ಹೊಸನಗರ: ಏಕಾಂಗಿಯಾಗಿ ವಾಸಿಸುವ ಹಿರಿಯ ನಾಗರೀಕರಿಗೆ ವಿಶೇಷ ಭದ್ರತೆ ಒದಗಿಸುವ ರಾಜ್ಯ ಪೋಲೀಸ್ ಮಹಾ ನಿರ್ದೆಶಕರ ಪೋಲೀಸ್ ಇಲಾಖೆಯ ಆಸರೆ ಕಾರ್ಯಕ್ರಮಕ್ಕೆ ಹಿರಿಯ ನಾಗರೀಕರಿಗೆ ಬಲ ಸಿಕ್ಕಿದತಾಂಗಿದೆ ಎಂದು ಹೊಸನಗರ ತಾಲ್ಲೂಕು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಡಾ. ದಿನಮಣಿಯವರು ಹೇಳಿದರು.ಹೊಸನಗರ ಪೋಲೀಸ್ ಠಾಣೆಯ ಸಬ್ಇನ್ಸ್ಪೇಕ್ಟರ್ ಶಂಕರ ಗೌಡ ಪಾಟೀಲ್ ಹಾಗೂ ಪೋಲೀಸ್ ಇಲಾಖೆಯ ಎಲ್ಲ ಸಿಬ್ಬಂದಿಗಳಿಗೆ ಪೋಲೀಸ್ ಇಲಾಖೆಯ ಮಹಾ ನಿರ್ದೆಶಕರಿಗೆ ಅಭಿನಂದನ ಪತ್ರ ಸಲ್ಲಿಸಿ ಮಾತನಾಡಿದರು.
ಇತ್ತಿಚಿನ ದಿನಗಳಲ್ಲಿ ಹಳ್ಳಿಗಳಲ್ಲಿ ಅದರಲ್ಲೂ ನಮ್ಮ ಮಲೆನಾಡು ಭಾಗದ ಕುಗ್ರಾಮಗಳಲ್ಲಿ ಒಂಟಿ ಮನೆಗಳಲ್ಲಿ ವಾಸಿಸುವ ಹಿರಿಯ ನಾಗರೀಕರುಗಳು ಕಳ್ಳತನ, ಕೊಲೆ, ಸುಲಿಗೆ ಮೊಬೈಲ್ ವಂಚನೆ ಮೊದಲಾದ ಕುಕೃತ್ಯಗಳಿಗೆ ಒಳಗಾಗಿ ಭಯದಿಂದ ದಿನ ಕಳೆಯುವ ಸನ್ನಿವೇಶಗಳು ಹೆಚ್ಚುತ್ತಿದ್ದು ಈ ಬಗ್ಗೆ ಗಮನ ಹರಿಸಿರುವ ಮಾನ್ಯ ರಾಜ್ಯ ಪೋಲಿಸ್ ಮಹಾ ನಿರ್ದೆಶಕರ ಆದೇಶ ಪೋಲೀಸ್ ಇಲಾಖೆ ಆಸರೆ ಎಂಬ ವಿಶೇಷ ಆದೇಶವನ್ನು ಹೊರಡಿಸಿರುವುದು ಒಂದು ಆಶಾದಾಯಕ ಕ್ರಮವಾಗಿದೆ ಇದಕ್ಕಾಗಿ ಪೋಲೀಸ್ ಇಲಾಖೆಗೆ ನಮ್ಮಂಥ ಹಿರಿಯರು ಅಭಿನಂದಿಸಲು ಹೆಮ್ಮೆಯಾಗುತ್ತದೆ ಎಂದರು.
ಅಭಿನಂದಿಸಿ ಪತ್ರ ಸ್ವಿಕರಿಸಿ ಮಾತನಾಡಿದ ಸಬ್ಇನ್ಸ್ಪೇಕ್ಟರ್ ಶಂಕರ ಗೌಡ ಪಾಟೀಲ್ ಮಹಾ ನಿರ್ದೆಶಕರ ಆದೇಶ ಹಿರಿಯ ನಾಗರೀಕರಿಗೆ ಮಹತ್ವದಾಗಿದೆ ಏಕಾಂಗಿ ಹಿರಿಯ ನಾಗರೀಕರಿಗೆ ಖಾಕಿ ಆಸರೆ ಎಂದಿಗೂ ಇರುತ್ತದೆ ಕೇವಲ ಯೋಗಕ್ಷೇಮ ಸುರಕ್ಷತೆ ಖಚಿತಪಡಿಸಿಕೊಳ್ಳುವುದಕ್ಕೆ ನಮ್ಮ ಇಲಾಖೆ ಸೀಮಿತವಾಗಿಲ್ಲ ನಮ್ಮ ಹಿಂದಿನ ಕಾರ್ಯಕ್ರಮವಾದ ಮನೆ-ಮನೆ ಪೋಲಿಸ್ ಯಶಸ್ವಿಯಾಗಿದೆ ಅದರಂತೆ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವುದು ನಮ್ಮ ಉದ್ಧೇಶವಾಗಿದೆ ನಮ್ಮ ಪೋಲಿಸರು ಮನೆಗಳಿಗೆ ಭೇಟಿ ನೀಡಿದಾಗ ಹಿರಿಯರು ಮತ್ತು ಮಹಿಳೆಯರು ಏನಾದರೂ ಸಮಸ್ಯೆ ಎದುರಿಸುತ್ತಿದ್ದರೇ ಸಂಬಂಧಪಟ್ಟ ಕಲ್ಯಾಣ ಇಲಾಖೆ ಜೊತೆ ಸಮನ್ವಯ ಸಾಧಿಸಿ ಅವರ ಸಮಸ್ಯೆ ಪರಿಹರಿಸಬೇಕು ಇವುಗಳಲ್ಲಿ ಆರೋಗ್ಯ ಸೇವೆ ಅಂಬ್ಯುಲೆನ್ಸ್ ಸೇವೆ ಸೇರಿದಂತೆ ಪ್ರತಿಯೊಂದು ನೆರವೂ ಒಳಗೊಂಡಿರುತ್ತದೆ. ಹಿರಿಯ ನಾಗರೀಕರಿಗೆ ಯಾವುದೇ ತೊಂದರೆಯಾದಲ್ಲಿ ತಕ್ಷಣ ನಮ್ಮ ಇಲಾಖೆಯ ಗಮನಕ್ಕೆ ತಂದರೆ ತುರ್ತು ಕ್ರಮ ಕೈಗೊಂಡು ಹಿರಿಯ ನಾಗರೀಕರಿಗೆ ಸ್ವಂದಿಸುತ್ತೇವೆಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ನಿವೃತ್ತ ನೌಕರರ ಸಂಘದ ಅಧ್ಯಕ್ಷರಾದ ಡಾ. ದಿನಮಣಿ, ಕಾರ್ಯದರ್ಶಿ ಅನಂತ ಪದ್ಮನಾಭ ನಿರ್ದೆಶಕರಾದ ಮಹಾಬಲ, ರಂಗನಾಥ್,ಲೋಕೇಶ್, ಕುಬೇಂದ್ರಪ್ಪ ಇನ್ನೂ ಮುಂತಾದವರು ಉಪಸ್ಥಿತರಿದ್ದರು.












Leave a Reply