ಹೊಸನಗರ : ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆ ಅಡಿಯಲ್ಲಿ,ಕರ್ನಾಟಕ ಗ್ರಾಮೀಣ ಬ್ಯಾಂಕ್ ಕಾರಣಗಿರಿ ಶಾಖೆಯ ವ್ಯವಸ್ಥಾಪಕರಾದ ಪದ್ಮಾಕ್ಷ ಅವರು 2 ಲಕ್ಷ ರೂ ಮೊತ್ತವನ್ನೂ ಚೆಕ್ ಮುಖಾಂತರ ಮೃತ ಮಂಜುನಾಥ ಅವರ ಪತ್ನಿ ಯಶೋಧ ಅವರಿಗೆ ಹಸ್ತಾಂತರಿಸಿದರು.
ಮೃತ ಮಂಜುನಾಥ್ ಅವರ ಬ್ಯಾಂಕ್ ಖಾತೆಯಿಂದ ಪ್ರತಿ ವರ್ಷ 436 ರೂಪಾಯಿ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನೆ ಉದ್ದೇಶವಾಗಿ ಕಡಿತಗೊಳ್ಳುತ್ತಿತ್ತು. ಆದ್ದರಿಂದ ಈ ಜೀವ ವಿಮೆ ಮೊತ್ತವನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಹನಿಯ ಗುರುಮೂರ್ತಿ, ಸದಸ್ಯ ರತ್ನಮ್ಮ, ಸಾಮಾಜಿಕ ಕಾರ್ಯಕರ್ತ ವೀರಪ್ಪಗೌಡ, ಕರ್ನಾಟಕ ಗ್ರಾಮೀಣ ಬ್ಯಾಂಕ್ ಕಾರಣಗಿರಿ ಶಾಖೆಯ ಸಿಬ್ಬಂದಿ ವರ್ಗ ಮತ್ತು ಅನೇಕರು ಉಪಸ್ಥಿತರಿದ್ದರು.
ಕರ್ನಾಟಕ ಗ್ರಾಮೀಣ ಬ್ಯಾಂಕ್ ವತಿಯಿಂದ ಮೃತ ಮಂಜುನಾಥ್ ಕುಟುಂಬಕ್ಕೆ 2 ಲಕ್ಷ ರೂ. ಚೆಕ್ ವಿತರಣೆ












Leave a Reply