಗವಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಗಿಡ ನೆಟ್ಟು ನೀರುಣಿಸಿ ಅವರು ಮಾತನಾಡಿದರು.

ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಮರಗಳನ್ನು ಬೆಳೆಸುವುದರಿಂದ ಜೀವಜಗತ್ತಿನ ಸಮತೋಲನ ಕಾಪಾಡಲು ಸಾಧ್ಯವಾಗುತ್ತದೆ. ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ನೀಡುವುದು ನಮ್ಮ ಕರ್ತವ್ಯವಾಗಿದ್ದು, ವಿದ್ಯಾರ್ಥಿಗಳಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸುವ ಕಾರ್ಯ ನಿರಂತರವಾಗಿ ನಡೆಯಬೇಕು ಎಂದು ಹೇಳಿದರು.
ಕಳೆದ 12 ವರ್ಷಗಳಿಂದ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಜನಪರ ಯೋಜನೆಗಳು ಮತ್ತು ಅಭಿವೃದ್ಧಿ ಕಾರ್ಯಗಳಿಂದ ಭಾರತವು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಿದೆ ಎಂದು ಅವರು ಅಭಿಪ್ರಾಯಿಸಿದರು.

ಕಾರ್ಯಕ್ರಮದಲ್ಲಿ ಹೊಸನಗರ ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಎನ್. ಸತೀಶ್, ಮಹಾಶಕ್ತಿ ಕೇಂದ್ರ ಅಧ್ಯಕ್ಷ  ಸುಂದರೇಶ್ ಕೆರೆಹಳ್ಳಿ, ಪ್ರಧಾನ ಕಾರ್ಯದರ್ಶಿ ಜಿ.ಡಿ. ಮಲ್ಲಿಕಾರ್ಜುನ , ಮಂಜುಳ ಕೇತಾರ್ಜಿ, ಸರಸ್ವತಿ, ,ನಾಗಾರ್ಜುನ ಸ್ವಾಮಿ, ದೇವೇಂದ್ರಪ್ಪ ಗೌಡ,ಕಗ್ಗಲಿ ಲಿಂಗಪ್ಪ, ಗಣೇಶ್ ರಾವ್, ಕಿರಣ್ ಅಬ್ಬಿ , ಪ್ರದೀಪ್, ಮಂಜು ಗೌಡ್ರು, ಪಿ.ರಮೇಶ್, ಸೂರ್ಯ ಗೌಡ, ಸೇರಿದಂತೆ ಹಲವರು ಉಪಸ್ಥಿತರಿದ್ದರು.

img 20260604 wa00397775638020799975412 ಹವಾಮಾನ ವೈಪರೀತ್ಯ ತಡೆಗೆ ಮಕ್ಕಳಲ್ಲಿ ಪರಿಸರ ಜಾಗೃತಿ ಅಗತ್ಯ : ಡಾ. ಧನಂಜಯ ಸರ್ಜಿ

Leave a Reply

Your email address will not be published. Required fields are marked *