ಸ್ಥಳೀಯ ಮಟ್ಟದ ಚುನಾವಣೆಯಲ್ಲಿ ಜಯಬೇರಿ ಬಾರಿಸಲಿದೆ
ಹೊಸನಗರ: ಕೆಲವು ತಿಂಗಳಲ್ಲಿ ಸ್ತಳೀಯ ಮಟ್ಟದ ಪಟ್ಟಣ ಪಂಚಾಯತಿ ಗ್ರಾಮ ಪಂಚಾಯತಿ, ಜಿಲ್ಲಾ ಪಂಚಾಯಿತಿ ಚುನಾವಣೆಗಳು ಸಮೀಪಿಸಲಿದ್ದು ಹೊಸನಗರ ತಾಲ್ಲೂಕಿನಲ್ಲಿ ಜೆಡಿಎಸ್ ಪಕ್ಷದ ಕಾರ್ಯಕರ್ತರು ಹಗಲಿರೂಳು ದುಡಿದು ಜೆಡಿಎಸ್ ಪಕ್ಷವನ್ನು ಬಲ ಪಡಿಸುವುದರ ಜೊತೆಗೆ ಸ್ಥಳೀಯ ಪಟ್ಟದ ಚುನಾವಣೆಯಲ್ಲಿ ಜಯಬೇರಿ ಬಾರಿಸಲಿದೆ ಎಂದು ಹೊಸನಗರ ತಾಲ್ಲೂಕು ಜೆಡಿಎಸ್ ಪಕ್ಷದ ಅಧ್ಯಕ್ಷ ರಿಪ್ಪನ್ಪೇಟೆ ವರ್ತೇಶ್ರವರು ಹೇಳಿದರು.
ಹೊಸನಗರದ ಗಾಯಿತ್ರಿ ಮಂದಿರದಲ್ಲಿ ಕಾರ್ಯಕರ್ತರ ಸಭೆ ಹೊಸ ಪದಾಧಿಕಾರಿಗಳ ಆಯ್ಕೆ ಹಾಗೂ ಜಿಲ್ಲಾಧ್ಯಕ್ಷರಾದ ರಾಮಕೃಷ್ಣರವರಿಗೆ ಸನ್ಮಾನ ಸಮಾರಂಭವನ್ನು ಎರ್ಪಡಿಸಲಾಗಿದ್ದು ಈ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ಜೆಡಿಎಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದು ಅವರು ಎಂದಿಗೂ ಜೆಡಿಎಸ್ ಪಕ್ಷ ತೊರೆಯುವವರಲ್ಲ ಕೆಲವು ಪಕ್ಷಗಳಲ್ಲಿ ಕೆಲವು ಕಾರ್ಯಕರ್ತರು ಚುನಾವಣೆಯ ಸಂದರ್ಭದಲ್ಲಿ ಒಂದು ಪಕ್ಷ ಚುನಾವಣೆಯ ನಂತರ ಗೆದ್ದವರಿಗೆ ಜೈ ಎನ್ನುವವರು ಅದರೇ ಜೆಡಿಎಸ್ ಪಕ್ಷದ ಕಾರ್ಯಕರ್ತರು ಸೋತರು ಗೆದ್ದರೂ ಒಂದೇ ಪಕ್ಷದಲ್ಲಿದ್ದು ಕಷ್ಟ-ಸುಖಗಳಲ್ಲಿ ಎಲ್ಲರೂ ಒಟ್ಟಾಗುತ್ತಾರೆ ಇಂಥಹ ಪಕ್ಷದಲ್ಲಿ ದುಡಿಯುವುತ್ತಿರುವುದಕ್ಕೆ ಹೆಮ್ಮೆಯಾಗುತ್ತದೆ. ಇಂದಿನಿಂದಲ್ಲೆ ನಮ್ಮ ಜೆಡಿಎಸ್ ಪಕ್ಷದ ಕಾರ್ಯಕರ್ತರು ಒಟ್ಟಾಗಿ ಹೊಂದಾಣಿಕೆಯಿಂದ ಬಡವರ ದಲಿತರ ಶೋಷಿತರ ಪರವಾಗಿ ಧ್ವನಿಯಾಗಿ ಕೆಲಸ ಮಾಡೋಣ ಎಂದರು.
ಮುಂಬರುವ ಸ್ಥಳೀಯ ಚುನಾವಣೆ ಹಿನ್ನಲೆ ಪಕ್ಷ ಸಂಘಟನೆಗೆ ಮುಂದಾಗಿ : ಜೆ.ಡಿ.ಎಸ್ ಕಾರ್ಯಕರ್ತರಿಗೆ ನೂತನ ಜಿಲ್ಲಾಧ್ಯಕ್ಷ ರಾಮಕೃಷ್ಣ ಸಲಹೆ
ಶಿವಮೊಗ್ಗ ಜಿಲ್ಲಾ ನೂತವಾಗಿ ಜೆಡಿಎಸ್ ಪಕ್ಷದ ಅಧ್ಯಕ್ಷರಾದ ರಾಮಕೃಷ್ಣರವರು ಸನ್ಮಾನ ಸ್ವೀಕರಿಸಿ ಮಾತನಾಡಿ ರಾಜ್ಯದ ರೈತರ ಹಿತ ಕಾಪಾಡುವುದು, ಬಡವರ ಶೋಷಣೆ ತಪ್ಪಿಸುವುದು ಹಾಗೂ ಗ್ರಾಮಾಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡುವ ದೇಶದ ಏಕೈಕ ರಾಜಕೀಯ ಪಕ್ಷ ಎಂದರೇ ಅದು ಜಾತ್ಯತೀತ ಜನತಾದಳ ಮುಂಬರುವ ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಹಾಗೂ ಸ್ಥಳೀಯ ಚುನಾವಣೆಗಳಲ್ಲಿ ಪಕ್ಷಗಳಲ್ಲಿ ಹಾಗೂ ಸ್ಥಳೀಯ ಚುನಾವಣೆಗಳಲ್ಲಿ ಪಕ್ಷವನ್ನು ಬೂತ್ ಮಟ್ಟದಲ್ಲಿ ಸಂಘಟಿಸುವ ಮೂಲಕ ಪಕ್ಷಕ್ಕೆ ಶಕ್ತಿ ತುಂಬುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕಾಗಿದೆ ಈ ಬಾರಿ ಪಕ್ಷ ಎಲ್ಲಾ ಸ್ಥಳೀಯ ಚುನಾವಣೆಯಲ್ಲಿ ಏಕಾಂಗಿ ಹೋರಾಟ ನಡೆಸಲಿದ್ದು ರಾಜ್ಯದಲ್ಲಿ ಮತ್ತೊಮ್ಮೆ ಜೆಡಿಎಸ್ ಪಕ್ಷ ಅಧಿಕಾರದ ಗದ್ದುಗೆ ಏರುವಲ್ಲಿ ಯಾವ ಸಂದೇಹ ಬೇಡವೆಂದರು.
ಜೆಡಿಎಸ್ ಪಕ್ಷದ ಹಿರಿಯರು ಹಾಗೂ ಪ್ರಧಾನ ಕಾರ್ಯದರ್ಶಿಯಾದ ಚಾಬುಸಾಬ್ರವರು ಮಾತನಾಡಿ ಜೆಡಿಎಸ್ ಪಕ್ಷದ ಕಾರ್ಯಕರ್ತರು ಯಾರು ಸುಮ್ಮನೇ ಕುಳಿತುಕೊಂಡಿಲ್ಲ ಬಿಜೆಪಿ ಹಾಗೂ ಜೆಡಿಎಸ್ ಯಾವ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡರು ಜೆಡಿಎಸ್ ಪಕ್ಷದ ಕಾರ್ಯಕರ್ತರು ಜೆಡಿಎಸ್ ಪಕ್ಷದ ಕಾರ್ಯಕರ್ತರಾಗಿ ಉಳಿಯುತ್ತಾರೆ ಪಕ್ಷಕ್ಕಾಗಿ ದುಡಿಯುತ್ತಾರೆ ಜೆಡಿಎಸ್ ಪಕ್ಷದ ಮಾಜಿ ಪ್ರಧಾನಿ ದೇವೇಗೌಡ, ಸಚಿವ ಕುಮಾರಸ್ವಾಮಿಯವರಿಗೆ ಬೆನ್ನೇಲುಬಾಗಿ ಕೆಲಸ ಮಾಡುವುದರ ಜೊತೆಗೆ ಕುಮಾರಸ್ವಾಮಿಯವರನ್ನು ಮುಂದಿನ ಮುಖ್ಯಮಂತ್ರಿ ಮಾಡುವವರೆಗೆ ಹಗಲಿರೂಳು ದುಡಿಯುತ್ತಾರೆಂದರು.
ಈ ಕಾರ್ಯಕ್ರಮದಲ್ಲಿ ಜೆಡಿಎಸ್ ಪಕ್ಷದ ರಾಜ್ಯ ಮುಖಂಡ ಮಾಜಿ ಶಾಸಕ ಪ್ರಸನ್ನಕುಮಾರ್, ಜಿಲ್ಲಾ ಮಾಜಿ ಅಧ್ಯಕ್ಷ ಕಡಿದಾಳ್ ಗೋಪಾಲ್, ತಾಲ್ಲೂಕು ಜೆಡಿಎಸ್ ನಿಕಟಪೂರ್ವ ಅಧ್ಯಕ್ಷ ಎಂ.ವಿ. ಜಯರಾಮ್, ಜಿಲ್ಲಾ ಉಪಾಧ್ಯಕ್ಷರಾದ ವರದರಾಜ್, ಜಿಲ್ಲಾ ಮಹಿಳಾ ಅಧ್ಯಕ್ಷೆ ಗೀತಾ ಸತೀಶ್, ಉಪಾಧ್ಯಕ್ಷೆ ಜಿ.ವಿ ಮಂಜುಳ, ರಿಪ್ಪನ್ಪೇಟೆ ಚಾಬುಸಾಬ್, ಜಯನಗರ ಸುಮತಿಪೂಜಾರ್, ಮಾಡಬಾಗಿಲು ರಮಾನಂದ, ಜಯನಗರ ಷಣ್ಮುಖ, ನರಸಿಂಹ, ರಮೇಶ್ ನಾಯಕ್, ಕಾಯಿ ನಾಗೇಶ್, ಹರೀಶ್, ಜಬಗೋಡು ಹಾಲಪ್ಪ ಗೌಡ, ವೀಣಾ ಇನ್ನೂ ಮುಂತಾದವರು ಉಪಸ್ಥಿತರಿದ್ದರು.














Leave a Reply