ಹೊಸನಗರ: ಸತತ 35 ವರ್ಷಗಳಿಂದ ಹೊಸನಗರ ತಾಲ್ಲೂಕಿನಲ್ಲಿ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದ ಹೆಚ್.ಎಸ್. ನಾಗರಾಜ್‌ರವರು ಹೊಸನಗರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಹಾಗೂ ರಿಪ್ಪನ್‌ಪೇಟೆ ಭಾಗದ ರಫಿ ಅವರು ಪ್ರಧಾನ ಕಾರ್ಯದರ್ಶಿಯಾಗಿ ಅವಿರೋಧ ಆಯ್ಕೆಯಾಗಿದ್ದಾರೆ.
ಹೊಸನಗರದ ಪ್ರವಾಸಿ ಮಂದಿರದಲ್ಲಿ ಎಂ.ಕೆ. ವೆಂಕಟೇಶ್‌ಮುರ್ತಿಯವರ ಅಧ್ಯಕ್ಷತೆಯಲ್ಲಿ ಕಾರ್ಯಕಾರಣಿ ಸಭೆ ನಡೆದಿದ್ದು ಈ ಸಭೆಯಲ್ಲಿ ಆಯ್ಕೆ ಮಾಡಲಾಯಿತ್ತು.
ಹೊಸನಗರ ತಾಲ್ಲೂಕು ಕಾರ್ಯನಿರ ಪತ್ರಕರ್ತರ ಸಂಘದ ಗೌರವಾಧ್ಯಕ್ಷರಾಗಿ ಎಂ.ಕೆ. ವೆಂಕಟೇಶ್‌ಮೂರ್ತಿ, ಉಪಾಧ್ಯಕ್ಷರಾಗಿ ನಗರ ನಾರಾಯಣಕಾಮತ್, ರಿಪ್ಪನ್‌ಪೇಟೆ ಸಬಾಸ್ಟನ್ ಮಾಥ್ಯೋಸ್, ಕೋಶಾಧಿಕಾರಿಯಾಗಿ ಕೆ.ಎಸ್. ರಾಮಕೃಷ್ಣಮೂರ್ತಿ, ನಿರ್ದೆಶಕರುಗಳಾಗಿ ರಿಪ್ಪನ್‌ಪೇಟೆ ರವಿಶಂಕರ್, ನಗರ ರಾಘವೇಂದ್ರ, ಮಾಸ್ತಿಕಟ್ಟೆ ವಾಸಪ್ಪ, ಮಹೇಶ್ ಹಿಂಡ್ಲೆಮನೆ, ರಾಘವೇಂದ್ರ ಹೆಚ್.ಎಸ್, ಪಿಯೂಸ್ ರೋಡ್ರಿಗಸ್, ಯು.ಎಸ್. ಸದಾನಂದ, ತ.ಮ.ನರಸಿಂಹ, ನಗರ ಹರೀಶ್, ದೀಪಕ್ ಸ್ವರೂಪ್, ಕೌಶಿಕ್ ಜಿ.ಕೆಯವರನ್ನು ಆಯ್ಕೆ ಮಾಡಲಾಯಿತು.















Leave a Reply