ಗ್ಲೋಬಲ್ ಹ್ಯೂಮನ್ ಪೀಸ್ ಯೂನಿವರ್ಸಿಟಿ ಯಿಂದ ಗೌರವ ಡಾಕ್ಟರೇಟ್ ಪ್ರದಾನ
ಹೊಸನಗರ : ಹುಂಚ ಗ್ರಾಮದ ಡಾ.ಅಭಿಷೇಕ್ ಕೆ. ಅವರಿಗೆ ಡಾಕ್ಟರ್ ಆಫ್ ಡಿಸ್ಟೆನ್ಸ್ ಎಜುಕೇಶನ್ (Doctor of Distance Education ) ಪದವಿ ಲಭಿಸಿರುವುದು ಹಾಗೂ “ರಾಷ್ಟ್ರೀಯ ಸ್ವಾಮಿ ವಿವೇಕಾನಂದ ಸಂಶೋಧನಾ ಮತ್ತು ನಾವಿನ್ಯತೆ ಶ್ರೇಷ್ಠತಾ ಪ್ರಶಸ್ತಿ” ದೊರೆತಿರುವ ಹಿನ್ನೆಲೆಯಲ್ಲಿ ಸ್ನೇಹ ಬಳಗದ ವತಿಯಿಂದ ಅಭಿನಂದನಾ ಸಮಾರಂಭವನ್ನು ಆಯೋಜಿಸಲಾಗಿತ್ತು.
ಡಾ. ಅಭಿಷೇಕ್ ಕೆ. ಶೈಕ್ಷಣಿಕ ಕ್ಷೇತ್ರದಲ್ಲಿನ ಗಮನಾರ್ಹ ಸಾಧನೆ ಮಾಡಿದ ಹಿನ್ನಲೆ ಇತ್ತೀಚೆಗೆ ಗ್ಲೋಬಲ್ ಹ್ಯೂಮನ್ ಪೀಸ್ ಯೂನಿವರ್ಸಿಟಿ( Global Human Peace University ) ಯಿಂದ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಸಂಶೋಧನಾ ಕ್ಷೇತ್ರದಲ್ಲಿನ ಕೊಡುಗೆ ಹಾಗೂ ನವೀನ ಆಲೋಚನೆಗಳಿಗಾಗಿ ರಾಷ್ಟ್ರೀಯ ಮಟ್ಟದ ಸ್ವಾಮಿ ವಿವೇಕಾನಂದ ಶ್ರೇಷ್ಠತಾ ಪ್ರಶಸ್ತಿ (National Level Swami Vivekananda Excellence Award)ಗೂ ಭಾಜನರಾಗಿದ್ದಾರೆ. ಅವರ ಈ ಶೈಕ್ಷಣಿಕ ಸಾಧನೆಗಾಗಿ ಗ್ರಾಮಸ್ಥರು ಅವರನ್ನು ಗೌರವಿಸಿಲೆಂದು ಅಭಿನಂದನಾ ಕಾರ್ಯಕ್ರಮವನ್ನು ಏರ್ಪಡಿಸಿದ್ದರು.

ಅಭಿನಂದನಾ ಕಾರ್ಯಕ್ರಮಕ್ಕೆ ಅಶ್ವಥ್ ನಾರಾಯಣ ಹಾರೆಗೋಪ್ಪಾ ಅಧ್ಯಕ್ಷತೆ ವಹಿಸಿದ್ದರು. ದೇವೇಂದ್ರಪ್ಪ ಮಾಸ್ಟರ್ ಹಾಗೂ ಕಡಸೂರು ನಿವೃತ್ತ ಉಪನ್ಯಾಸಕರಾದ ಶ್ರೀಧರ್ ಮೂರ್ತಿಗಳು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಆಶಾ ಯಧು ಕುಮಾರ್ ಸ್ವಾಗತಿಸಿದರು. ದಿನೇಶ್ ಮಾಸ್ಟರ್ ಮತ್ತು ಆದಿತ್ಯ ನಿರೂಪಣೆ ನಡೆಸಿದರು. ಕಿರಣ್ ಜೆಪಿ ಅವರು ಪ್ರಶಸ್ತಿ ಪತ್ರವನ್ನು ಓದಿ ಡಾ. ಅಭಿಷೇಕ್ ಅವರ ಶೈಕ್ಷಣಿಕ ಸಾಧನೆಗಳನ್ನು ವಿವರಿಸಿದರು.

ಈ ಸಂದರ್ಭದಲ್ಲಿ ಷಣ್ಮುಖ ಮುಳಕೆವಿ, ರಾಜಶೇಖರ್ ಪಾಟೀಲ್, ಯಧು ಕುಮಾರ್, ಯೋಗೇಶ್ ಗೌಡ್ರು, ಸಂಜಯ್ ಕೆ.ಆರ್., ಶ್ರೀಧರ್, ವಿನಾಯಕ, ಜಗದೀಶ್ ಪೂಜಾರಿ, ರಾಘವೇಂದ್ರ ತೋಟದ ಕಟ್ಟು ಸೇರಿದಂತೆ ಹಲವರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದು ಶುಭಾಶಯ ಕೋರಿದರು.

ಡಾ. ಅಭಿಷೇಕ್ ಕೆ. ಅವರ ಸಾಧನೆ ಗ್ರಾಮೀಣ ಯುವಕರಿಗೆ ಪ್ರೇರಣೆಯಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಶೈಕ್ಷಣಿಕ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿ ಸಾಧನೆ ಮಾಡುವಂತೆ ಎಲ್ಲರೂ ಹಾರೈಸಿದರು.
ಅವರ ಈ ಸಾಧನೆಗೆ ನಮ್ಮ ನಾಡಿನ್ಯೂಸ್ ಸಂಸ್ಥೆ ವತಿಯಿಂದ ಶುಭ ಹಾರೈಸುತ್ತೇವೆ. ಹೀಗೆ ನಿಮ್ಮ ಮುಂದಿನ ಶೈಕ್ಷಣಿಕ ಸೇವೆಯು ಮುಂದುವರೆಯಲಿ ಮತ್ತು ನಿಮ್ಮ ಸಾಧನೆ ಎಲ್ಲರಿಗೂ ಪ್ರೇರಣೆಯಾಗಲಿ ಎಂದು ಆಶಿಸುತ್ತೇವೆ.













Leave a Reply