ಸೊನಲೆ :ಭಾರಿ ಗಾಳಿ-ಮಳೆಗೆ ಅಡಿಕೆ ತೋಟಕ್ಕೆ ಹಾನಿ; ಸೂಕ್ತ ಪರಿಹಾರ ಸಿಗುತ್ತಿಲ್ಲವೆಂದು ರೈತರ ಅಳಲು

Add a heading 20260706 172827 0000 ಸೊನಲೆ :ಭಾರಿ ಗಾಳಿ-ಮಳೆಗೆ ಅಡಿಕೆ ತೋಟಕ್ಕೆ ಹಾನಿ; ಸೂಕ್ತ ಪರಿಹಾರ ಸಿಗುತ್ತಿಲ್ಲವೆಂದು ರೈತರ ಅಳಲು
Spread the love

ಹೊಸನಗರ: ತಾಲೂಕಿನ ಸೊನಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಳಗಿ ಗ್ರಾಮದಲ್ಲಿ ಸುರಿದ ಭಾರಿ ಗಾಳಿ-ಮಳೆಗೆ ಅಡಿಕೆ ತೋಟ ಹಾನಿಗೊಳಗಾದ ಘಟನೆ ನಡೆದಿದೆ.
ಕೊಳಗಿ ಗ್ರಾಮದ ಸರ್ವೇ ನಂ. 90ರ ರೈತ ಮಹಿಳೆ ಈಶ್ವರಮ್ಮ ಅವರಿಗೆ ಸೇರಿದ ಫಸಲು ನೀಡುತ್ತಿದ್ದ ಅಡಿಕೆ ತೋಟದಲ್ಲಿ 10 ರಿಂದ 12 ಅಡಿಕೆ ಮರಗಳು ನೆಲಕ್ಕುರುಳಿದ್ದು, ಕಾಳು ಮೆಣಸು ಬಳ್ಳಿಗಳು ಸೇರಿದಂತೆ ಆದಾಯ ತರುವ ಹಲವು ಗಿಡಗಳು ಹಾನಿಗೊಳಗಾಗಿವೆ.

img 20260706 wa00408738777072930398505 ಸೊನಲೆ :ಭಾರಿ ಗಾಳಿ-ಮಳೆಗೆ ಅಡಿಕೆ ತೋಟಕ್ಕೆ ಹಾನಿ; ಸೂಕ್ತ ಪರಿಹಾರ ಸಿಗುತ್ತಿಲ್ಲವೆಂದು ರೈತರ ಅಳಲು

ಪ್ರತಿ ವರ್ಷ ಮಳೆಗಾಲದಲ್ಲಿ ಇದೇ ರೀತಿಯ ಹಾನಿ ಸಂಭವಿಸುತ್ತಿದ್ದು, ಫಸಲು ನೀಡುವ ಅಡಿಕೆ ಮರಗಳು ನಾಶವಾಗುವುದರಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರಿಂದ ವರ್ಷಕ್ಕೆ ಸುಮಾರು ₹25,000 ರಿಂದ ₹30,000ರವರೆಗೆ ನಷ್ಟವಾಗುತ್ತಿದೆ ಎಂದು ರೈತರು ತಿಳಿಸಿದ್ದಾರೆ.
ಬೆಳೆ ಹಾನಿ ಸಮೀಕ್ಷೆ ಸಮರ್ಪಕವಾಗಿ ನಡೆಯದೇ, ಸರ್ಕಾರದಿಂದ ದೊರೆಯಬೇಕಾದ ಸೂಕ್ತ ಪರಿಹಾರವೂ ಸಿಗುತ್ತಿಲ್ಲ ಎಂಬುದು ರೈತರ ಆರೋಪವಾಗಿದೆ. “ಪ್ರತಿ ಬಾರಿ ಪಂಚಾಯಿತಿ ಅಧಿಕಾರಿಗಳು ಬಂದು ಫೋಟೋ ತೆಗೆದು ಹೋಗುತ್ತಾರೆ. ಆದರೆ ಪರಿಹಾರ ಮಾತ್ರ ಕೈ ಸೇರುವುದಿಲ್ಲ” ಎಂದು ಈಶ್ವರಮ್ಮ ಅವರ ಪುತ್ರ ಹಾಗೂ ರೈತ ಸತೀಶ್ ಅವರು ತಮ್ಮ ಅಳಲನ್ನು ಸುದ್ದಿಗಾರರೊಂದಿಗೆ ಹಂಚಿಕೊಂಡಿದ್ದಾರೆ.

Leave a Reply

Your email address will not be published. Required fields are marked *