ಬಿಜೆಪಿ ಯುವ ಮೋರ್ಚಾ ವತಿಯಿಂದ ಹೊಸನಗರದಲ್ಲಿ ಪ್ರತಿಭಟನೆ
ಹೊಸನಗರ : ಕಾಂಗ್ರೆಸ್ ಗೂ೦ಡಾ ರಾಜ್ಯವನ್ನಾಗಿ ಪರಿವರ್ತರಿಸಲು ಹೊರಟಿದೆ. ಇವರ ಅವಧಿಯಲ್ಲಿ ಏನನ್ನು ಬೇಕಾದರೂ ಮಾಡಬಹುದು ಎಂದು ಭಾವಿಸಿದ್ದಾರೆ.ಸಾಂವಿಧಾನಿಕ ಹುದ್ದೆಗಳಿಗೆ ಗೌರವ ಕೊಡುವುದನ್ನು ಕಾಂಗ್ರೆಸ್ ಕಲಿಯಬೇಕು, ಗೂಂಡಾ ವರ್ತನೆ ತೋರಿದ ಕಾಂಗ್ರೆಸ್ ಶಾಸಕ ಬಿ.ಕೆ ಹರಿಪ್ರಸಾದ್ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ತಾಲೂಕು ಯುವ ಮೋರ್ಚಾ ಅಧ್ಯಕ್ಷ ವಿಶ್ವನಾಥ್ ಗಂಧ್ರಳ್ಳಿ ವಾಗ್ದಾಳಿ ನಡೆಸಿದರು.
ಬಿಜೆಪಿ ಯುವ ಮೋರ್ಚಾ ವತಿಯಿಂದ ಹೊಸನಗರದ ತಾಲೂಕು ಆಡಳಿತ ಕಚೇರಿ ಮುಂಭಾಗದಲ್ಲಿ ವಿಧಾನ ಮಂಡಲ ಅಧಿವೇಶನ ಸಮಯದಲ್ಲಿ ಮಾನ್ಯ ರಾಜ್ಯಪಾಲರಿಗೆ ಕಾಂಗ್ರೆಸ್ ತೋರಿದ ಅಗೌರವ ಮತ್ತು ಶಾಸಕರಿಂದ ಗೂಂಡಾ ವರ್ತನೆ ಖಂಡಿಸಿ ಪ್ರತಿಭಟನೆ ನಡೆಸಿದರು.
ತದನಂತರ ಬಿಜೆಪಿ ಯುವ ಮೋರ್ಚಾ ಸದಸ್ಯರು ತಾಲ್ಲೂಕು ದಂಡಾಧಿಕಾರಿಗಳಾದ ಭರತ್ ರಾಜ್ ಅವರಿಗೆ ಮನವಿ ಸಲ್ಲಿಸಿ. ಬಿ ಕೆ ಹರಿಪ್ರಸಾದ್ ರವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಅವರ ಶಾಸಕ ಸ್ಥಾನ ರದ್ದುಗೊಳಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಹೊಸನಗರ ಮಹಾಶಕ್ತಿಕೇಂದ್ರದ ಅಧ್ಯಕ್ಷರಾದ ಶ್ರೀಪತಿರಾವ್, ತಾಲೂಕು ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಅಂಕಿತ್ ಮೇಕೇರಿ, ಮಂಡಲ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಕಲ್ಕೊಪ್ಪ,ಹೊಸನಗರ ಟೌನ್ ಯುವ ಮೋರ್ಚಾ ಅಧ್ಯಕ್ಷರಾದ ಮಹೇಂದ್ರ ಹಾಗೂ ಪ್ರಮುಖರಾದ ಸತ್ಯನಾರಾಯಣ, ರಿಪ್ಪನ್ ಪೇಟೆಯ ಯುವ ಮುಖಂಡರಾದ ಮುರಳಿ ಕೆರೆಹಳ್ಳಿ , ಮಂಜುನಾಥ ಗವಟೂರು, ಮಂಜುನಾಥ್ ಸಂಜೀವ್, ವಿಜಯ್ ಕಾವೇರಿ, ಕೃಷ್ಣವೇಣಿ, ಶಶಿಕಲಾ ಅನಂತ್, ಮನೋಜ್ ಪೂಜಾರಿ, ಆದರ್ಶ ಉಳುಕೊಪ್ಪ, ಪುರುಷೋತ್ತಮ ಬೇದೂರು, ಮಹೇಶ್ ದೇವರಸಲಿಕೆ, ಸತೀಶ್ ಸೋನಲೆ, ಪವನ್ ಗೊರಳ್ಳಿ, ಗಗನ್ ಮತ್ತು ಅನೇಕರು ಉಪಸ್ಥಿತರಿದ್ದರು.












Leave a Reply