ಎರಡು ವರ್ಷಗಳ ಅವಧಿಗೆ ನೂತನ ಪದಾಧಿಕಾರಿಗಳ ನೇಮಕ; ಧಾರ್ಮಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಸೇವಾ ಚಟುವಟಿಕೆಗಳಿಗೆ ಒತ್ತು
ಹೊಸನಗರ :ಸಮಾಜದ ಸಂಘಟನೆ, ಸೇವಾಕಾರ್ಯ, ಗೋಸೇವಾ ಕಾರ್ಯ, ವ್ಯಕ್ತಿತ್ವ ವಿಕಸನ ಮೂಲಕ ಸಾರ್ವಜನಿಕರ ಮನ್ನಣೆಗೆ ಪಾತ್ರವಾಗಿರುವ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ಅಖಿಲ ಭಾರತ ಹಿಂದು ಮಹಾಸಭಾ ಹೊಸನಗರ ಘಟಕದ ನೂತನ ಸಂಚಾಲನಾ ಸಮಿತಿಯು ಗುರುವಾರದಂದು ಹೊಸನಗರದ ಶ್ರೀಗಣಪತಿ ದೇವಸ್ಥಾನದ ಲವಿಶಾ ಮಂಟಪದಲ್ಲಿ ಅಸ್ತಿತ್ವಕ್ಕೆ ತರಲಾಯಿತು.
ಗೌರವ ಸಂಚಾಲಕ (ಗೌರವಾಧ್ಯಕ್ಷ) ರಾಗಿ ಶ್ರೀ ಕೆ ಎಸ್ ವಿನಾಯಕ ಶ್ರೇಷ್ಠಿ ,ಪ್ರಧಾನ ಸಂಚಾಲಕ (ಅಧ್ಯಕ್ಷ) ರಾಗಿ ಶ್ರೀ ಗಣೇಶ್ ಮಧುಕರ್,ಕಾರ್ಯ ಸಂಚಾಲಕ (ಕಾರ್ಯದರ್ಶಿ)ರಾಗಿ ಶ್ರೀ ಅನೂಪ್ ಅರವಿಂದ್,ಪ್ರಧಾನ ಕೋಶಾಧಿಕಾರಿಗಳಾಗಿ ಶ್ರೀ ನಾಗರಾಜ್ ಆರ್ (ಗುರೂಜಿ) ಮತ್ತು ಸಾಂಸ್ಕೃತಿಕ ವೇದಿಕೆ ಸಂಚಾಲಕರಾಗಿ ಶ್ರೀ ಮಂಜುನಾಥ್ ಪೂಜಾರಿ ಅವರು ಮುಂದಿನ ಎರಡು ವರ್ಷಗಳಿಗೆ ಸಮಿತಿ ನಿಯುಕ್ತಿ ಮಾಡಲಾಯಿತು.
ಈ ಸಮಯದಲ್ಲಿ ಮಾತನಾಡಿದ ನೂತನ ಗೌರವ ಸಂಚಾಲಕರಾದ ವಿನಾಯಕರವರು ಕೇವಲ ನಮ್ಮ ಕಾಲ ಸಮಯದಲ್ಲಿ ಸಹಕಾರ ಕೊಡದೆ, ಪ್ರತಿ ವರ್ಷವೂ ಈ ಸಮಿತಿ ವಿವಿಧ ಕಾರ್ಯಗಳಿಗೆ ಎಲ್ಲರೂ ಜೋಡಿಸಿಕೊಳ್ಳಬೇಕು. ಸಮಾಜದಲ್ಲಿ ನಮ್ಮ ಸಮಿತಿಯ ಮೇಲೆ ಇರುವ ವಿಶ್ವಾಸವನ್ನು ಇನ್ನಷ್ಟು ವೃದ್ಧಿಸಿಕೊಳ್ಳೋಣ ಎಂದು ಹೇಳಿದರು.

ಪ್ರಧಾನ ಸಂಚಾಲಕ ಗಣೇಶ್ ಮಧುಕರ್ ಮಾತಾನಾಡಿ, ನಮ್ಮ ಸಮಿತಿಯ ಧಾರ್ಮಿಕ,ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಎಲ್ಲ ರಾಜಕೀಯ ಪಕ್ಷದ ಕಾರ್ಯಕರ್ತರು, ಸಮಾಜದ ಎಲ್ಲಾ ಸಮುದಾಯ,ಪಂಥ, ಸಂಪ್ರದಾಯದವರು ಎಲ್ಲರೂ ಸೇರಿಕೊಂಡು ಸಂಘಟಿತ ಸಮಾಜದ ಮೂಲಕ ಸಮರ್ಥ ಹೊಸನಗರವಾಗಲಿ ಎಂದು ಕರೆ ನೀಡಿದರು.
ಕಾರ್ಯ ಸಂಚಾಲಕರಾದ ಅನೂಪ್ ಅರವಿಂದ್ ಅವರು ನೂತನ ಸಮಿತಿ ನಿಯುಕ್ತಿ ಮಾಡಿದ ಎಲ್ಲಾ ಕಾರ್ಯಕರ್ತರು ಮತ್ತು ಸದಸ್ಯರಿಗೆ ಧನ್ಯವಾದ ತಿಳಿಸಿದರು.
ಈ ಸಮಯದಲ್ಲಿ ಸಮಿತಿಯ ರಮೇಶ್ ಹಲಸಿನಕಟ್ಟೆ, ರಾಧಾಕೃಷ್ಣ ಪೂಜಾರಿ,ಸುರೇಂದ್ರ ಕೋಟ್ಯಾನ್,ಆಟೋ ಪ್ರಶಾಂತ್,ಸಂತೋಷ್ ಶ್ರೀನಂದಿ,ಕೆ ವಿನಯ್ ಕುಮಾರ್ ಸಹಿತ ಹಲವು ಕಾರ್ಯಕರ್ತರು ಸದಸ್ಯರು ಉಪಸ್ಥಿತರಿದ್ದರು .ಪ್ರತಿ ಆಯ್ಕೆಯಲ್ಲೂ ಸೂಚಕರು ಮತ್ತು ಅನುಮೋದಕರು ಇದ್ದರು.ಅತ್ಯಂತ ಸರಳವಾಗಿ ಆಯ್ಕೆ ಪ್ರಕ್ರಿಯೆ ನಡೆಯಿತು.















Leave a Reply