ರಿಪ್ಪನ್ ಪೇಟೆ : ಕಾರ್ಮಿಕ ಕಾರ್ಡ್ ಮಾಡಿಸಲು ಹೆಚ್ಚುವರಿ ಹಣ ಪಡೆದ ಆರೋಪ|ಕಾರ್ಮಿಕರಿಂದ ಸುದ್ದಿಗೋಷ್ಠಿ

Addaheading 20260821 181019 0000 ರಿಪ್ಪನ್ ಪೇಟೆ : ಕಾರ್ಮಿಕ ಕಾರ್ಡ್ ಮಾಡಿಸಲು ಹೆಚ್ಚುವರಿ ಹಣ ಪಡೆದ ಆರೋಪ|ಕಾರ್ಮಿಕರಿಂದ ಸುದ್ದಿಗೋಷ್ಠಿ
Spread the love

ರಿಪ್ಪನ್‌ಪೇಟೆ: ಕಾರ್ಮಿಕರ ಕಾರ್ಡ್ ಮಾಡಿಸಿಕೊಡುವುದು ಹಾಗೂ ನವೀಕರಣ ಮಾಡಿಕೊಡುವುದಾಗಿ ನಂಬಿಸಿ ಹಣ ಪಡೆದು, ವರ್ಷಗಳಾದರೂ ಕಾರ್ಡ್ ನೀಡದೆ ಸತಾಯಿಸಲಾಗುತ್ತಿದೆ ಎಂದು ಅಖಿಲ ಕರ್ನಾಟಕ ಕಟ್ಟಡ ಹಾಗೂ ಅಸಂಘಟಿತ ಕಾರ್ಮಿಕರ ಒಕ್ಕೂಟದ ಕೆಲ ಪದಾಧಿಕಾರಿಗಳ ವಿರುದ್ಧ ಕಾರ್ಮಿಕರು ಗಂಭೀರ ಆರೋಪ ಮಾಡಿದ್ದಾರೆ.
   ಪಟ್ಟಣದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾರ್ಮಿಕರು, ಕಾರ್ಡ್‌ಗಾಗಿ ಹಣ ಪಾವತಿಸಿದ ಬಳಿಕವೂ ಹೆಚ್ಚುವರಿ ಹಣ ಬೇಡಿಕೆ ಜೊತೆಗೆ ಯಾವುದೇ ಸ್ಪಷ್ಟ ಮಾಹಿತಿ ನೀಡದೆ ವಿಳಂಬ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾರ್ಮಿಕ ಜನಾರ್ಧನ್ ಮಾತನಾಡಿ , ಹೊಸನಗರ ತಾಲೂಕು ಅಧ್ಯಕ್ಷ ಮೊಹಮ್ಮದ್ ಹುಸೇನ್, ಉಪಾಧ್ಯಕ್ಷ ಶಂಕರಾಚಾರ್ಯ ಸೇರಿದಂತೆ ಹಲವರಿಗೆ ಅನೇಕ ಬಾರಿ ಸಂಪರ್ಕಿಸಲು ಪ್ರಯತ್ನಿಸಿದರೂ ಸಮರ್ಪಕವಾಗಿ ಸ್ಪಂದಿಸಿಲ್ಲ.

ಬಟ್ಟೆ ಮಲ್ಲಪ್ಪ ಮಹೇಶ್ ಮಾತನಾಡಿ,  ₹500ರಿಂದ ₹1,500ರವರೆಗೆ ಹಣ ಪಾವತಿಸಿ 1-2 ವರ್ಷ ಕಳೆದರೂ ನೂತನ ಕಾರ್ಡ್ ಅಥವಾ ನವೀಕರಣಗೊಂಡ ಕಾರ್ಡ್ ಕೈ ಸೇರಿಲ್ಲ , ಬಡ ಕಾರ್ಮಿಕರಿಂದ ಹಣ ಪಡೆದು ಕಾರ್ಡ್ ನೀಡದೆ ವಿಳಂಬ ಮಾಡಿ ವಂಚಿಸುತ್ತಿರುವವರ ಕುರಿತು ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಂಡು ತಮಗೆ ನ್ಯಾಯ ಒದಗಿಸಬೇಕು ಎಂದು ಕಾರ್ಮಿಕರು ಆಗ್ರಹಿಸಿದ್ದಾರೆ.

ಪ್ರವೀಣ್ ಆಚಾರ್ ಮಾತನಾಡಿ, ಕಾರ್ಮಿಕ ಕಾರ್ಡ್ ಮಾಡಿಸಲು ಯಾವುದೇ ಸಂಘಟನೆಯ ಅವಶ್ಯಕತೆ ಇರುವುದಿಲ್ಲ ಸ್ವತಃ ಅವರೇ ಹತ್ತಿರದ ಸೈಬರ್ ನಲ್ಲಿ  ಮಾಡಿಸಿಕೊಳ್ಳಬಹುದು ಇತ್ತೀಚಿನ ದಿನಗಳಲ್ಲಿ ಕೆಲವು ಸಂಘಟನೆಗಳು ನಾವು ಸಹಿ ಹಾಕಿಕೊಟ್ಟರೆ ಮಾತ್ರ ನಿಮಗೆ ಕಾರ್ಡ್ ಸಿಗುವುದು ಎಂದು ದಾರಿ ತಪ್ಪಿಸಲಾಗುತ್ತಿದೆ ಎಂದು ಹೇಳಿದರು.

  ಪತ್ರಿಕಾಗೋಷ್ಠಿಯಲ್ಲಿ ಜನಾರ್ದನ್,ಮಹೇಶ್,ಪ್ರವೀಣ್ ಆಚಾರ್, ಸುದೇಶ್ ಆಚಾರ್ , ಸತ್ಯನಾರಾಯಣ ಆಚಾರ್ ಸೇರಿದಂತೆ ಹಲವು ಕಾರ್ಮಿಕರು ಉಪಸ್ಥಿತರಿದ್ದರು.

file 000000003f5c8208a0b120fec3430d9d1221538337175784636 ರಿಪ್ಪನ್ ಪೇಟೆ : ಕಾರ್ಮಿಕ ಕಾರ್ಡ್ ಮಾಡಿಸಲು ಹೆಚ್ಚುವರಿ ಹಣ ಪಡೆದ ಆರೋಪ|ಕಾರ್ಮಿಕರಿಂದ ಸುದ್ದಿಗೋಷ್ಠಿ

Leave a Reply

Your email address will not be published. Required fields are marked *