ವಿನಾಯಕ ಲೋಕ ಖ್ಯಾತಿಯ ಕೆ.ಎಸ್. ವಿನಾಯಕ ಅವರಿಗೆ ಸರಸ್ವತಿ ಕನ್ನಡ ರತ್ನ ಪ್ರಶಸ್ತಿ

IMG 20260420 WA0078 ವಿನಾಯಕ ಲೋಕ ಖ್ಯಾತಿಯ ಕೆ.ಎಸ್. ವಿನಾಯಕ ಅವರಿಗೆ ಸರಸ್ವತಿ ಕನ್ನಡ ರತ್ನ ಪ್ರಶಸ್ತಿ
Spread the love

ಹೊಸನಗರ:ಪ್ರತಿ ವರ್ಷ ಗಣಪತಿ ಹಬ್ಬದ ಸಂದರ್ಭದಲ್ಲಿ ತಮ್ಮ ಮನೆಯಲ್ಲಿ ಸಾವಿರಾರು ಗಣಪತಿ ವಿಗ್ರಹಗಳನ್ನು ಸ್ಥಾಪಿಸಿ ಪೂಜಿಸುವ ಮೂಲಕ ವಿಶಿಷ್ಟ ಖ್ಯಾತಿ ಗಳಿಸಿರುವ ವಿನಾಯಕ ಲೋಕಖ್ಯಾತ ಕೆ.ಎಸ್. ವಿನಾಯಕ ಅವರಿಗೆ “ಸರಸ್ವತಿ ಕನ್ನಡ ರತ್ನ ಪ್ರಶಸ್ತಿ” ಪ್ರದಾನ ಮಾಡಲಾಗಿದೆ.

ದಾವಣಗೆರೆಯ ಶ್ರೀಮತಿ ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನ ವತಿಯಿಂದ ನೀಡಲಾಗುವ ಈ ಪ್ರಶಸ್ತಿಯನ್ನು, ಅವರ ಕಲಾ ಸೇವೆ ಮತ್ತು ಸಂಸ್ಕೃತಿ ಪ್ರಚಾರದ ಕೊಡುಗೆಯನ್ನು ಗುರುತಿಸಿ ನೀಡಿ ಗೌರವಿಸಲಾಯಿತು.ಕೆ.ಎಸ್. ವಿನಾಯಕ ಅವರು ವರ್ಷಾವರ್ಷ ಗಣಪತಿ ಹಬ್ಬದ ವೇಳೆ ಭಕ್ತರಿಗೆ ತೀರ್ಥ ಪ್ರಸಾದ ವಿತರಿಸುವ ಮೂಲಕ ಜನಮನ ಗೆದ್ದಿದ್ದಾರೆ. ಕರ್ನಾಟಕ ರಾಜ್ಯದಾದ್ಯಂತ ಅವರ ಈ ಸೇವೆ ವಿಶಿಷ್ಟ ಮೆಚ್ಚುಗೆಗೆ ಪಾತ್ರವಾಗಿದೆ.

img 20260325 wa00238801024631222607439 ವಿನಾಯಕ ಲೋಕ ಖ್ಯಾತಿಯ ಕೆ.ಎಸ್. ವಿನಾಯಕ ಅವರಿಗೆ ಸರಸ್ವತಿ ಕನ್ನಡ ರತ್ನ ಪ್ರಶಸ್ತಿ

Leave a Reply

Your email address will not be published. Required fields are marked *