ಅರಸಾಳು ಗ್ರಾಮ ಪಂಚಾಯತ್ ವಿರುದ್ಧ ಜನಾಕ್ರೋಶ|ರಸ್ತೆ ಸಮಸ್ಯೆ ಬಗೆಹರಿಸದಿದ್ದರೆ ಮತ ಬಹಿಷ್ಕಾರ; ಸಿದ್ದೇಶ್ವರ ಬಡಾವಣೆಯ ನಿವಾಸಿಗಳ ಎಚ್ಚರಿಕೆ!

Addaheading 20260805 090942 0000 ಅರಸಾಳು ಗ್ರಾಮ ಪಂಚಾಯತ್ ವಿರುದ್ಧ ಜನಾಕ್ರೋಶ|ರಸ್ತೆ ಸಮಸ್ಯೆ ಬಗೆಹರಿಸದಿದ್ದರೆ ಮತ ಬಹಿಷ್ಕಾರ; ಸಿದ್ದೇಶ್ವರ ಬಡಾವಣೆಯ ನಿವಾಸಿಗಳ ಎಚ್ಚರಿಕೆ!
Spread the love

ರಿಪ್ಪನ್‌ಪೇಟೆ: ಮೀಪದ ಅರಸಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆನವಳ್ಳಿ ಗ್ರಾಮದ ಸಿದ್ದೇಶ್ವರ ಕಾಲೋನಿಯಲ್ಲಿ ಮೂಲಸೌಕರ್ಯದ ಕೊರತೆ ತೀವ್ರವಾಗಿದ್ದು, ರಸ್ತೆ ಸಮಸ್ಯೆ ಬಗೆಹರಿಸದಿದ್ದರೆ ಮುಂದಿನ ಎಲ್ಲ ಚುನಾವಣೆಗಳಲ್ಲಿ ಮತ ಬಹಿಷ್ಕಾರ ಮಾಡುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ಸಿದ್ದೇಶ್ವರ ಕಾಲೋನಿಯಲ್ಲಿ ಸುಮಾರು 10 ಕುಟುಂಬಗಳು ಕಳೆದ 30-40 ವರ್ಷಗಳಿಂದ ವಾಸಿಸುತ್ತಿದ್ದು, ಕಾಲೋನಿಯ ಮಣ್ಣಿನ ರಸ್ತೆ ಸಂಪೂರ್ಣ ಕೆಸರಿನಿಂದ ಕೂಡಿದ ಗದ್ದೆಯಂತಾಗಿದೆ. ಮಳೆ ಬಂದಾಗ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತಿದ್ದು, ನಿವಾಸಿಗಳು ನಿತ್ಯ ಸಂಚಾರ ನಡೆಸುವುದೇ ದುಸ್ತರವಾಗಿದೆ.

addaheading 20260805 091032 00006796453091028393613 ಅರಸಾಳು ಗ್ರಾಮ ಪಂಚಾಯತ್ ವಿರುದ್ಧ ಜನಾಕ್ರೋಶ|ರಸ್ತೆ ಸಮಸ್ಯೆ ಬಗೆಹರಿಸದಿದ್ದರೆ ಮತ ಬಹಿಷ್ಕಾರ; ಸಿದ್ದೇಶ್ವರ ಬಡಾವಣೆಯ ನಿವಾಸಿಗಳ ಎಚ್ಚರಿಕೆ!

   ನಿವಾಸಿಗಳ ಪ್ರಕಾರ, ರಸ್ತೆ ವಾಹನ ಸಂಚಾರಕ್ಕಷ್ಟೇ ಅಲ್ಲದೆ ಕಾಲ್ನಡಿಗೆಯಲ್ಲೂ ಸಾಗಲು ಸಾಧ್ಯವಾಗದಷ್ಟು ಹದಗೆಟ್ಟಿದೆ. ಈ ಕುರಿತು ಗ್ರಾಮ ಪಂಚಾಯಿತಿ, ಪಿಡಿಓ ಅವರಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಅವರು ಆರೋಪಿಸಿದ್ದಾರೆ.

20260803 1038027767554442944620347 ಅರಸಾಳು ಗ್ರಾಮ ಪಂಚಾಯತ್ ವಿರುದ್ಧ ಜನಾಕ್ರೋಶ|ರಸ್ತೆ ಸಮಸ್ಯೆ ಬಗೆಹರಿಸದಿದ್ದರೆ ಮತ ಬಹಿಷ್ಕಾರ; ಸಿದ್ದೇಶ್ವರ ಬಡಾವಣೆಯ ನಿವಾಸಿಗಳ ಎಚ್ಚರಿಕೆ!


‘ಕನಿಷ್ಠ ಜೆಲ್ಲಿಕಲ್ಲಾದರೂ ಹಾಕಿ – ಮತ ಬಹಿಷ್ಕಾರದ ಎಚ್ಚರಿಕೆ
“ನಾವು ನಾಳೆಯೇ ಟಾರ್ ಅಥವಾ ಕಾಂಕ್ರೀಟ್ ರಸ್ತೆ ನಿರ್ಮಿಸಿ ಎಂದು ಕೇಳುತ್ತಿಲ್ಲ. ಕನಿಷ್ಠ ಮಟ್ಟದಲ್ಲಿ ಜೆಲ್ಲಿಕಲ್ಲು ಹಾಕಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಎಂದು ಮಾತ್ರ ಮನವಿ ಮಾಡಿದ್ದೇವೆ. ಅದಕ್ಕೂ ಸ್ಪಂದನೆ ಸಿಗದ ಕಾರಣ, ಗ್ರಾಮ ಪಂಚಾಯಿತಿಯಿಂದ ಲೋಕಸಭೆಯವರೆಗೆ ನಡೆಯುವ ಯಾವುದೇ ಚುನಾವಣೆಯಲ್ಲಿ ಮತ ಚಲಾಯಿಸುವುದಿಲ್ಲ. ಮತ ಬಹಿಷ್ಕಾರವೇ ನಮ್ಮ ಮುಂದಿನ ನಿರ್ಧಾರ” ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.

20260803 1033531154087259614666948 ಅರಸಾಳು ಗ್ರಾಮ ಪಂಚಾಯತ್ ವಿರುದ್ಧ ಜನಾಕ್ರೋಶ|ರಸ್ತೆ ಸಮಸ್ಯೆ ಬಗೆಹರಿಸದಿದ್ದರೆ ಮತ ಬಹಿಷ್ಕಾರ; ಸಿದ್ದೇಶ್ವರ ಬಡಾವಣೆಯ ನಿವಾಸಿಗಳ ಎಚ್ಚರಿಕೆ!

ಶಾಸಕರ ಮೇಲೂ ಅಸಮಾಧಾನ
“ನಮ್ಮ ಬಡಾವಣೆಯ ಸಮಸ್ಯೆಯನ್ನು ಈ ಹಿಂದೆಯೇ ಶಾಸಕ ಗೋಪಾಲಕೃಷ್ಣ ಬೇಳೂರು ಅವರ ಗಮನಕ್ಕೂ ತಂದಿದ್ದೆವು. ಆದರೆ ಇದುವರೆಗೂ ಯಾವುದೇ ಸ್ಪಂದನೆ ದೊರೆತಿಲ್ಲ” ಎಂದು ಗ್ರಾಮಸ್ಥರು ಜನಪ್ರತಿನಿಧಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಅಪಘಾತಗಳು ನಿತ್ಯದ ಕಥೆ
ಕೆಸರಿನ ರಸ್ತೆಯಲ್ಲಿ ದ್ವಿಚಕ್ರ ವಾಹನಗಳು ಜಾರಿ ಬೀಳುವುದು ಸಾಮಾನ್ಯವಾಗಿದ್ದು, ಹಲವರು ಗಾಯಗೊಳ್ಳುತ್ತಿದ್ದಾರೆ. ಮಾಧ್ಯಮ ಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿದ್ದ ವೇಳೆ ಕೂಡ ಬೈಕ್ ಸವಾರರೊಬ್ಬರು ಕೆಸರಿನಲ್ಲಿ ಜಾರಿ ಬಿದ್ದು ಗಾಯಗೊಂಡ ಘಟನೆ ನಡೆದಿದೆ.

ಗರ್ಭಿಣಿಯನ್ನು ಆಸ್ಪತ್ರೆಗೆ ಕರೆದೊಯ್ಯುವುದೇ ದೊಡ್ಡ ಸವಾಲು:
ಮಾಧ್ಯಮದವರೊಂದಿಗೆ ಮಾತನಾಡಿದ ಮಹಿಳೆಯೊಬ್ಬರು, “ನಮ್ಮ ಮಗಳು ಗರ್ಭಿಣಿಯಾಗಿದ್ದು, ಯಾವ ಕ್ಷಣದಲ್ಲಾದರೂ ಹೆರಿಗೆ ಆಗುವ ಪರಿಸ್ಥಿತಿ ಇದೆ. ಇಂತಹ ರಸ್ತೆಯಲ್ಲಿ ಆಕೆಯನ್ನು ಆಸ್ಪತ್ರೆಗೆ ಹೇಗೆ ಕರೆದೊಯ್ಯುವುದು? ವಾಹನ ಕೂಡ ಮನೆ ಬಾಗಿಲಿನವರೆಗೆ ಬರಲು ಸಾಧ್ಯವಿಲ್ಲ. ನಮ್ಮ ಪರಿಸ್ಥಿತಿಯನ್ನು ಯಾರು ಅರ್ಥ ಮಾಡಿಕೊಳ್ಳುತ್ತಾರೆ?” ಎಂದು ಕಣ್ಣೀರಿನ ಅಳಲು ತೋಡಿಕೊಂಡರು. ಸಿದ್ದೇಶ್ವರ ಬಡಾವಣೆ ನಿವಾಸಿಗಳು, ರಸ್ತೆ ದುರಸ್ತಿ ಕಾರ್ಯ ಕೈಗೊಂಡು ಸುಗಮ ಸಂಚಾರಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳನ್ನು ಆಗ್ರಹಿಸಿದ್ದಾರೆ.

ಇನ್ನಾದರೂ ಗ್ರಾಮ ಆಡಳಿತ ಎಚ್ಚೆತ್ತುಕೊಂಡು ಜನರ ಸಮಸ್ಯೆಯನ್ನು ಬಗೆಹರಿಸುತ್ತಾರಾ ಎಂದು ಕಾದು ನೋಡಬೇಕಿದೆ?

E0B2AEE0B380E0B2A8E0B2BEE0B295E0B38DE0B2B7E0B2BF2CE0B297E0B2BEE0B2AFE0B297E0B38AE0B282E0B2A1E0B2AEE0B2B9E0B2BFE0B2B3E0B3867826954209645521692 ಅರಸಾಳು ಗ್ರಾಮ ಪಂಚಾಯತ್ ವಿರುದ್ಧ ಜನಾಕ್ರೋಶ|ರಸ್ತೆ ಸಮಸ್ಯೆ ಬಗೆಹರಿಸದಿದ್ದರೆ ಮತ ಬಹಿಷ್ಕಾರ; ಸಿದ್ದೇಶ್ವರ ಬಡಾವಣೆಯ ನಿವಾಸಿಗಳ ಎಚ್ಚರಿಕೆ!


  ಈ ರಸ್ತೆಯಲ್ಲಿ ಕಾಲ್ನಡಿಗೆಯಲ್ಲೇ ಸಂಚರಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇಂದು ನಾನು ಬೈಕ್‌ನಲ್ಲಿ ಹಿಂಬದಿಯಲ್ಲಿ ಕುಳಿತು ಬರುತ್ತಿದ್ದ ವೇಳೆ ಕೆಸರಿನಲ್ಲಿ ಜಾರಿ ಬಿದ್ದು ಗಾಯಗೊಂಡಿದ್ದೇನೆ. ಇಂತಹ ಘಟನೆಗಳು ಇಲ್ಲಿ ಪ್ರತಿದಿನ ನಡೆಯುತ್ತಿವೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಸಂಬಂಧಪಟ್ಟ ಅಧಿಕಾರಿಗಳನ್ನು ಒತ್ತಾಯಿಸುತ್ತೇವೆ.
  – ಮೀನಾಕ್ಷಿ, ಬಡಾವಣೆ ನಿವಾಸಿ

E0B2B9E0B38AE0B2B3E0B386E0B2AFE0B2AAE0B38DE0B2AAE0B297E0B38CE0B2A1475023166560054070 ಅರಸಾಳು ಗ್ರಾಮ ಪಂಚಾಯತ್ ವಿರುದ್ಧ ಜನಾಕ್ರೋಶ|ರಸ್ತೆ ಸಮಸ್ಯೆ ಬಗೆಹರಿಸದಿದ್ದರೆ ಮತ ಬಹಿಷ್ಕಾರ; ಸಿದ್ದೇಶ್ವರ ಬಡಾವಣೆಯ ನಿವಾಸಿಗಳ ಎಚ್ಚರಿಕೆ!


ಈ ರಸ್ತೆ ಸಮಸ್ಯೆ ಕುರಿತು ಹಲವು ಬಾರಿ ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದ್ದೇವೆ. ಶಾಸಕರ ಗಮನಕ್ಕೂ ತಂದಿದ್ದೇವೆ. ಆದರೆ ಇದುವರೆಗೂ ಯಾರಿಂದಲೂ ಯಾವುದೇ ಸ್ಪಂದನೆ ದೊರೆತಿಲ್ಲ. ಇದೇ ನಿರ್ಲಕ್ಷ್ಯ ಮುಂದುವರಿದರೆ ಮುಂಬರುವ ಚುನಾವಣೆಗಳಲ್ಲಿ ಮತ ಬಹಿಷ್ಕಾರ ಮಾಡುತ್ತೇವೆ. ಜೊತೆಗೆ ಬಡಾವಣೆಯ ಎಲ್ಲಾ ನಿವಾಸಿಗಳು ಸೇರಿ ಗ್ರಾಮ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಿದ್ದೇವೆ.
– ಹೊಳೆಯಪ್ಪ ಗೌಡ, ಬಡಾವಣೆ ನಿವಾಸಿ

Leave a Reply

Your email address will not be published. Required fields are marked *