ರಿಪ್ಪನ್‌ಪೇಟೆ, ಹರತಾಳು,ಗರ್ತಿಕೆರೆಯಲ್ಲಿ ರಾಯರ 355ನೇ ಆರಾಧನೆ: ಹರಿದು ಬಂದ ಭಕ್ತ ಸಾಗರ

Addaheading 20260830 184835 0000 ರಿಪ್ಪನ್‌ಪೇಟೆ, ಹರತಾಳು,ಗರ್ತಿಕೆರೆಯಲ್ಲಿ ರಾಯರ 355ನೇ ಆರಾಧನೆ: ಹರಿದು ಬಂದ ಭಕ್ತ ಸಾಗರ
Spread the love

ರಿಪ್ಪನ್‌ಪೇಟೆ: ಲೆನಾಡಿನಾದ್ಯಂತ ಭಕ್ತಿಭಾವದ ವಾತಾವರಣದಲ್ಲಿ ಶ್ರೀ ಗುರು ರಾಘವೇಂದ್ರಸ್ವಾಮಿಗಳ 355ನೇ ಆರಾಧನಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು. ರಿಪ್ಪನ್‌ಪೇಟೆ ಪಟ್ಟಣದ ಕಿರು ಮಂತ್ರಾಲಯ, ಜಿ.ಎಸ್.ಬಿ ಸಮಾಜ, ಸಮೀಪದ ಗರ್ತಿಕೆರೆ ಹಾಗೂ ಹರತಾಳು ಶ್ರೀ ರಾಘವೇಂದ್ರ ಸ್ವಾಮಿ ಮಠಗಳಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಗುರುರಾಯರ ದರ್ಶನ ಪಡೆದು ಪುಣ್ಯಾರಾಧನೆಯಲ್ಲಿ ಭಾಗಿಯಾದರು.

image editor output image981284957 17880959875218666820111498369049 ರಿಪ್ಪನ್‌ಪೇಟೆ, ಹರತಾಳು,ಗರ್ತಿಕೆರೆಯಲ್ಲಿ ರಾಯರ 355ನೇ ಆರಾಧನೆ: ಹರಿದು ಬಂದ ಭಕ್ತ ಸಾಗರ
ಶ್ರೀ ಗುರು ರಾಘವೇಂದ್ರಸ್ವಾಮಿಗಳ 355ನೇ ಆರಾಧನಾ ಮಹೋತ್ಸವ ವ ರಿಪ್ಪನ್‌ಪೇಟೆ ಪಟ್ಟಣದ ಕಿರು ಮಂತ್ರಾಲಯ ಹರಿದು ಬಂದ ಭಕ್ತಸಾಗರ

  ಪಟ್ಟಣದ ಪ್ರಸಿದ್ಧ ಕಿರು ಮಂತ್ರಾಲಯದಲ್ಲಿ ಪ್ರಾತಃಕಾಲದಿಂದಲೇ ವಿಶೇಷ ಪೂಜೆ, ಪುಣ್ಯಾರಾಧನೆ, ಪಂಚಾಮೃತ ಮಹಾಭಿಷೇಕ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ಮತ್ತು ಸಂಜೆ ಭಜನಾ ಕಾರ್ಯಕ್ರಮ ಜರುಗಿತು . ವಿವಿಧ ಭಾಗಗಳಿಂದ ಆಗಮಿಸಿದ ಭಕ್ತರು ರಾಯರ ಸನ್ನಿಧಿಯಲ್ಲಿ ಸೇವೆ ಸಲ್ಲಿಸಿ ತೀರ್ಥ ಹಾಗೂ ಅನ್ನಪ್ರಸಾದ ಸ್ವೀಕರಿಸಿದರು.

20260830 1408582770542185475853701 ರಿಪ್ಪನ್‌ಪೇಟೆ, ಹರತಾಳು,ಗರ್ತಿಕೆರೆಯಲ್ಲಿ ರಾಯರ 355ನೇ ಆರಾಧನೆ: ಹರಿದು ಬಂದ ಭಕ್ತ ಸಾಗರ
ಅನ್ನಸಂತರ್ಪಣೆ
file 0000000089848208b0189b203d707f904190295771985063363 ರಿಪ್ಪನ್‌ಪೇಟೆ, ಹರತಾಳು,ಗರ್ತಿಕೆರೆಯಲ್ಲಿ ರಾಯರ 355ನೇ ಆರಾಧನೆ: ಹರಿದು ಬಂದ ಭಕ್ತ ಸಾಗರ

  ಪಟ್ಟಣದ  ಜಿ.ಎಸ್.ಬಿ ಸಮಾಜದಲ್ಲಿಯೂ ಆರಾಧನಾ ಮಹೋತ್ಸವ ಅತ್ಯಂತ ಭಕ್ತಿಪೂರ್ವಕವಾಗಿ ನಡೆಯಿತು. ವಿಶೇಷ ಪೂಜೆ, ಗುರುಸ್ತೋತ್ರ ಪಾರಾಯಣ ಹಾಗೂ ಮಂಗಳಾರತಿ, ಭಜನಾ ಕಾರ್ಯಕ್ರಮ  ನೆರವೇರಿದವು. ಸಮಾಜದ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಹಾಗೂ ಸಮಾಜ ಬಾಂಧವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

image editor output image1432263821 1788096127200746296538699114681 ರಿಪ್ಪನ್‌ಪೇಟೆ, ಹರತಾಳು,ಗರ್ತಿಕೆರೆಯಲ್ಲಿ ರಾಯರ 355ನೇ ಆರಾಧನೆ: ಹರಿದು ಬಂದ ಭಕ್ತ ಸಾಗರ
ಪಟ್ಟಣದ ಜಿ.ಎಸ್. ಬಿ ಸಮಾಜದಲ್ಲಿ ವಿಜೃಂಭಣೆಯಿಂದ ಆರಾಧನಾ ಮಹೋತ್ಸವ ಜರುಗಿತು.

  ಸಮೀಪದ ಗರ್ತಿಕೆರೆ ಶ್ರೀ ರಾಘವೇಂದ್ರ ಮಠದಲ್ಲಿ 355ನೇ ಆರಾಧನೆ ವಿಜೃಂಭಣೆಯಿಂದ ಆಚರಿಸಲಾಯಿತು. ರಾಯರ ಮೂಲ ಬೃಂದಾವನಕ್ಕೆ ವಿಶೇಷ ಅಲಂಕಾರ ಮಾಡಲಾಗಿದ್ದು, ಪೂಜೆ, ಪುಣ್ಯಾರಾಧನೆ ಮತ್ತು ತೀರ್ಥ ಪ್ರಸಾದ ವಿತರಣೆಯಲ್ಲಿ ನೂರಾರು ಭಕ್ತರು ಗರ್ತಿಕೆರೆ, ಹೆದ್ದಾರಿಪುರ, ಹುಂಚ, ಸೊನಲೆ, ಕೋಣಂದೂರು ಭಾಗದ ಭಕ್ತರು  ಭಾಗವಹಿಸಿದರು.

20260830 1449524574538045634664260 ರಿಪ್ಪನ್‌ಪೇಟೆ, ಹರತಾಳು,ಗರ್ತಿಕೆರೆಯಲ್ಲಿ ರಾಯರ 355ನೇ ಆರಾಧನೆ: ಹರಿದು ಬಂದ ಭಕ್ತ ಸಾಗರ

  ಅದೇ ರೀತಿ ಹರತಾಳು ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿಯೂ ಆರಾಧನಾ ಮಹೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು. ವಿಶೇಷ ಅಭಿಷೇಕ, ಪೂಜೆ, ಮಂಗಳಾರತಿ ಹಾಗೂ ಅನ್ನಸಂತರ್ಪಣೆಯಲ್ಲಿ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಗುರುರಾಯರ ಆಶೀರ್ವಾದ ಪಡೆದರು.

wp image7953285589121498390 ರಿಪ್ಪನ್‌ಪೇಟೆ, ಹರತಾಳು,ಗರ್ತಿಕೆರೆಯಲ್ಲಿ ರಾಯರ 355ನೇ ಆರಾಧನೆ: ಹರಿದು ಬಂದ ಭಕ್ತ ಸಾಗರ
ಗರ್ತಿಕೆರೆ ಶ್ರೀ ಗುರುರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಅತ್ಯಂತ ವೈಭವದಿಂದ ರಾಯರನ್ನು ಅಲಂಕರಿಸಿ ವಿಜೃಂಭಣೆಯಿಂದ ಆರಾಧಿಸಲಾಯಿತು.
file 000000003f5c8208a0b120fec3430d9d1280901279810151631 ರಿಪ್ಪನ್‌ಪೇಟೆ, ಹರತಾಳು,ಗರ್ತಿಕೆರೆಯಲ್ಲಿ ರಾಯರ 355ನೇ ಆರಾಧನೆ: ಹರಿದು ಬಂದ ಭಕ್ತ ಸಾಗರ

Leave a Reply

Your email address will not be published. Required fields are marked *