ಯುವಜನತೆಗೆ ಶಂಕರಾಚಾರ್ಯರ ಆದರ್ಶ ಅಗತ್ಯ: ರಾಘವೇಂದ್ರ ಭಟ್

IMG 20260422 WA0033 ಯುವಜನತೆಗೆ ಶಂಕರಾಚಾರ್ಯರ ಆದರ್ಶ ಅಗತ್ಯ: ರಾಘವೇಂದ್ರ ಭಟ್
Spread the love

ರಿಪ್ಪನ್‌ಪೇಟೆಯಲ್ಲಿ ಅದ್ವೈತ ತತ್ತ್ವದ ಮಹತ್ವ ಬಿಂಬಿಸಿದ ಜಯಂತೋತ್ಸವ

ರಿಪ್ಪನ್‌ಪೇಟೆ:ಲ್ಲಿನ ಸಾಗರ ರಸ್ತೆಯಲ್ಲಿರುವ ಬ್ರಾಹ್ಮಣ ಸಂಘದ ಶ್ರೀರಾಮ ಸಮುದಾಯ ಭವನದಲ್ಲಿ ಆದಿ ಶಂಕರಾಚಾರ್ಯರ ಜಯಂತೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು.

20260421 1715327547765140213749815 ಯುವಜನತೆಗೆ ಶಂಕರಾಚಾರ್ಯರ ಆದರ್ಶ ಅಗತ್ಯ: ರಾಘವೇಂದ್ರ ಭಟ್

ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಭಾಗವಹಿಸಿದ್ದ ಕೋಣಂದೂರು ವೇದಬ್ರಹ್ಮ ಶ್ರೀ ಕೆ.ಎಲ್. ರಾಘವೇಂದ್ರಭಟ್ಟ ಅವರು ಮಾತನಾಡಿ, ಆದಿ ಶಂಕರಾಚಾರ್ಯರು ಭಾರತೀಯ ಸಂಸ್ಕೃತಿಗೆ ನೀಡಿದ ಕೊಡುಗೆ ಅನನ್ಯವಾಗಿದೆ. ಅವರ ಅದ್ವೈತ ತತ್ವವು ಇಂದಿಗೂ ಮಾನವ ಜೀವನಕ್ಕೆ ದಾರಿದೀಪವಾಗಿದ್ದು, ಯುವಜನತೆಗೆ ಅವರ ಆದರ್ಶಗಳನ್ನು ಮನವರಿಕೆ ಮಾಡಿಸುವುದು ಅಗತ್ಯವಾಗಿದೆ ಎಂದು ಹೇಳಿದರು.

img 20260422 wa0035236661788672410380 ಯುವಜನತೆಗೆ ಶಂಕರಾಚಾರ್ಯರ ಆದರ್ಶ ಅಗತ್ಯ: ರಾಘವೇಂದ್ರ ಭಟ್


ಇದೇ ವೇಳೆ ಸಾಗರ ಕನ್ನಡ ಪಾಕ್ಷಿಕ ಪತ್ರಿಕೆಯ ಪ್ರಧಾನ ಸಂಪಾದಕರಾದ ಎಂ.ಎಸ್. ನಂಜುಂಡಸ್ವಾಮಿ ಅವರು ಮಾತನಾಡಿ, ಶಂಕರಾಚಾರ್ಯರು ಧರ್ಮವೇ ನಿಜವಾದ ಆಯುಧ ಎಂದು ನಂಬಿದ್ದರು. ದೇಶದ ನಾಲ್ಕು ದಿಕ್ಕುಗಳಲ್ಲಿ ಶೃಂಗೇರಿ, ದ್ವಾರಕಾ, ಪುರಿ ಮತ್ತು ಬದ್ರಿಕಾಶ್ರಮಗಳಲ್ಲಿ ಪೀಠಗಳನ್ನು ಸ್ಥಾಪಿಸಿ ಸಂನ್ಯಾಸ ಪರಂಪರೆಯನ್ನು ಬಲಪಡಿಸಿದವರು ಎಂದು ತಿಳಿಸಿದರು. ಧರ್ಮದ ಮೂಲಕ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಅವರ ಕೊಡುಗೆ ಅಪಾರವಾಗಿದೆ ಎಂದರು.

img 20260422 wa00224094720859271937329 ಯುವಜನತೆಗೆ ಶಂಕರಾಚಾರ್ಯರ ಆದರ್ಶ ಅಗತ್ಯ: ರಾಘವೇಂದ್ರ ಭಟ್

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ರಾಹ್ಮಣ ಸಂಘದ ಅಧ್ಯಕ್ಷ ಎಚ್.ಪಿ. ಸುರೇಶ್ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಸಾಗರ ಶೃಂಗೇರಿ ಶಂಕರಮಠದ ಧರ್ಮದರ್ಶಿ ಆಶ್ವಿನಿ ಕುಮಾರ್, ನಿವೃತ್ತ ಮುಖ್ಯೋಪಾಧ್ಯಾಯ ಉಮೇಶ್ ಆರ್. ಭಟ್, ವಿಶ್ವಕರ್ಮ ಸಮಾಜದ ತಾಲೂಕು ಗೌರವಾಧ್ಯಕ್ಷ ದೇವದಾಸ್ ಆಚಾರ್ ಉಪಸ್ಥಿತರಿದ್ದರು.

img 20260422 wa00347626542786271988252 ಯುವಜನತೆಗೆ ಶಂಕರಾಚಾರ್ಯರ ಆದರ್ಶ ಅಗತ್ಯ: ರಾಘವೇಂದ್ರ ಭಟ್

ಕಾರ್ಯಕ್ರಮದಲ್ಲಿ ಅಮಿತಾ ಬಲ್ಲಾಳ್ ಸ್ವಾಗತಿಸಿದರು. ಪದ್ಮಾ ಸುರೇಶ್ ನಿರೂಪಣೆ ಮಾಡಿದರು. ಸವಿತಾ ರಾಧಾಕೃಷ್ಣ ವಂದಿಸಿದರು.

20260421 1724006629461250319865561 ಯುವಜನತೆಗೆ ಶಂಕರಾಚಾರ್ಯರ ಆದರ್ಶ ಅಗತ್ಯ: ರಾಘವೇಂದ್ರ ಭಟ್
img 20260324 wa00563351594075632683978 ಯುವಜನತೆಗೆ ಶಂಕರಾಚಾರ್ಯರ ಆದರ್ಶ ಅಗತ್ಯ: ರಾಘವೇಂದ್ರ ಭಟ್

Leave a Reply

Your email address will not be published. Required fields are marked *