ನಿಟ್ಟೂರು : ಸಾರ್ವಜನಿಕರ ಬಹುದಿನಗಳ ಬೇಡಿಕೆಯಾಗಿದ್ದ ಹೈ-ಮಾಸ್ಕ್ ದೀಪಗಳ ಅಳವಡಿಕೆ

IMG 20260210 WA0153 1 ನಿಟ್ಟೂರು : ಸಾರ್ವಜನಿಕರ ಬಹುದಿನಗಳ ಬೇಡಿಕೆಯಾಗಿದ್ದ ಹೈ-ಮಾಸ್ಕ್ ದೀಪಗಳ ಅಳವಡಿಕೆ
Spread the love

ಶಾಸಕ ಬೇಳೂರು ಗೋಪಾಲಕೃಷ್ಣ ಕಾರ್ಯಕ್ಕೆ ಶ್ಲಾಘನೆ

ಹೊಸನಗರ (ನಿಟ್ಟೂರು ): ನಿಟ್ಟೂರಿನಲ್ಲಿ ಹೈ-ಮಾಸ್ಕ್ ದೀಪಗಳ ಅಳವಡಿಕೆ; ಶಾಸಕ ಬೇಳೂರು ಗೋಪಾಲಕೃಷ್ಣ ಕಾರ್ಯಕ್ಕೆ ಶ್ಲಾಘನೆಹೊಸನಗರ ತಾಲೂಕಿನ ನಾಗೋಡಿ ಗ್ರಾಮ ಪಂಚಾಯತ್  ವ್ಯಾಪ್ತಿಯ ನಿಟ್ಟೂರಿನಲ್ಲಿ ಸಾರ್ವಜನಿಕರ ಬಹುದಿನಗಳ ಬೇಡಿಕೆಯಾಗಿದ್ದ ಹೈ-ಮಾಸ್ಕ್ ದೀಪಗಳನ್ನು ಅಳವಡಿಸಲಾಗಿದ್ದು, ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.

  ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿರುವ ದಟ್ಟ ಅರಣ್ಯ ಪ್ರದೇಶದ ನಿಟ್ಟೂರು ಭಾಗವು ಹಲವು ಹಳ್ಳಿಗಳನ್ನು ಸಂಪರ್ಕಿಸುವ ಪ್ರಮುಖ ಕೇಂದ್ರವಾಗಿದ್ದು, ರಾತ್ರಿ ವೇಳೆ ಕತ್ತಲೆ ಸಾರ್ವಜನಿಕರಿಗೆ ಅಸೌಕರ್ಯ ಉಂಟು ಮಾಡುತ್ತಿತ್ತು. ಈ ಹಿನ್ನೆಲೆಯಲ್ಲಿ ಕ್ಷೇತ್ರದ ಶಾಸಕ ಶ್ರೀ ಬೇಳೂರು ಗೋಪಾಲಕೃಷ್ಣ ಅವರು ತಮ್ಮ ವಿಶೇಷ ಅನುದಾನದಡಿ ಈ ಕಾಮಗಾರಿಗೆ ಹಣ ಮಂಜೂರು ಮಾಡಿದ್ದರು.
ಕೆನರಾ ಬ್ಯಾಂಕ್–ಸರ್ಕಾರಿ ಪ್ರಾಥಮಿಕ ಶಾಲೆಯ ಮುಂಭಾಗ, ತೂಗು ಸೇತುವೆ ರಸ್ತೆಯ ಅಡಿಕೆಶಿನಿ ಸರ್ಕಲ್ ಹಾಗೂ ಜಾಮಿಯ ಮಸೀದಿಯ ಸಮೀಪ ಪ್ರಮುಖ ಮೂರು ಸ್ಥಳಗಳಲ್ಲಿ ಅತ್ಯಾಧುನಿಕ ಹೈ-ಮಾಸ್ಕ್ ದೀಪಗಳನ್ನು ಅಳವಡಿಸಲಾಗಿದೆ.

ಈ ದೀಪಗಳಿಂದಾಗಿ ಸಾರ್ವಜನಿಕರು ಮತ್ತು ಶಾಲಾ ಮಕ್ಕಳು ರಾತ್ರಿ ವೇಳೆ ಸುರಕ್ಷಿತವಾಗಿ ಸಂಚರಿಸಲು ಸಾಧ್ಯವಾಗಿದೆ. ಇದು ದೀರ್ಘಕಾಲದ ಬೇಡಿಕೆ ಈಡೇರಿದೆ ಎಂದು ಸ್ಥಳೀಯರು  ಹರ್ಷ ವ್ಯಕ್ತಪಡಿಸಿದರು.


Spread the love

Leave a Reply

Your email address will not be published. Required fields are marked *