ರಿಪ್ಪನ್‌ಪೇಟೆ ಹಾಗೂ ಸುತ್ತಮುತ್ತ ಬಕ್ರೀದ್ ಸಂಭ್ರಮ| ವಿಶೇಷ ಪ್ರಾರ್ಥನೆ – ಸೌಹಾರ್ದತೆಯ ಸಂದೇಶ ಸಾರಿದ ಧರ್ಮಗುರುಗಳು

Screenshot 20260528 210936 Canva ರಿಪ್ಪನ್‌ಪೇಟೆ ಹಾಗೂ ಸುತ್ತಮುತ್ತ ಬಕ್ರೀದ್ ಸಂಭ್ರಮ| ವಿಶೇಷ ಪ್ರಾರ್ಥನೆ - ಸೌಹಾರ್ದತೆಯ ಸಂದೇಶ ಸಾರಿದ ಧರ್ಮಗುರುಗಳು
Spread the love
img 20260110 wa00004630172433636829660 ರಿಪ್ಪನ್‌ಪೇಟೆ ಹಾಗೂ ಸುತ್ತಮುತ್ತ ಬಕ್ರೀದ್ ಸಂಭ್ರಮ| ವಿಶೇಷ ಪ್ರಾರ್ಥನೆ - ಸೌಹಾರ್ದತೆಯ ಸಂದೇಶ ಸಾರಿದ ಧರ್ಮಗುರುಗಳು
img 20260427 wa00134312001742352129150 ರಿಪ್ಪನ್‌ಪೇಟೆ ಹಾಗೂ ಸುತ್ತಮುತ್ತ ಬಕ್ರೀದ್ ಸಂಭ್ರಮ| ವಿಶೇಷ ಪ್ರಾರ್ಥನೆ - ಸೌಹಾರ್ದತೆಯ ಸಂದೇಶ ಸಾರಿದ ಧರ್ಮಗುರುಗಳು

ರಿಪ್ಪನ್‌ಪೇಟೆ:ಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮುಸ್ಲಿಂ ಬಾಂಧವರು ಬಕ್ರೀದ್ ಹಬ್ಬವನ್ನು ಭಕ್ತಿ, ಶ್ರದ್ಧೆ ಹಾಗೂ ಸಂಭ್ರಮದಿಂದ ಆಚರಿಸಿದರು. ಪಟ್ಟಣದ ಮೊಹಿಯುದ್ದೀನ್ ಜುಮ್ಮಾ ಮಸೀದಿ, ಮೆಕ್ಕಾ ಮಸೀದಿ ಹಾಗೂ ಮದೀನಾ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆಗಳು ನೆರವೇರಿದವು.

ಮೊಹಿಯುದ್ದೀನ್ ಜುಮ್ಮಾ ಮಸೀದಿಯ ಧರ್ಮಗುರು ಮುನೀರ್ ಸಖಾಫೀ ಮಾತನಾಡಿ, “ಪ್ರತಿಯೊಂದು ಧರ್ಮವನ್ನೂ ಗೌರವಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಸಹೋದರತ್ವ, ಶಾಂತಿ ಹಾಗೂ ಸೌಹಾರ್ದತೆಯಿಂದ ಬದುಕುವುದು ಇಸ್ಲಾಂ ಮತದ ಮುಖ್ಯ ಸಂದೇಶವಾಗಿದೆ. ಯಾವುದೇ ಧರ್ಮವನ್ನು ಅವಹೇಳನ ಮಾಡುವುದನ್ನು ಇಸ್ಲಾಂ ಖಂಡಿಸುತ್ತದೆ” ಎಂದು ಹೇಳಿದರು.

ನಂತರ ಜುಮ್ಮಾ ಮಸೀದಿಯಿಂದ ಮುಸ್ಲಿಂ ಬಾಂಧವರು ಈದ್ಗಾ ಮೈದಾನಕ್ಕೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಪರಸ್ಪರ ಬಕ್ರೀದ್ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.

ಈ ಸಂದರ್ಭದಲ್ಲಿ ಮೊಹಿಯುದ್ದೀನ್ ಜುಮ್ಮಾ ಮಸೀದಿ ಅಧ್ಯಕ್ಷ ಹಸನಬ್ಬ ಬ್ಯಾರಿ, ಕಾರ್ಯದರ್ಶಿ ಶೇಖಬ್ಬ, ಮುಖಂಡರಾದ ಆರ್.ಎ. ಚಾಬುಸಾಬ್, ಅಮೀರ್ ಹಂಜಾ, ಆಸೀಫ್ ಭಾಷಾಸಾಬ್, ಪತ್ರಕರ್ತ ರಫೀ ರಿಪ್ಪನ್‌ಪೇಟೆ, ಮುಸ್ತಾಫ, ಫಾಜಿಲ್, ರೆಹಮಾನ್, ನದೀಮ್, ರಹೀಮ್ ಚಾಲಿ, ಫೈಜಲ್, ಸಲೀಂ, ಅಫ್ಜಲ್ ಬ್ಯಾರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

img 20260515 wa00067269122275507795022 ರಿಪ್ಪನ್‌ಪೇಟೆ ಹಾಗೂ ಸುತ್ತಮುತ್ತ ಬಕ್ರೀದ್ ಸಂಭ್ರಮ| ವಿಶೇಷ ಪ್ರಾರ್ಥನೆ - ಸೌಹಾರ್ದತೆಯ ಸಂದೇಶ ಸಾರಿದ ಧರ್ಮಗುರುಗಳು

ಗಾಳಿಬೈಲಿನಲ್ಲಿ ವಿಶೇಷ ಪ್ರಾರ್ಥನೆ

ರಿಪ್ಪನ್‌ಪೇಟೆ ಸಮೀಪದ ಗಾಳಿಬೈಲು ಗ್ರಾಮದ ಈದ್ಗಾ ಮೈದಾನದಲ್ಲಿಯೂ ಬಕ್ರೀದ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಗಾಳಿಬೈಲು ಜುಮ್ಮಾ ಮಸೀದಿ ಧರ್ಮಗುರುಗಳ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ನಡೆಯಿತು.


ಇದೇ ವೇಳೆ ಹೊಸನಗರ, ಬಟ್ಟೆಮಲ್ಲಪ್ಪ, ಕೆಂಚನಾಲ, ಗರ್ತಿಕೆರೆ ಹಾಗೂ ಸುಣ್ಣದ ಬಸ್ತಿ ಗ್ರಾಮಗಳಲ್ಲಿಯೂ ಮುಸ್ಲಿಂ ಬಾಂಧವರು ಈದ್ಗಾ ಮೈದಾನಗಳಿಗೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಬಕ್ರೀದ್ ಹಬ್ಬವನ್ನು ಆಚರಿಸಿದರು.

Leave a Reply

Your email address will not be published. Required fields are marked *