ರಿಪ್ಪನ್‌ಪೇಟೆ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಧರ್ಮದರ್ಶಿ ಸಮಿತಿ ಅಧ್ಯಕ್ಷರಾಗಿ ಡಿ.ಇ. ಮಧುಸೂದನ್ ಆಯ್ಕೆ

Add a heading 20260711 111310 0000 ರಿಪ್ಪನ್‌ಪೇಟೆ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಧರ್ಮದರ್ಶಿ ಸಮಿತಿ ಅಧ್ಯಕ್ಷರಾಗಿ ಡಿ.ಇ. ಮಧುಸೂದನ್ ಆಯ್ಕೆ
Spread the love

ಮೂರು ವರ್ಷಗಳ ಅವಧಿಗೆ ನೂತನ ಧರ್ಮದರ್ಶಿ ಸಮಿತಿ ರಚನೆ

img 20260709 wa00514818451974143665655 ರಿಪ್ಪನ್‌ಪೇಟೆ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಧರ್ಮದರ್ಶಿ ಸಮಿತಿ ಅಧ್ಯಕ್ಷರಾಗಿ ಡಿ.ಇ. ಮಧುಸೂದನ್ ಆಯ್ಕೆ

ರಿಪ್ಪನ್‌ಪೇಟೆ: ಲ್ಲಿನ ಐತಿಹಾಸಿಕ ಪ್ರಸಿದ್ಧ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಧರ್ಮದರ್ಶಿ ಸಮಿತಿಯ ನೂತನ ಅಧ್ಯಕ್ಷರಾಗಿ ಡಿ.ಇ. ಮಧುಸೂದನ್ ಆಯ್ಕೆಯಾಗಿದ್ದಾರೆ.

ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಬರುವ ಈ ದೇವಸ್ಥಾನದ ಧರ್ಮದರ್ಶಿ ಸಮಿತಿಯನ್ನು ಮುಂದಿನ ಮೂರು ವರ್ಷಗಳ ಅವಧಿಗೆ ರಚಿಸಲಾಗಿದ್ದು, ಸದಸ್ಯರಾಗಿ ರವೀಂದ್ರ ಕೇರೇಹಳ್ಳಿ, ಶ್ರೀಧರ್ ಜೆ.ಆರ್., ಗಣೇಶರಾವ್ ಕೇರೇಹಳ್ಳಿ, ಹರೀಶ್ ಎಸ್. ಪ್ರಭು (ಸಾಮಾನ್ಯ), ದೀಪಾ ಎಸ್. ಹೆಬ್ಬಾರ್, ಧನಲಕ್ಷ್ಮಿ (ಮಹಿಳಾ ಪ್ರತಿನಿಧಿ), ಸ್ವಾಮಿ (ಪರಿಶಿಷ್ಟ ಜಾತಿ ಪ್ರತಿನಿಧಿ) ಹಾಗೂ ದೇವಸ್ಥಾನದ ಅರ್ಚಕರಾದ ಶ್ರೀಶ ಎಂ.ಎಸ್. ಹೆಗಡೆ ಅವರನ್ನು ನೇಮಕ ಮಾಡಲಾಗಿದೆ.

ಒಟ್ಟು 9 ಸದಸ್ಯರ ಧರ್ಮದರ್ಶಿ ಸಮಿತಿಯನ್ನು ರಚಿಸಲಾಗಿದ್ದು, ಈ ಕುರಿತು ಹೊಸನಗರ ತಹಶೀಲ್ದಾರ್ ಕಚೇರಿ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.

img 20260710 wa0068933780631862840318 ರಿಪ್ಪನ್‌ಪೇಟೆ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಧರ್ಮದರ್ಶಿ ಸಮಿತಿ ಅಧ್ಯಕ್ಷರಾಗಿ ಡಿ.ಇ. ಮಧುಸೂದನ್ ಆಯ್ಕೆ

Leave a Reply

Your email address will not be published. Required fields are marked *