ಅಂಧರ ವಿಶ್ವಕಪ್ ವಿಜೇತೆ ಕಾವ್ಯರವರಿಗೆ  ಪತ್ರಕರ್ತ ರಿಂದ ಸನ್ಮಾನ

IMG 20260219 124540 scaled ಅಂಧರ ವಿಶ್ವಕಪ್ ವಿಜೇತೆ ಕಾವ್ಯರವರಿಗೆ  ಪತ್ರಕರ್ತ ರಿಂದ ಸನ್ಮಾನ<br>
Spread the love

ಯಾವುದೇ ಸಾಧನೆ ಮಾಡಲು ದೇಹ ಅಡ್ಡ ಬರುವುದಿಲ್ಲ; ವಾಸಪ್ಪಗೌಡ

ಹೊಸನಗರ: ಪ್ರತಿಯೊಬ್ಬರಿಗೂ ಗುರಿಯಿರಬೇಕು ಮನಸ್ಸು ಚಂಚಲವಾಗಿರಬಾರದು ನಾವು ಇಟ್ಟುಕೊಂಡ ಗುರಿಯ ಮೂಲಕವೇ ಪ್ರಯಾಣ ಬೆಳೆಸಿದರೇ ಯಾವ ಸಾಧನೆಯನ್ನಾದರೂ ಮಾಡಬಹುದು ಎಂದು ಮಾಸ್ತಿಕಟ್ಟೆ ವಾಸಪ್ಪ ಗೌಡರವರು ಹೇಳಿದರು.

ಹೊಸನಗರ ತಾಲ್ಲೂಕು ರಿಪ್ಪನ್‌ಪೇಟೆ ಬರುವೆ ಗ್ರಾಮದ  ಕ್ರೀಡಾ ಸಾಧಕಿಯಾದ ಕಾವ್ಯರವರು ಕೊಲಂಬೊದಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಅಂಧರ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತ ತಂಡದಲ್ಲಿ ಭಾಗವಹಿಸಿ ವಿಶ್ವಕಪ್ ಕಿರೀಟವನ್ನು ಭಾರತದ ಮಡಿಲಿಗೆ ಅರ್ಪಿಸಿ ಸಾಧನೆ ಮಾಡಿ ಕರ್ನಾಟಕ ರಾಜ್ಯಕ್ಕೆ ಶಿವಮೊಗ್ಗ ಜಿಲ್ಲೆಗೂ ಹೊಸನಗರ ತಾಲ್ಲೂಕಿಗೂ,ಓದಿದ ಶಾಲೆಗೂ ಊರಿಗೂ ಪೋಷಕರಿಗೂ ಹಿರಿಮೆ ತಂದಿದ್ದು ಇವರ ಹೊಸನಗರ ಪತ್ರಕರ್ತ ಸಂಘದ ಅಧ್ಯಕ್ಷರಾದ ಎಂ.ಕೆ. ವೆಂಕಟೇಶ್‌ ಮೂರ್ತಿಯವರ ನೇತೃತ್ವದಲ್ಲಿ ಅವರ ಮನೆಯ ಅಂಗಳದಲ್ಲಿ ಅದ್ದೂರಿಯಾಗಿ ಸನ್ಮಾನಿಸುವ ಸಂದರ್ಭದಲ್ಲಿ ಮಾತನಾಡಿದರು.
  ಇವರ ಸಾಧನೆ ಮುಂದುವರೆಯಲೀ ಇನ್ನಷ್ಟು ಪ್ರಶಸ್ತಿಗಳು ಈ ದೇಶಕ್ಕೆ ಲಭಿಸುವಂತಾಗಲೀ ಅವರಿಗೆ ಇನ್ನಷ್ಟು ಸಾಧನೆ ಮಾಡಲು ಶಕ್ತಿ ಮತ್ತು ಚೈತನ್ಯ ಭಗವಂತ ಕರುಣಿಸಲೀ ಎಂದು ಇಡೀ ದೇಶದ ಜನರ ಪರವಾಗಿ ಪ್ರಾರ್ಥಿಸುತ್ತೇವೆಂದರು.

ಈ ಸಂದರ್ಭದಲ್ಲಿ  ಪತ್ರಕರ್ತರಾದ ಹೆಚ್.ಎಸ್. ನಾಗರಾಜ್,ನಗರ ರಾಘವೇಂದ್ರ, ಮಾಸ್ತಿಕಟ್ಟೆ ವಾಸಪ್ಪ,ರಿಪ್ಪನ್‌ಪೇಟೆ ರಫೀಕ್, ಸಬಾಸ್ಟಿನ್ ,ರಾಮಕೃಷ್ಣಮೂರ್ತಿ, ರವಿರಾಜ್‌ ಭಟ್,  ಇನ್ನಿತರರು ಉಪಸ್ಥಿತರಿದ್ದರು.


Spread the love

Leave a Reply

Your email address will not be published. Required fields are marked *