ಕ್ಷೇತ್ರ ಪುನರ್‌ರಚನೆಗೆ ಕೇಂದ್ರದ ಕ್ರಮ ಸ್ವಾಗತಾರ್ಹ ;ಪಾದಯಾತ್ರೆ ಅನಾವಶ್ಯಕ – ವಾಟಗೋಡು ಸುರೇಶ್

Blue and Red Voter Education Banner 20260404 103422 0000 scaled ಕ್ಷೇತ್ರ ಪುನರ್‌ರಚನೆಗೆ ಕೇಂದ್ರದ ಕ್ರಮ ಸ್ವಾಗತಾರ್ಹ ;ಪಾದಯಾತ್ರೆ ಅನಾವಶ್ಯಕ - ವಾಟಗೋಡು ಸುರೇಶ್
Spread the love

ಹೊಸನಗರ: ಲೋಕಸಭೆ ಹಾಗೂ ವಿಧಾನಸಭೆಯಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಕಲ್ಪಿಸುವ ನಾರಿ ಶಕ್ತಿ ವಂದನ್ ಕಾಯ್ದೆ ಹಾಗೂ ಕ್ಷೇತ್ರ ಪುನರ್‌ರಚನೆ ವಿಧಾನಗಳ ಕುರಿತು ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮ ಸ್ವಾಗತಾರ್ಹ ಎಂದು ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ವಾಟಗೋಡು ಸುರೇಶ್ ಹೇಳಿದ್ದಾರೆ.

img 20260110 wa00003231897974471290252 ಕ್ಷೇತ್ರ ಪುನರ್‌ರಚನೆಗೆ ಕೇಂದ್ರದ ಕ್ರಮ ಸ್ವಾಗತಾರ್ಹ ;ಪಾದಯಾತ್ರೆ ಅನಾವಶ್ಯಕ - ವಾಟಗೋಡು ಸುರೇಶ್

ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕ್ಷೇತ್ರ ಪುನರ್‌ರಚನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ಇದೊಂದು ಬಹುನಿರೀಕ್ಷಿತ ಹಾಗೂ ದಿಟ್ಟ ಹೆಜ್ಜೆಯಾಗಿದೆ ಎಂದು ಅಭಿಪ್ರಾಯಪಟ್ಟರು.
ಹೊಸ ವಿಧಾನ ಜಾರಿಯಾದಲ್ಲಿ ರಾಜ್ಯದಲ್ಲೂ ಹೊಸನಗರ ಸೇರಿದಂತೆ ಹಲವು ವಿಧಾನಸಭಾ ಕ್ಷೇತ್ರಗಳಲ್ಲಿ ಬದಲಾವಣೆಗಳಾಗುವ ಸಾಧ್ಯತೆ ಇದ್ದು, ಕಳೆದ ಎರಡು ದಶಕಗಳಿಂದ ಕ್ಷೇತ್ರ ಪುನರ್‌ರಚನೆಗಾಗಿ ಜನರಿಂದ ಬೇಡಿಕೆ ವ್ಯಕ್ತವಾಗುತ್ತಿತ್ತು. ಹಿಂದಿನ ಸಂದರ್ಭದಲ್ಲಿಯೂ ಈ ಬಗ್ಗೆ ಒತ್ತಾಯ ಕೇಳಿಬಂದಿದ್ದರೂ ಅದು ಸಾಕಾರವಾಗಿರಲಿಲ್ಲ. ಇದೀಗ ಕೇಂದ್ರ ಸರ್ಕಾರ ಸ್ಪಷ್ಟ ನಿರ್ಧಾರ ಕೈಗೊಂಡಿರುವುದು ಗಮನಾರ್ಹ ಎಂದು ಹೇಳಿದರು.


ಪಾದಯಾತ್ರೆ ಅನಾವಶ್ಯಕ: ಈಗಾಗಲೇ ಕೇಂದ್ರ ಸರ್ಕಾರ ವಿಶೇಷ ಅಧಿವೇಶನ ನಡೆಸಲು ಮುಂದಾಗಿದ್ದು, ಜಿಲ್ಲೆಯಲ್ಲಿ ಹೊಸನಗರ, ಶಿರಾಳಕೊಪ್ಪ, ಆಯನೂರು, ಹೊಳೆಹೊನ್ನೂರು ಕ್ಷೇತ್ರಗಳ ರಚನೆ ಕುರಿತು ಚರ್ಚೆಗಳು ನಡೆಯುತ್ತಿವೆ. ಈ ಸಂದರ್ಭದಲ್ಲಿ ಏಪ್ರಿಲ್ 5 ಮತ್ತು 6ರಂದು ಕ್ಷೇತ್ರ ರಚನೆಗೆ ಆಗ್ರಹಿಸಿ ಪಾದಯಾತ್ರೆ ನಡೆಸುವ ಅಗತ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.

ಜನಸಾಮಾನ್ಯರ ಸಮಯ ವ್ಯರ್ಥ ಮಾಡದೇ, ಸರ್ಕಾರದ ಕ್ರಮಕ್ಕೆ ಸಹಕಾರ ನೀಡುವಂತೆ ಮನವಿ ಮಾಡಿದ ಅವರು, ಅನಾವಶ್ಯಕ ಪ್ರತಿಭಟನೆಗಳಿಂದ ದೂರವಿರಲು ಕರೆ ನೀಡಿದರು.

img 20260324 wa00155986687575510897504 ಕ್ಷೇತ್ರ ಪುನರ್‌ರಚನೆಗೆ ಕೇಂದ್ರದ ಕ್ರಮ ಸ್ವಾಗತಾರ್ಹ ;ಪಾದಯಾತ್ರೆ ಅನಾವಶ್ಯಕ - ವಾಟಗೋಡು ಸುರೇಶ್

Leave a Reply

Your email address will not be published. Required fields are marked *