ರಿಪ್ಪನ್‌ಪೇಟೆಯಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ:ದೇಶಭಕ್ತಿಯ ಕಲರವ,ಮೊಳಗಿದ ವಂದೇ ಮಾತರಂ ಘೋಷಣೆ

Addaheading 20260815 184749 0000 ರಿಪ್ಪನ್‌ಪೇಟೆಯಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ:ದೇಶಭಕ್ತಿಯ ಕಲರವ,ಮೊಳಗಿದ ವಂದೇ ಮಾತರಂ ಘೋಷಣೆ
Spread the love

ರಿಪ್ಪನ್‌ಪೇಟೆ: ದೇಶದ 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ರಿಪ್ಪನ್‌ಪೇಟೆ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮ, ಸಡಗರ ಹಾಗೂ ದೇಶಭಕ್ತಿಯ ವಾತಾವರಣದಲ್ಲಿ ಆಚರಿಸಲಾಯಿತು.
ಮಕ್ಕಳಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಭ್ರಮದ ಪಥಸಂಚಲನ ನೆರವೇರಿತು.

   ರಿಪ್ಪನ್‌ಪೇಟೆ ಗ್ರಾಮ ಪಂಚಾಯಿತಿ ಆವರಣದಲ್ಲಿ ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿ ರಾಜೇಂದ್ರಕುಮಾರ್ ಅವರು ಧ್ವಜಾರೋಹಣ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸಾರ್ವಜನಿಕರು, ವಿವಿಧ ಇಲಾಖೆಗಳ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಸ್ಥಳೀಯರು ಭಾಗವಹಿಸಿ ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಿದರು.

20260815 102355281297913080438544436494 ರಿಪ್ಪನ್‌ಪೇಟೆಯಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ:ದೇಶಭಕ್ತಿಯ ಕಲರವ,ಮೊಳಗಿದ ವಂದೇ ಮಾತರಂ ಘೋಷಣೆ

   ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ ರಾಜುರೆಡ್ಡಿ, ನಾಡಕಚೇರಿಯಲ್ಲಿ ಉಪತಹಸೀಲ್ದಾರ್ ಗೌತಮ್, ಸಮಾಜ ಕಲ್ಯಾಣ ಇಲಾಖೆಯ ಬಾಲಕರ ವಸತಿ ನಿಲಯದಲ್ಲಿ ಮೇಲ್ವಿಚಾರಕ ರಾಘವೇಂದ್ರ, ಬಿ.ಸಿ.ಎಂ. ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಮೇಲ್ವಿಚಾರಕಿ ಸುಮಿತ್ರಭಾಯಿ ಧ್ವಜಾರೋಹಣ ನೆರವೇರಿಸಿದರು.

img 20260815 wa00223447091049270780183 ರಿಪ್ಪನ್‌ಪೇಟೆಯಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ:ದೇಶಭಕ್ತಿಯ ಕಲರವ,ಮೊಳಗಿದ ವಂದೇ ಮಾತರಂ ಘೋಷಣೆ


ವಿವಿಧ ಶಾಲಾ-ಕಾಲೇಜುಗಳಲ್ಲಿಯೂ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಬರುವೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿ ಅಂಬಿಕಾ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಮಂಜಪ್ಪ, ಮೂಗುಡ್ತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಯತೀಶ್ ಎಂ.ಎಸ್., ಗುಡ್‌ಶಫರ್ಡ್ ಶಾಲೆಯಲ್ಲಿ ಫಾದರ್ ಬಿನೋಯ್, ಮೇರಿಮಾತಾ ಪ್ರೌಢಶಾಲೆಯಲ್ಲಿ ಸಿಸ್ಟರ್ ಫಾತಿಮಾ ಧ್ವಜಾರೋಹಣ ನೆರವೇರಿಸಿದರು.

d 15 rpt 4p1839089927048141056 ರಿಪ್ಪನ್‌ಪೇಟೆಯಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ:ದೇಶಭಕ್ತಿಯ ಕಲರವ,ಮೊಳಗಿದ ವಂದೇ ಮಾತರಂ ಘೋಷಣೆ
20260815 0903389066284352313902689 ರಿಪ್ಪನ್‌ಪೇಟೆಯಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ:ದೇಶಭಕ್ತಿಯ ಕಲರವ,ಮೊಳಗಿದ ವಂದೇ ಮಾತರಂ ಘೋಷಣೆ
file 0000000099cc82119ed5f6fe1ce018065699240868563211358 ರಿಪ್ಪನ್‌ಪೇಟೆಯಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ:ದೇಶಭಕ್ತಿಯ ಕಲರವ,ಮೊಳಗಿದ ವಂದೇ ಮಾತರಂ ಘೋಷಣೆ

ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸಿಡಿಸಿ ಉಪಾಧ್ಯಕ್ಷ ಜಿ.ಆರ್. ಗೋಪಾಲಕೃಷ್ಣ, ಸರ್ಕಾರಿ ಕೆಪಿಎಸ್ ಪ್ರೌಢಶಾಲೆಯಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಚಂದ್ರು,ಹೆದ್ದಾರಿಪುರ ಸರ್ಕಾರಿ ಪ್ರೌಢಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಸುರೇಶ್, ಅಮೃತ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಹಾಲಪ್ಪ ಸಂಕೂರ್, ಸೇಫ್ ಸ್ಟಾರ್ ಸೌಹಾರ್ದ ಸಹಕಾರಿ ಸಂಘದ ರಿಪ್ಪನ್‌ಪೇಟೆ ಶಾಖೆಯಲ್ಲಿ ಶಾಖಾ ವ್ಯವಸ್ಥಾಪಕ ಆರ್. ಪ್ರತಾಪ್, ಅರಸಾಳು ವಲಯ ಅರಣ್ಯ ಕಚೇರಿಯಲ್ಲಿ ವಲಯ ಅರಣ್ಯಾಧಿಕಾರಿ ಶರಣಪ್ಪ, ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿ ಡಾ. ಅಂಜನಪ್ಪ, ಶ್ರೀ ಬಸವೇಶ್ವರ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮುಖ್ಯ ಶಿಕ್ಷಕ ವರ್ತೇಶ್‌ಗೌಡ ಹುಗುಡಿ, ಜಂಬಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಮಹಮ್ಮದ್ ರಫಿ, ಜಂಬಳ್ಳಿ ಶ್ರೀ ಗಜಾನನ ಯುವಕ ಸಂಘದಲ್ಲಿ ಅಧ್ಯಕ್ಷ ಜೆ.ಎಂ. ಶಾಂತಕುಮಾರ್, ಮುಗುಡ್ತಿ  ವನ್ಯಜೀವಿ ವಿಭಾಗದಲ್ಲಿ ವಲಯ ಅರಣ್ಯಾಧಿಕಾರಿ ಪ್ರಮೋದ್, ಅರಸಾಳು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಪಿಡಿಒ ರವಿ ಎಂ ಎಸ್,ಕೋಡೂರು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಪಿಡಿಒ ಎಸ್. ನಾಗರಾಜ್, ಗವಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಸೀತಾರಾಮ್, ಹುಂಚ ಗ್ರಾಮ ಪಂಚಾಯಿತಿಯಲ್ಲಿ ಪಿಡಿಒ ರಮೇಶ್, ಹುಂಚ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿ ನಿತೀಶ್ ಹಾಗೂ ರೈತ ಸಂಪರ್ಕ ಕೇಂದ್ರದಲ್ಲಿ ಸಹಾಯಕ ಕೃಷಿ ಅಧಿಕಾರಿಗಳು ರಾಷ್ಟ್ರಧ್ವಜಾರೋಹಣ ನೆರವೇರಿಸಿದರು.

img 20260815 wa00263323614488483807555 ರಿಪ್ಪನ್‌ಪೇಟೆಯಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ:ದೇಶಭಕ್ತಿಯ ಕಲರವ,ಮೊಳಗಿದ ವಂದೇ ಮಾತರಂ ಘೋಷಣೆ
img 20260815 wa00281090102506053575168 ರಿಪ್ಪನ್‌ಪೇಟೆಯಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ:ದೇಶಭಕ್ತಿಯ ಕಲರವ,ಮೊಳಗಿದ ವಂದೇ ಮಾತರಂ ಘೋಷಣೆ
img 20260815 wa00357459692178942802524 ರಿಪ್ಪನ್‌ಪೇಟೆಯಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ:ದೇಶಭಕ್ತಿಯ ಕಲರವ,ಮೊಳಗಿದ ವಂದೇ ಮಾತರಂ ಘೋಷಣೆ

ವಿವಿಧೆಡೆ ನಡೆದ ಕಾರ್ಯಕ್ರಮಗಳಲ್ಲಿ ರಾಷ್ಟ್ರಗೀತೆ, ದೇಶಭಕ್ತಿ ಗೀತೆಗಳು ಹಾಗೂ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ-ಬಲಿದಾನಗಳ ಸ್ಮರಣೆ ನಡೆಯಿತು. ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ದೇಶದ ಏಕತೆ, ಅಖಂಡತೆ ಮತ್ತು ಅಭಿವೃದ್ಧಿಗಾಗಿ ತಮ್ಮ ಕರ್ತವ್ಯಗಳನ್ನು ಪಾಲಿಸುವ ಸಂಕಲ್ಪ ಕೈಗೊಂಡರು.

20260815 0826046552498751180674493 ರಿಪ್ಪನ್‌ಪೇಟೆಯಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ:ದೇಶಭಕ್ತಿಯ ಕಲರವ,ಮೊಳಗಿದ ವಂದೇ ಮಾತರಂ ಘೋಷಣೆ
img 20260815 wa00156231792911345905537 ರಿಪ್ಪನ್‌ಪೇಟೆಯಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ:ದೇಶಭಕ್ತಿಯ ಕಲರವ,ಮೊಳಗಿದ ವಂದೇ ಮಾತರಂ ಘೋಷಣೆ

Leave a Reply

Your email address will not be published. Required fields are marked *