ಕರ್ನಾಟಕ ಸಂಗೀತಕ್ಕೆ ಸರಿಯಾದ ಅಡಿಪಾಯವನ್ನು ಹಾಕಿದವರು ಪುರಂದರದಾಸರು-ಪ.ರಾ. ಕೃಷ್ಣಮೂರ್ತಿ

IMG 20260127 WA0010 ಕರ್ನಾಟಕ ಸಂಗೀತಕ್ಕೆ ಸರಿಯಾದ ಅಡಿಪಾಯವನ್ನು ಹಾಕಿದವರು ಪುರಂದರದಾಸರು-ಪ.ರಾ. ಕೃಷ್ಣಮೂರ್ತಿ
Spread the love

ಹೊಸನಗರ : ಕರ್ನಾಟಕ ಸಂಗೀತಕ್ಕೆ ಸರಿಯಾದ ಅಡಿಪಾಯವನ್ನು ಹಾಕಿದವರು ಪುರಂದರದಾಸರು. ಅದಕ್ಕಾಗಿ ಅವರನ್ನು ಕರ್ನಾಟಕ ಸಂಗೀತ ಪಿತಾಮಹ ಎಂದು ತ್ಯಾಗರಾಜರೇ ಕರೆದಿದ್ದಾರೆ. ಸುಮಾರು ನಾಲ್ಕು ಲಕ್ಷ ಕೀರ್ತನೆಗಳನ್ನು ರಚಿಸಿರುವ ಅವರು ಸಮಾಜದಲ್ಲಿರುವ ಮೂಢನಂಬಿಕೆ, ಭೇದಭಾವ, ಇತ್ಯಾದಿಗಳನ್ನು ಹೋಗಲಾಡಿಸಲು ಅತ್ಯಂತ ಸರಳವಾಗಿ ಗೀತೆಗಳನ್ನು ರಚಿಸಿದ್ದಾರೆ. ಸಕಲ ವೇದಗಳ ಸಾರವನ್ನು ಸರಳವಾಗಿ ರಚಿಸಿರುವ ಪುರಂದರ ದಾಸರ ಕೀರ್ತನೆಗಳು ಸುಮಾರು ಕ್ರಿ. ಶ. 1500 ರಲ್ಲಿ ರಚಿಸಿದ್ದರೂ ಈಗಲೂ ಅಷ್ಟೇ ಪ್ರಸ್ತುತ ಮತ್ತು ಜನಪ್ರಿಯವಾಗಿದ್ದು ಸಮಾಜ ಪರಿವರ್ತನೆಯಲ್ಲಿ ಅವು ಪ್ರಮುಖ ಪಾತ್ರವನ್ನು ವಹಿಸುತ್ತವೆ ಎಂದು ಸಂಸ್ಕಾರ ಭಾರತಿಯ ಅಖಿಲ ಭಾರತ ಸಂಘಟನಾ ಕಾರ್ಯದರ್ಶಿಯಾಗಿದ್ದ ಶ್ರೀ ಪ. ರಾ. ಕೃಷ್ಣಮೂರ್ತಿ ತಿಳಿಸಿದ್ದಾರೆ.

img 20260127 wa00126001449034280419618 ಕರ್ನಾಟಕ ಸಂಗೀತಕ್ಕೆ ಸರಿಯಾದ ಅಡಿಪಾಯವನ್ನು ಹಾಕಿದವರು ಪುರಂದರದಾಸರು-ಪ.ರಾ. ಕೃಷ್ಣಮೂರ್ತಿ



  ಕಾರಣಗಿರಿ ಶ್ರೀ ಸಿದ್ಧಿವಿನಾಯಕ ಸಭಾಭವನದಲ್ಲಿ ಗ್ರಾಮಭಾರತಿ ಟ್ರಸ್ಟ್ ಮತ್ತು ರಾಷ್ಟ್ರೋತ್ಥಾನ ಬಳಗ, ಕಾರಣಗಿರಿ ಆಶ್ರಯದಲ್ಲಿ ನಡೆದ ಪುರಂದರೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಡುತ್ತಿದ್ದರು.

ಗ್ರಾಮಭಾರತಿ ಟ್ರಸ್ಟ್ ಅಧ್ಯಕ್ಷ ಹನಿಯ ರವಿ, ರಾಷ್ಟ್ರೋತ್ಥಾನ ಬಳಗದ ಅಧ್ಯಕ್ಷ ನಳಿನಚಂದ್ರ ಕೆ. ಎಸ್, ಹನಿಯ ಗುರುಮೂರ್ತಿ ಮತ್ತಿತ್ತರರು ಪಾಲ್ಗೊಂಡಿದ್ದರು.

img 20260127 wa00113545455820642556804 ಕರ್ನಾಟಕ ಸಂಗೀತಕ್ಕೆ ಸರಿಯಾದ ಅಡಿಪಾಯವನ್ನು ಹಾಕಿದವರು ಪುರಂದರದಾಸರು-ಪ.ರಾ. ಕೃಷ್ಣಮೂರ್ತಿ
ಶ್ರೀ ಪ. ರಾ. ಕೃಷ್ಣಮೂರ್ತಿ



ವಿವಿಧ ಭಜನಾ ಮಂಡಳಿಯವರು ಮತ್ತಿತರ  ಕಲಾವಿದರು ಪುರಂದರದಾಸರ ಕೀರ್ತನೆಗಳನ್ನು ಹಾಡಿದರು.

ಪಕ್ಕವಾದ್ಯದಲ್ಲಿ ಶ್ರೀ ಗರ್ತಿಕೆರೆ ರಾಘಣ್ಣ ಮತ್ತು ದೇವದಾಸ ಆಚಾರ್ ಸಹಕರಿಸಿದ್ದರು.

ಆರತಿ ಮಹೇಶ್, ಸರಸ್ವತಿ ನಳಿನಚಂದ್ರ, ವಿನಾಯಕ ಪ್ರಭು ಮತ್ತಿತರರು ಉಪಸ್ಥಿತರಿದ್ದರು.


Spread the love

Leave a Reply

Your email address will not be published. Required fields are marked *