ನಗರ( ಸಂಪೆಕಟ್ಟೆ): ನಾವೆಲ್ಲ ಹಿಂದೂವಾಗಿ ಬದುಕಿದರೆ ಮಾತ್ರ ಭಾರತೀಯ ಸಂಸ್ಕೃತಿ ,ಪರಂಪರೆ ಉಳಿಯುತ್ತದೆ . ಹಿಂದೂ ಸಮಾಜವು ಸಾಮರಸ್ಯ ದಿಂದ ಬದುಕುವುದೋಂದಿಗೆ ಸ್ವದೇಶಿ , ಸ್ವ-ಭಾಷಾ ,ಸ್ವ-ಭೂಷ,ಸ್ವಾಭಿಮಾನ ,ಸಾವಯವ ಈ ವಿಚಾರವನ್ನು ಅಳವಡಿಸಿಕೊಳ್ಳೋಣ ಇದರಿಂದ ಭಾರತ ಬಲಿಷ್ಠವಾಗಲಿದೆ ಎಂದು ಚಕ್ಕೋಡುಬೈಲು ಶ್ರೀವತ್ಸ ಅಭಿಪ್ರಾಯಪಟ್ಟರು.
ಸಂಪೆಕಟ್ಟೆ ಮಂಡಲದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಿಂದೂ ಸಂಗಮದ ಸಭಾಧ್ಯಕ್ಷತೆಯನ್ನು ಬಿ.ಎನ್ ಭಾಸ್ಕರ್ ಅಂಕಣಗದ್ದೆ ವಹಿಸಿದ್ದರು. ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಯನ್ನು ಮಾತನಾಡಿದ ಆರ್,ಎಸ್,ಎಸ್ ಜಿಲ್ಲಾ ಪ್ರಚಾರಕ್ ಶ್ರೀನಿವಾಸ್ ಸಂಘದ ಶತಮಾನೋತ್ಸವ ಸಂಭ್ರಮವನ್ನು ಹಿಂದೂ ಸಮಾಜವೇ ಸಂಘಟಿಸಿದೆ. ಧರ್ಮ ಭಾವನೆ,ಧಾರ್ಮಿಕ ಜಾಗೃತಿ,ಸಾಮಾಜಿಕ ಏಕತೆ, ಸ್ವಾಭಿಮಾನ ಜಾಗೃತಿಗೊಳಿಸುವುದು ಹಿಂದೂ ಸಂಗಮದ ಉದ್ದೇಶ ಎಂದು ಹೇಳಿದರು.

ಸಂಪೆಕಟ್ಟೆಯ ಮುಖ್ಯ ರಸ್ತೆಯಲ್ಲಿ ಶೋಭಾಯಾತ್ರೆಯಲ್ಲಿ ಮಾತೆಯರಿಂದ ಪೂರ್ಣಕುಂಭದೊಂದಿಗೆ ವಿವಿಧ ಸಾಂಸ್ಕೃತಿಕ ಕಲಾ ಪ್ರದರ್ಶನದ ಮೂಲಕ ಸಾಗಿ,ಸಂಗಮ ಸ್ಥಾನ ತಲುಪಿ, ಗೋಪೂಜೆಯ ಮೂಲಕ ಕಾರ್ಯಕ್ರಮ ಪ್ರಾರಂಭವಾಯಿತು. ಭಜನಾಕುಣಿತ ,ಲಾವಣಿ,ಕೋಲಾಟ,ಜನಪದಗೀತೆ,ನಾಟಕ,ಸೋಬಾನೆ ಪದ್ಯ,ಭಗವದ್ಗೀತೆ ಪಠಣ, ಯಕ್ಷಗಾನ ಕಾರ್ಯಕ್ರಮದ ಮೆರಗು ಹೆಚ್ಚಿಸಿತು.

ವೇದಗೋಷ್ಠಿಯಿಂದ ಸಭಾ ಕಾರ್ಯಕ್ರಮ ಪ್ರಾರಂಭವಾಯಿತು. ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆದು ವಂದೇ ಮಾತರಂ ಹೇಳುವ ಮೂಲಕ ಕಾರ್ಯಕ್ರಮ ಸಮಾಪ್ತಿಗೊಂಡಿತು.
ಈ ಸಂಧರ್ಭದಲ್ಲಿ ತಾಲೂಕು ಹಿಂದೂ ಸಂಗಮ ಆಯೋಜನ ಸಮಿತಿಯ ಅಧ್ಯಕ್ಷರು ವಿನಯ್ ಶೆಟ್ಟಿ, ಮಂಡಲ ಅಧ್ಯಕ್ಷರು ಗಣಪತಿ ಬಿ,ಶ್ರೀಮತಿ ಪುಷ್ಪಾ ಕುಮಾರ್, ಹಿರಿಯ ಕಾರ್ಯಕರ್ತರಾದ ಲಕ್ಷ್ಮೀ ನರಸಿಂಹ ಭಟ್, ಸತ್ಯನಾರಾಯಣ ದೊಡ್ಡಲೇಪಾಲು, ಚಂದ್ರು ಭಟ್, ಶ್ರೀಧರ್ ಶೆಟ್ಟಿ,ಮಣಿಕಂಠ, ಅಡಗೋಡಿ, ನಾಗರಾಜ ಎಸ್ ಮಡೋಡಿ , ಶ್ರೀಮತಿ ವಿನೋದ ಚಂದ್ರಾಚಾರ್ಯ, ಪ್ರತಿಮಾ ಭಾಸ್ಕರ್,ಸುಧೀಂದ್ರ ಪಂಡಿತ್, ಚಂದ್ರುಶೆಟ್ಟಿ , ನರಸಿಂಹ , ಗಣಪತಿ ಶುಂಠಿ, ಕುಮಾರ್ ಭಟ್, ಅನಂತ್ ಶೇಟ್ , ಸತ್ಯನಾರಾಯಣ ಹೊಸೂರು ಮತ್ತು ಅನೇಕರು ಉಪಸ್ಥಿತರಿದ್ದರು.
ಮಾಲಾಶ್ರೀ,ಉದಯ್, ಅಶ್ವಿನಿ ಪಂಡಿತ್ ಕಾರ್ಯಕ್ರಮವನ್ನು ನಿರೂಪಿಸಿದರು.
ಸಂಪೆಕಟ್ಟೆ ಮಂಡಲದ ಈಡೀ ಹಿಂದೂ ಸಮಾಜ ಒಂದಾಗಿ ಈ ಹಿಂದೂ ಸಂಗಮದಲ್ಲಿ ಪಾಲ್ಗೊಂಡಿದೆ. ಸಾಮರಸ್ಯದ ಸಂಗಮವಾಗಿ ಈ ಕಾರ್ಯಕ್ರಮ ಅರ್ಥಪೂರ್ಣಗೊಂಡಿದೆ.
– ಶ್ರೀ ಲಕ್ಷ್ಮೀನರಸಿಂಹ, ಸಂಪೆಕಟ್ಟೆ, ಆರ್ ಎಸ್ ಎಸ್ ಹಿರಿಯ ಕಾರ್ಯಕರ್ತರು












Leave a Reply