ಹೊಸನಗರ: ಮಾಮ್‌ಕೋಸ್ ಸಂಸ್ತೆಯಲ್ಲಿ ಸಂಸ್ಥೆ ಬೆಳೆದಷ್ಟು ಷೇರುದಾರರಿಗೆ ಅನುಕೂಲವಾಗುವ ರೀತಿಯಲ್ಲಿ ಪೂರಕವಾಗಿ ಕೆಲಸ ನಿರ್ವಹಿಸುತ್ತದೆ ಮಾಮ್‌ಕೋಸ್ ಸಂಸ್ಥೆಯಲ್ಲಿ ಗುಂಪು ವಿಮಾ ಸೌಲಭ್ಯ ಜಾರಿಯಲ್ಲಿರುವುದರಿಂದ ಕೃಷಿಕರು ಹಾಗೂ ಕೃಷಿ ಕಾರ್ಮಿಕರಿಗೆ ಕೃಷಿ ಕುಟುಂಬಕ್ಕೆ ಅವಘಡಗಳಾದ ಸಂದರ್ಭದಲ್ಲಿ ನೆರವಿಗೆ ಬರಲಿದೆ ಎಂದು ಮಾಮ್‌ಕೋಸ್ ಸಂಸ್ಥೆಯ ಉಪಾಧ್ಯಕ್ಷ ಮಹೇಶ ಕಲ್ಕುಳಿ ಹೇಳಿದರು.
ಹೊಸನಗರ ತಾಲೂಕಿನ ಕೂಲಿ ಕಾರ್ಮಿಕರಾದ ಮಧುಕರ ಎಂ.ಎಂ ರವರಿಗೆ 1 ಲಕ್ಷದ 50 ಸಾವಿರ, ಶ್ರೀಮತಿ ರೇಣುಕರವರಿಗೆ 1 ಲಕ್ಷದ 50 ಸಾವಿರ, ವಿಶ್ವನಾಥ್‌ರವರಿಗೆ 1 ಲಕ್ಷದ 47 ಸಾವಿರ ಸುರೇಶರವರಿಗೆ ಎಂಬತ್ತೇಳು ಸಾವಿರದ ಎಂಟುನೂರ ಆರವತ್ತೊಂದು ರೂಪಾಯಿಗಳ ಚೆಕ್ಕನ್ನು ಮಾಮ್‌ಕೋಸ್ ಕಛೇರಿಯಲ್ಲಿ ಗುಂಪು ವಿಮಾ ಯೋಜನೆಯಡಿ ಸುಮಾರು 5 ಲಕ್ಷದ ಮೂವತ್ತನಾಲ್ಕು ರೂಪಾಯಿಯ ಚೆಕ್ಕನ್ನು ಅವರಿಗೆ ಮತ್ತು ಅವರ ಕುಟುಂಬಕ್ಕೆ ವಿತರಿಸಿ ಮಾತನಾಡಿದರು.
ಸಂಸ್ಥೆಯು ತನ್ನ ಸದಸ್ಯರ ಹಿತ ಕಾಯುವಲ್ಲಿ ಶ್ರಮಿಸುತ್ತಿದೆ. ಈಡೀ ಸಹಕಾರಿ ಕ್ಷೇತ್ರದಲ್ಲಿ ಇಂತಹ ಗುಂಪುವಿಮಾ ಸೌಲಭ್ಯ ಮಾಮ್‌ಕೋಸ್ ಹೊರತುಪಡಿಸಿ ಬೇರೆಲ್ಲಿಯೂ ಇಲ್ಲ. ಗುಂಪುವಿಮಾ ಅಭಿರಕ್ಷೆ ಯೋಜನೆಯಡಿ ಸಂಸ್ಥೆಯ ಎಲ್ಲಾ ಸದಸ್ಯರೂ ನೊಂದಾವಣೆ ಮಾಡಬಹುದು. ಅತೀ ಕಡಿಮೆ ಮೊತ್ತದ ಪ್ರೀಮಿಯಂ ಕಟ್ಟಿದರೂ ವಿವಿಧ ಮಾದರಿಯಲ್ಲಿ ಅವಘಡಗಳು ನಡೆದಾಗ ಪರಿಹಾರದ ಹಣ ಲಭ್ಯವಾಗುತ್ತದೆ ಅದು ಅಲ್ಲದೇ ಅಲ್ಪ ಅವಧಿಯಲ್ಲಿ ವಿಮಾ ಹಣದ ಚಕ್ ನಿಮ್ಮ ಕೈ ಸೇರಲಿದೆ ಈ ಸೌಲಭ್ಯ ಯಾವುದೇ ಅಡಿಕೆ ಮಂಡಿಗಳಲ್ಲಗಲೀ ಅಥವಾ ಸರ್ಕಾರದಿಂದಲ್ಲೂ ಇಂಥಹ ಸೌಲಭ್ಯ ಸಿಗಬೇಕಾದರೆ ವರ್ಷಗಟ್ಟಲೇ ಕಾಯಬೇಕಾಗುತ್ತದೆ ಎಂದು ಮಾಹಿತಿ ನೀಡಿದರು.
ಈ ಕಾರ್ಯಕ್ರಮಕ್ಕೆ ಆಗಮಿಸಿದ ಸಂಸ್ಥೆಯ ನಿರ್ದೆಶಕ ಕೆ.ವಿ ಕೃಷ್ಣಮೂರ್ತಿಯವರು ಮಾತನಾಡಿ ಸಂಘದ ಸದಸ್ಯರ ಮತ್ತು ಅವರ ಅವಲಂಬಿತ ಕೂಲಿ ಕಾರ್ಮಿಕರ ಗುಂಪು ವಿಮಾ ಅಭಿರಕ್ಷೆ ಯೋಜನೆ ೨೦೦೭-೦೮ರಿಂದ ಜಾರಿಗೆ ತಂದಿದ್ದು 2026-27ನೇ ಸಾಲಿಗೂ ಮುಂದುವರೆಸುತ್ತಿದೆ 70 ವರ್ಷದೊಳಗಿನವರಿಗೆ ( ಸದಸ್ಯರು ಹಾಗೂ ಅವರ ಹೆಸರಿಸದ ಅವಲಂಬಿತ ಕೂಲಿ ಕಾರ್ಮಿಕರು) ಅಪಘಾತವಾದಲ್ಲಿ ಮಾತ್ರ ಆಸ್ವತ್ರೆಯ ಚಿಕಿತ್ಸಾ ಖರ್ಚು ಗರಿಷ್ಟ 1 ಲಕ್ಷದ 50 ಸಾವಿರದವರೆವಿಗೆ ಮತ್ತು ಅಂಬ್ಯುಲೆನ್ಸ್ ವೆಚ್ಚ 1 ಸಾವಿರ ನೀಡಲಾಗುತ್ತದೆ ಅಪಘಾತವಾಗಿ ಮರಣ ಹೊಂದಿದಲ್ಲಿ ಸದಸ್ಯರಿಗೆ ಮತ್ತು ಅವಲಂಬಿತ ಕೂಲಿ ಕಾರ್ಮಿಕರಿಗೆ ಮರಣ ಪರಿಹಾರ ಗರಿಷ್ಟ 6 ಲಕ್ಷ ಮತ್ತು ಮೃತರನ್ನು ಆಸ್ವತ್ರೆಯಿಂದ ಮನೆಗೆ ಸಾಗಿಸಲು ಕನಿಷ್ಟ 2,500 ಹಣವನ್ನು ನೀಡಲಾಗುತ್ತದೆ ಈ ಸೌಲಭ್ಯವನ್ನು ಎಲ್ಲಾ ಮಾಮ್‌ಕೋಸ್ ಸದಸ್ಯರು ಪಡೆದುಕೊಳ್ಳಬೇಕೆಂದು ಈ ಮೂಲಕ ಕೇಳಿಕೊಂಡರು.
ಈ ವೇಳೆ ಸಂಸ್ಥೆಯ ನಿರ್ದೇಶಕರಾದ ಕೆ.ವಿ.ಕೃಷ್ಣಮೂರ್ತಿ, ಮಾಮ್‌ಕೋಸ್ ವ್ಯವಸ್ಥಾಪಕ ನಿರ್ದೆಶಕರಾದ ಶ್ರೀಕಾಂತ್ ಬರವೆ, ತಿಮ್ಮಪ್ಪ, ಕೊಳವಂಕ ಧರ್ಮೇಂದ್ರ, ಶಾಖೆಯ ವ್ಯವಸ್ತಾಪಕ ಗಣಪತಿ, ಜಿಲ್ಲಾ ಮಾಮ್‌ಕೋಸ್ ಸಂಸ್ಥೆಯ ಸುರೇಶ್, ಸಂಸ್ಥೆಯ ನೌಕರ ವರ್ಗದವರಾದ ಮಧುಸೂದನ್, ವಿದ್ಯಾಶ್ರೀ, ದಿವ್ಯ, ಲೀಲಾವತಿ, ದಯಾನಂದ, ಮಹೇಶ್ ದೇವರಸಲಿಕೆ ಸೇರಿದಂತೆ ಸಂಸ್ಥೆಯ ಸಿಬ್ಬಂದಿ ಉಪಸ್ಥಿತರಿದ್ದರು.












Leave a Reply