ಸಾಹಿತ್ಯ ಕ್ಷೇತ್ರದ ಅಂಬ್ರಯ್ಯಮಠ, ಪತ್ರಕರ್ತ ಎಚ್.ಎಸ್. ನಾಗರಾಜ್ ಹಾಗೂ  ಎಂ.ಎಂ. ಪರಮೇಶ್ ಅವರಿಗೆ ಸನ್ಮಾನ

NAADI NEWS 20260315 191308 0000 ಸಾಹಿತ್ಯ ಕ್ಷೇತ್ರದ ಅಂಬ್ರಯ್ಯಮಠ, ಪತ್ರಕರ್ತ ಎಚ್.ಎಸ್. ನಾಗರಾಜ್ ಹಾಗೂ  ಎಂ.ಎಂ. ಪರಮೇಶ್ ಅವರಿಗೆ ಸನ್ಮಾನ
Spread the love

ಹೊಸನಗರ: ಸಾಹಿತ್ಯ ಕ್ಷೇತ್ರದ ದಿಗ್ಗಜ ತಮ್ಮ ಸಾಹಿತ್ಯದ ಮೂಲಕ ಪ್ರಪಂಚಕ್ಕೆ ವಿಸ್ತಾರಿಸಿ ಹೊಸನಗರ ತಾಲ್ಲೂಕಿಗೆ ಕೀರ್ತಿ ತಂದಿರುವ ನಗರ ನಿವಾಸಿ ಅಂಬ್ರಯ್ಯಮಠ ಸತತ 35ವರ್ಷ ಕಾಲ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸುವುದರ ಜೊತೆಗೆ ಹೊಸನಗರ ಪಟ್ಟಣದಲ್ಲಿ ಎಲ್ಲರ ಕಷ್ಟಸುಖಗಳಿಗೆ ಬಾಗಿಯಾಗಿ ಸದಾ ಜನರ ಸೇವೆ ಮಾಡುತ್ತಿರುವ ನೂತನವಾಗಿ ಹೊಸನಗರ ತಾಲ್ಲೂಕು ಪತ್ರಕರ್ತರ ಸಂಘಕ್ಕೆ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಹೆಚ್.ಎಸ್. ನಾಗರಾಜ್ ಹಾಗೂ ರಿಪ್ಪನ್‌ಪೇಟೆಯ ಭಾಗದಲ್ಲಿ ಸಹಕಾರಿ ಕ್ಷೇತ್ರದಲ್ಲಿ ತಮ್ಮದೇ ಆದಾ ಛಾಪು ಮೂಡಿಸುವುದರ ಜೊತೆಗೆ ಸತತ 35 ವರ್ಷಗಳ ಕಾಲ ಸೊಸೈಟಿಯ ನಿರ್ದೆಶಕರಾಗಿ ಸತತ 25ವರ್ಷಗಳ ಕಾಲ ಸೊಸೈಟಿಯ ಅಧ್ಯಕ್ಷರಾಗಿ ಇತ್ತೇಚ್ಛೆಗೆ ರಾಜ್ಯ ಸರ್ಕಾರ ನೀಡುವ ಸಹಕಾರಿ ರತ್ನ ಪ್ರಶಸ್ತಿ ಪಡೆದಿರುವ ಎಂ.ಎಂ ಪರಮೇಶ್‌ರವರನ್ನು ಶಿವಮೊಗ್ಗದ ಸಾಹಿತ್ಯಭವನದಲ್ಲಿ ಶನಿವಾರ ಸಂಜೆ ನಡೆದ ಜಿಲ್ಲಾ ಮಟ್ಟದ 20ನೇ ವರ್ಷದ ಕನ್ನಡ  ಸಾಹಿತ್ಯ ಸಮ್ಮೇಳನದಲ್ಲಿ ಅದ್ದೂರಿಯಾಗಿ ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.

ಅಭಿನಂದನೆಗಳು:
ಹೊಸನಗರ ತಾಲೂಕಿನ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಈ ಮೂವರು ವ್ಯಕ್ತಿಗಳ ಸಾಧನೆಯನ್ನು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಸಂಘ ಹಾಗೂ ಹೊಸನಗರ ಕನ್ನಡ ಸಾಹಿತ್ಯ ಪರಿಷತ್ ಶ್ಲಾಘಿಸಿತು. ಈ ಸಂದರ್ಭದಲ್ಲಿ ಕೊಡಚಾದ್ರಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಹಾಗೂ ಕನ್ನಡ ಸಾಹಿತ್ಯ ಪರಿಷತ್‌ನ ಹಿರಿಯ ಸದಸ್ಯರಾದ ಮಾರ್ಷಲ್ ಶರಣ್, ಕೋಟೆಗಾರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಶಶಿಧರ್ ನಾಯ್ಕ್, ರಿಪ್ಪನ್ ಪೇಟೆ ಒಕ್ಕಲಿಗರ ಸಂಘದ ಅಧ್ಯಕ್ಷ ಎಂ.ಬಿ. ಲಕ್ಷ್ಮಣಗೌಡ, ಹೊಸನಗರದ ವ್ಯಾಪಾರಿಗಳ ಸಂಘದ ಮಾಜಿ ಅಧ್ಯಕ್ಷ ಶ್ರೀನಿವಾಸ್ ಕಾಮತ್, ಪತ್ರಬರಹಗಾರರ ಸಂಘದ ಅಧ್ಯಕ್ಷ ಎನ್. ಶ್ರೀಧರ್ ಉಡುಪ, ಎನ್. ದತ್ತಾತ್ರೇಯ ಉಡುಪ, ವ್ಯಾಪಾರಿಗಳ ಸಂಘದ ಅಧ್ಯಕ್ಷ ಪೂರ್ಣೇಶ್, ಮಾಜಿ ಅಧ್ಯಕ್ಷ ವಿಜಯೇಂದ್ರ ಶೇಟ್ , ಬಿ.ಎಸ್. ಸುರೇಶ್ ಸೇರಿದಂತೆ ಹಲವರು ಅಭಿನಂದಿಸಿದರು.

Leave a Reply

Your email address will not be published. Required fields are marked *