ರಿಪ್ಪನ್ ಪೇಟೆಯಲ್ಲಿ ತಿರಂಗಾ ಯಾತ್ರೆ: ದೇಶ ವಿಭಜನೆಯ ಕರಾಳ ದಿನ ಸ್ಮರಿಸಿದ ಬಿಜೆಪಿ

Addaheading 20260814 203208 0000 ರಿಪ್ಪನ್ ಪೇಟೆಯಲ್ಲಿ ತಿರಂಗಾ ಯಾತ್ರೆ: ದೇಶ ವಿಭಜನೆಯ ಕರಾಳ ದಿನ ಸ್ಮರಿಸಿದ ಬಿಜೆಪಿ
Spread the love

ರಿಪ್ಪನ್ ಪೇಟೆ: ಖಂಡ ಭಾರತದ ವಿಭಜನೆಯ ಸಂದರ್ಭದಲ್ಲಿ ನಡೆದ ದುರಂತಗಳು ಹಾಗೂ ಅನ್ಯಾಯಗಳನ್ನು ಸ್ಮರಿಸುವ ಅಂಗವಾಗಿ ಶುಕ್ರವಾರ ರಿಪ್ಪನ್ ಪೇಟೆಯಲ್ಲಿ ಬಿಜೆಪಿ ನೇತೃತ್ವದಲ್ಲಿ ತಿರಂಗಾ ಯಾತ್ರೆ ನಡೆಯಿತು. 

  ಪಟ್ಟಣದ ನಾಲ್ಕು ಪ್ರಮುಖ ರಸ್ತೆಗಳಲ್ಲಿ ಬಿಜೆಪಿ ಕಾರ್ಯಕರ್ತರು ಕೈಯಲ್ಲಿ ರಾಷ್ಟ್ರಧ್ವಜ ಹಿಡಿದು ಮೌನ ಮೆರವಣಿಗೆ ನಡೆಸಿದರು.
ಮೆರವಣಿಗೆಯ ಬಳಿಕ ನಡೆದ ಸಭೆಯಲ್ಲಿ ಬಿಜೆಪಿ ಜಿಲ್ಲಾ ಮುಖಂಡ ಹರಿಕೃಷ್ಣ ಮಾತನಾಡಿ, ದೇಶ ವಿಭಜನೆಯ ಸಂದರ್ಭದಲ್ಲಿ ಹಿಂದೂಗಳ ಮೇಲೆ ನಡೆದ ಮಾರಣಹೋಮ, ಹಿಂಸಾಚಾರ ಹಾಗೂ ಅನ್ಯಾಯದ ಘಟನೆಗಳನ್ನು ಸ್ಮರಿಸಿದರು.ವಿಭಜನೆಯ ಕರಾಳ ಇತಿಹಾಸವನ್ನು ಮುಂದಿನ ಪೀಳಿಗೆ ಮರೆಯಬಾರದು ಎಂದು ಹೇಳಿದರು.

  ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರು, ಪಕ್ಷದ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

file 000000003f5c8208a0b120fec3430d9d4430922727654202092 ರಿಪ್ಪನ್ ಪೇಟೆಯಲ್ಲಿ ತಿರಂಗಾ ಯಾತ್ರೆ: ದೇಶ ವಿಭಜನೆಯ ಕರಾಳ ದಿನ ಸ್ಮರಿಸಿದ ಬಿಜೆಪಿ

Leave a Reply

Your email address will not be published. Required fields are marked *