ಹೆದ್ದಾರಿಪುರ ವಲಯದ ಮುಗುಡ್ತಿಯಲ್ಲಿ DIGIPAY LITE ಸೇವೆಗೆ ಚಾಲನೆ | ಗ್ರಾಮೀಣ ಜನರಿಗೆ ಡಿಜಿಟಲ್ ಬ್ಯಾಂಕಿಂಗ್ ಸೌಲಭ್ಯ

Add a heading 20260802 203509 0000 ಹೆದ್ದಾರಿಪುರ ವಲಯದ ಮುಗುಡ್ತಿಯಲ್ಲಿ DIGIPAY LITE ಸೇವೆಗೆ ಚಾಲನೆ | ಗ್ರಾಮೀಣ ಜನರಿಗೆ ಡಿಜಿಟಲ್ ಬ್ಯಾಂಕಿಂಗ್ ಸೌಲಭ್ಯ
Spread the love

ರಿಪ್ಪನ್‌ಪೇಟೆ:ಗ್ರಾಮೀಣ ಜನರಿಗೆ ಡಿಜಿಟಲ್ ಸೇವೆಯನ್ನು ನೀಡುವ ಗುರಿಯೊಂದಿಗೆ ಒಂದು ಸುರಕ್ಷಿತ ಮತ್ತು ಸುಲಭ ಸೇವೆಯನ್ನು ನೀಡುವ ಉದ್ದೇಶ ದಿಂದ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯೂ ಈ ಸೇವೆ ಪ್ರಾರಂಭಿಸಿದೆ ಎಂದು ಒಕ್ಕೂಟದ ಅಧ್ಯಕ್ಷ ರಾಮು ಕೆ.ಆರ್ ಅವರು ಹೇಳಿದರು.

   ಸಮೀಪದ ಹೆದ್ದಾರಿಪುರದ ಮುಗೂಡ್ತಿ ಗ್ರಾಮದಲ್ಲಿರುವ ಹಣ ಸಂಗ್ರಹಣಾ ಕೇಂದ್ರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ.) ಬಿ.ಸಿ. ಟ್ರಸ್ಟ್  ಇವರ ಡಿಜಿಟಲ್‌ ಪೇ ಸೇವೆಗೆ ಚಾಲನೆ ನೀಡಿ ಅವರು ಮಾತನಾಡಿದರು.

   ಹೆದ್ದಾರಿಪುರ ವಲಯದ ಮೇಲ್ವಿಚಾರಕ ಸುಬ್ರಹ್ಮಣ್ಯ ಮಾತನಾಡಿ, DIGIPAY ಮೂಲಕ  ಡಿಜಿಟಲ್ ಬ್ಯಾಂಕಿಂಗ್ ಸೇವೆಗಳನ್ನು ಗ್ರಾಮೀಣ ಜನರಿಗೆ ಇನ್ನಷ್ಟು ಹತ್ತಿರಕ್ಕೆ ತಲುಪಿಸುವುದು, ಸುರಕ್ಷಿತ ಹಣಕಾಸು ವಹಿವಾಟಿಗೆ ಉತ್ತೇಜನ ನೀಡುವುದು ಹಾಗೂ ಸದಸ್ಯರಿಗೆ ತ್ವರಿತ ಸೇವೆ ಒದಗಿಸುವುದು ಯೋಜನೆಯ ಉದ್ದೇಶ ಎಂದು ಹೇಳಿದರು

  ಈ ಸಂದರ್ಭದಲ್ಲಿ  ಸಾಮಾನ್ಯ ಸೇವಾ ಕೇಂದ್ರದ ನೋಡಲ್ ಅಧಿಕಾರಿಯವರಾದ ಗಣೇಶ್  ಪ್ರತಿನಿಧಿಯವರಾದ ಅಶ್ವಿನಿ,ಒಕ್ಕೂಟದ ಕಾರ್ಯದರ್ಶಿಯವರಾದ ಶರಾವತಿ. ಹಾಗೂ ಸೇವಾದಾರರಾದ ನವ್ಯ  ಸುವಿಧಾ, ಮಾಯಾ ಹಾಗೂ ತಂಡದ  ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *