ಹೊಸನಗರದ ಅಸ್ಮಿತೆಗಾಗಿ ಹೋರಾಟ- ಫೆಬ್ರವರಿ 12 ರಂದು ನಿರ್ಣಯ ಸಭೆ

NAADI NEWS 20260209 195845 0000 ಹೊಸನಗರದ ಅಸ್ಮಿತೆಗಾಗಿ ಹೋರಾಟ- ಫೆಬ್ರವರಿ 12 ರಂದು ನಿರ್ಣಯ ಸಭೆ
Spread the love

ಹೊಸನಗರ: ಐದು ಜಲಾಶಯಗಳ ನಿರ್ಮಾಣದಿಂದ ಭೌಗೋಳಿಕ ಅಸ್ತಿತ್ವ ಕಳೆದುಕೊಂಡು, ಅಭಿವೃದ್ಧಿಯಲ್ಲಿ ಹಿನ್ನಡೆ ಅನುಭವಿಸುತ್ತಿರುವ ಹೊಸನಗರ ವಿಧಾನಸಭಾ ಕ್ಷೇತ್ರವನ್ನು ಮರುಸ್ಥಾಪಿಸಬೇಕು ಎಂಬ ಕೂಗು ಮತ್ತೆ ಬಲವಾಗಿದೆ. ಈ ಹೋರಾಟದ ಮುಂದಿನ ಹಂತವಾಗಿ ಫೆಬ್ರವರಿ 12ರಂದು ಪಟ್ಟಣದ ಶ್ರೀ ಗಾಯತ್ರಿ ಮಂದಿರದಲ್ಲಿ ಬೃಹತ್ ಪೂರ್ವಭಾವಿ ಸಭೆಯನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್ ತಿಳಿಸಿದ್ದಾರೆ.


ಹೊಸನಗರದ ಅಸ್ಮಿತೆಗಾಗಿ ಹೋರಾಟ : ಪಾದಯಾತ್ರೆಯ ಸಂಕಲ್ಪ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸನಗರ ತಾಲೂಕು ಈ ಹಿಂದೆ ಸ್ವತಂತ್ರ ವಿಧಾನಸಭಾ ಕ್ಷೇತ್ರವಾಗಿತ್ತು. ಆದರೆ ಪ್ರಸ್ತುತ ತಲಾ ಎರಡು ಹೋಬಳಿಗಳು ಸಾಗರ ಮತ್ತು ತೀರ್ಥಹಳ್ಳಿ ಕ್ಷೇತ್ರಗಳಿಗೆ ಹಂಚಿಕೆಯಾಗಿವೆ. ಇದರಿಂದ ತಾಲೂಕಿನ ಸಮಗ್ರ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ. ಈ ಅನ್ಯಾಯದ ವಿರುದ್ಧ ಹೊಸನಗರದಿಂದ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿಯವರೆಗೆ ಸಾವಿರಾರು ಜನರೊಂದಿಗೆ ಬೃಹತ್ ಪಾದಯಾತ್ರೆ ನಡೆಸಲು ನಿರ್ಧರಿಸಲಾಗಿದೆ” ಎಂದರು.ಮೂಲೆಗದ್ದೆ ಮಠದ ಶ್ರೀ ಸದಾನಂದ ಶಿವಯೋಗಾಶ್ರಮದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಅಭಿನವ ಚನ್ನಬಸವ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ಈ ಹೋರಾಟ ರೂಪುಗೊಳ್ಳಲಿದೆ.



ಪಕ್ಷಾತೀತ ಬೆಂಬಲ
ಈ ಹೋರಾಟಕ್ಕೆ ಈಗಾಗಲೇ ಎಲ್ಲಾ ರಾಜಕೀಯ ಗಡಿಗಳನ್ನು ಮೀರಿ ಬೆಂಬಲ ವ್ಯಕ್ತವಾಗುತ್ತಿದೆ.

ಫೆಬ್ರವರಿ 12ರ ಸಭೆಯ ವಿವರ:- ಹೋರಾಟದ ಮುಂದಿನ ರೂಪುರೇಷೆಗಳನ್ನು ಸಿದ್ಧಪಡಿಸಲು ಫೆಬ್ರವರಿ 12, ಗುರುವಾರ ಬೆಳಿಗ್ಗೆ 10:30ಕ್ಕೆ ಪಟ್ಟಣದ ಶ್ರೀ ಗಾಯತ್ರಿ ಮಂದಿರದಲ್ಲಿ ಸಭೆ ಕರೆಯಲಾಗಿದೆ.

ಸಭೆಯಲ್ಲಿ ಎಲ್ಲರೂ ಭಾಗವಹಿಸಬೇಕು

“ಇದು ಕೇವಲ ರಾಜಕೀಯ ಸಭೆಯಲ್ಲ, ಇದು ತಾಲೂಕಿನ ಸ್ವಾಭಿಮಾನದ ಸಭೆ . ತಾಲೂಕಿನ ಎಲ್ಲಾ ಸಂಘ-ಸಂಸ್ಥೆಗಳು, ರೈತ ಸಂಘ, ದಲಿತ ಸಂಘಟನೆಗಳು, ಮಹಿಳಾ ಮಂಡಳಿಗಳು, ಸಾಮಾಜಿಕ ಸಂಘಟನೆಗಳು, ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪಕ್ಷಾತೀತವಾಗಿ ಮತ್ತು ಜಾತ್ಯಾತೀತವಾಗಿ ಭಾಗವಹಿಸಿ ತಮ್ಮ ಸಲಹೆಗಳನ್ನು ನೀಡಬೇಕು” ಎಂದು ಕಲಗೋಡು ರತ್ನಾಕರ್ ಮನವಿ ಮಾಡಿದ್ದಾರೆ.

ಈ ಸಭೆಯಲ್ಲಿ ತೆಗೆದುಕೊಳ್ಳುವ ತೀರ್ಮಾನಗಳ ಆಧಾರದ ಮೇಲೆ ಪಾದಯಾತ್ರೆಯ ದಿನಾಂಕವನ್ನು ಅಧಿಕೃತವಾಗಿ ಘೋಷಿಸುವ ಸಾಧ್ಯತೆಯಿದೆ.


Spread the love

Leave a Reply

Your email address will not be published. Required fields are marked *