ರಿಪ್ಪನ್ ಪೇಟೆ: ಸಿಡಿಲು ಬಡಿದು ಹೊತ್ತಿ ಉರಿದ ತೆಂಗಿನ ಮರ – ತಪ್ಪಿದ ಅನಾಹುತ

Blue and Red Voter Education Banner 20260318 194251 0000 scaled ರಿಪ್ಪನ್ ಪೇಟೆ: ಸಿಡಿಲು ಬಡಿದು ಹೊತ್ತಿ ಉರಿದ ತೆಂಗಿನ ಮರ - ತಪ್ಪಿದ ಅನಾಹುತ
Spread the love

ರಿಪ್ಪನ್ ಪೇಟೆ:ಟ್ಟಣದಲ್ಲಿ ಇಂದು ಸಂಜೆ ಸಂಭವಿಸಿದ ಭಾರಿ ಗಾಳಿ-ಮಳೆ ಹಾಗೂ ಸಿಡಿಲಿನ ಪರಿಣಾಮವಾಗಿ ಶ್ರೀ ರಾಮನಗರದಲ್ಲಿರುವ ಶಿಕ್ಷಕ ಗುರುಮೂರ್ತಿ ಅವರ ಮನೆ ಹಿಂಭಾಗದ ಖಾಲಿ ನಿವೇಶನದಲ್ಲಿದ್ದ ತೆಂಗಿನ ಮರಕ್ಕೆ ಸಿಡಿಲು ಬಡಿದು ಅದು ಹೊತ್ತಿ ಉರಿದ ಘಟನೆ ಆತಂಕಕ್ಕೆ ಕಾರಣವಾಯಿತು.

ಸ್ಥಳೀಯರ ಮಾಹಿತಿ ಪ್ರಕಾರ, ಮಳೆ ಆರಂಭವಾಗುತ್ತಿದ್ದಂತೆ ಗಾಳಿ ತೀವ್ರಗೊಂಡು, ಆಕಸ್ಮಿಕವಾಗಿ ಸಿಡಿಲು ಬಡಿದ ಪರಿಣಾಮ ತೆಂಗಿನ ಮರಕ್ಕೆ ಬೆಂಕಿ ಹೊತ್ತಿಕೊಂಡಿತು. ಕೆಲ ಹೊತ್ತಿನವರೆಗೆ ಮರ ಉರಿದರೂ, ನಂತರ ಮಳೆಯ ಕಾರಣದಿಂದಲೇ ಬೆಂಕಿ ತಾನೇ ನಂದಿತು ಎಂದು ತಿಳಿದುಬಂದಿದೆ. ಅದೃಷ್ಟವಶಾತ್ ಘಟನೆ ನಡೆದ ಸ್ಥಳ ಖಾಲಿ ನಿವೇಶನವಾಗಿದ್ದರಿಂದ ಯಾವುದೇ ಪ್ರಾಣಾಪಾಯ ಅಥವಾ ಆಸ್ತಿ ಹಾನಿ ಸಂಭವಿಸಿಲ್ಲ. ಸಮೀಪದ ಮನೆಗಳಿಗೂ ಯಾವುದೇ ಹಾನಿಯಾಗಿಲ್ಲವೆಂದು ಸ್ಥಳೀಯರು ತಿಳಿಸಿದ್ದಾರೆ.ಘಟನೆ ಬಳಿಕ ಸ್ಥಳೀಯರು ಆತಂಕಗೊಂಡರೂ, ದೊಡ್ಡ ಅನಾಹುತ ತಪ್ಪಿದ ಹಿನ್ನೆಲೆಯಲ್ಲಿ ನಿಟ್ಟುಸಿರು ಬಿಟ್ಟಿದ್ದಾರೆ.

fb img 17738054976607686409675567343445 ರಿಪ್ಪನ್ ಪೇಟೆ: ಸಿಡಿಲು ಬಡಿದು ಹೊತ್ತಿ ಉರಿದ ತೆಂಗಿನ ಮರ - ತಪ್ಪಿದ ಅನಾಹುತ
fb img 17738051899403120091922202376746 ರಿಪ್ಪನ್ ಪೇಟೆ: ಸಿಡಿಲು ಬಡಿದು ಹೊತ್ತಿ ಉರಿದ ತೆಂಗಿನ ಮರ - ತಪ್ಪಿದ ಅನಾಹುತ

Leave a Reply

Your email address will not be published. Required fields are marked *